


ಕಾರ್ಕಳ ತಾಲ್ಲೂಕು ಬ್ರಾಹ್ಮಣ ಸಂಘ(ರಿ.) ಕಾರ್ಕಳ ಇದರ 40ನೇ ಮಹಾಸಭೆ, ವಾರ್ಷಿಕೋತ್ಸವ ಹಾಗೂ ಬ್ರಾಹ್ಮಣ ಸಮ್ಮೇಳನ ಶ್ರೀ ರಾಧಾಕೃಷ್ಣ ಸಭಾಭವನದಲ್ಲಿ ದಿನಾಂಕ 23.03.2025ರ ರವಿವಾರ ಜರಗಿತು. ಮುಖ್ಯ ಅತಿಥಿಗಳಾಗಿ ಹಿರಿಯ ಸದಸ್ಯರಾದ ಶ್ರೀ ರಾಮ ಭಟ್ಟ ಕೋಟೆ ಉಪಸ್ಥಿತರಿದ್ದರು. ಕುಮಾರಿ ಅದಿತಿ ಕಾರಂತ್ ಪ್ರಾರ್ಥನೆಗೈದರು. ಮುಖ್ಯ ಅಭ್ಯಾಗತರಾದ ರಾಮ ಭಟ್ಟ ಕೋಟೆ ಹಾಗೂ ವೇದಿಕೆಯಲ್ಲಿ ಉಪಸ್ಥಿತರಿದ್ದ ಇತರ ಗಣ್ಯರು ದೀಪ ಬೆಳಗಿಸುವುದರ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಪಾಧ್ಯಕ್ಷರಾದ ರತ್ನಾಕರ ಮರಾಠೆ ನೆರೆದಿದ್ದ ಎಲ್ಲರನ್ನು ಸ್ವಾಗತಿಸಿದರು . ಕಾರ್ಯದರ್ಶಿ ಬಾಲಕೃಷ್ಣ ರಾವ್ ವಾರ್ಷಿಕ ವರದಿಯನ್ನು ಮಂಡಿಸಿದರು ಹಾಗೂ ಖಚಾಂಚಿಗಳಾದ ಕೇಶವ ಮರಾಠೆ ಲೆಕ್ಕಪತ್ರ ಮಂಡಿಸಿದರು ಹಾಗೂ ಇದನ್ನು ಸಭೆಯಲ್ಲಿ ಸರ್ವಾನುಮತದಿಂದ ಅನುಮೋದಿಸಲಾಯಿತು.
ಈ ಕಾರ್ಯಕ್ರಮದಲ್ಲಿ 15ಮಕ್ಕಳಿಗೆ ಕಲಿಕಾ ಪುರಸ್ಕಾರವನ್ನು ಕಾರ್ಯಕ್ರಮದ ಪ್ರಾಯೋಜಕರಾದ ಶ್ರೀ ಜನಾರ್ಧನ್ ಇಡ್ಯಾರವರು ಹಸ್ತಾಂತರಿಸಿದರು .ಹಿರಿಯ ದಂಪತಿ ವಿಭಾಗದಲ್ಲಿ ಜನಾರ್ಧನ ಇಡ್ಯಾ ಹಾಗೂ ಜ್ಯೋತ್ಸ್ನಾ ಇಡ್ಯಾ , ಅಧ್ಯಾಪಕ ವೃತ್ತಿಯಲ್ಲಿ ಗಜಾನನ ಮರಾಠೆ, ಪಾಕಶಾಸ್ತ್ರ ವಿಭಾಗದಲ್ಲಿ ಶ್ರೀ ಸುರೇಶ್ ಮರಾಠೆ , ವೃತ್ತಿ ಸೇವೆಯಲ್ಲಿ ಪ್ರಶಾಂತ ಬೆಳಿರಾಯ , ಕ್ರೀಡೆಯಲ್ಲಿ ಪೆರ್ಡೂರು ಪದ್ಮನಾಭ ಭಂಡಿ, ಸಂಗೀತದಲ್ಲಿ ಕು||ಡಾ ||ಕೌಸ್ತುಭ ರಾವ್, ತಾಳಮದ್ದಳೆಯಲ್ಲಿ ರಾಮ ಭಟ್ಟ ಕೋಟೆ, ಪೌರೋಹಿತ್ಯ ವಿಭಾಗದಲ್ಲಿ ವೆಂಕಟರಾಜ ಜೋಯಿಸ ಹಾಗೂ ವಿಶೇಷ ಸಾಧಕರಾದ ಕು||ಅನ್ವಿತ ಮುಗೆರಾಯ, ಸುಚೇತನ , ಸತೀಶ್ ರಾವ್ ಕರ್ವಾಲು, ಕು||ದೀಪ್ತಿ ವೆಲಂಕರ್, ಕು||ಅದಿತಿ ಕಾರಂತ್ ಹಾಗೂ ಕು||ಸೃಜನ ಚೀಪಲೂಣಕರ್ ಇವರುಗಳನ್ನೂ ಗೌರವಪೂರ್ವಕವಾಗಿ ವೇದಿಕೆಯಲ್ಲಿ ಸನ್ಮಾನಿಸಲಾಯಿತು . ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಕೋಟೆ ರಾಮ ಭಟ್ಟ ಶುಭ ಹಾರೈಸಿದರು ಹಾಗೂ ಬ್ರಾಹ್ಮಣತ್ವದ ಉಳಿವಿನ ಹಾಗೂ ಒಗ್ಗಟ್ಟಿನ ಬಗ್ಗೆ ತಮ್ಮ ಅಭಿಪ್ರಾಯವನ್ನು ವಿಸ್ತಾರವಾಗಿ ಸಭಿಕರಿಗೆ ವಿವರಿಸಿದರು .ಕಾರ್ಕಳ ತಾಲ್ಲೂಕು ಬ್ರಾಹ್ಮಣ ಸಂಘ ಇದರ ಅಧ್ಯಕ್ಷರಾದ ಸೌಜನ್ಯ ಉಪಾಧ್ಯಾಯ ಮಾತನಾಡುತ್ತಾ ಕಾರ್ಕಳ ತಾಲ್ಲೂಕಿನ ಎಲ್ಲಾ ತ್ರಿಮತಸ್ತ ವಿಪ್ರ ಬಂಧುಗಳು ಒಟ್ಟಾಗಿ ಸೇರಿ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಕಾರ್ಕಳ ತಾಲೂಕಿನ ಇತರ ಬ್ರಾಹ್ಮಣ ಸಂಘಟನೆಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಉಪಸ್ಥಿತರಿದ್ದರು .ಕಾರ್ಯದರ್ಶಿ ಬಾಲಕೃಷ್ಣ ರಾವ್ ಧನ್ಯವಾದ ಸಮರ್ಪಿಸಿದರು.
ರಮೇಶ್ ರಾವ್, ಶಾರ್ವರಿ ಉಪಾಧ್ಯಾಯ ಹಾಗೂ ಅನುರಾಧ ಉಡುಪ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 9:30 ರಿಂದ 12:30 ರವರೆಗೆ ಕಾರ್ಕಳ ಟಿ ಎಮ್ ಎ ಪೈ ರೋಟರಿ ಆಸ್ಪತ್ರೆ ವೈದ್ಯರ ತಂಡದಿಂದ ನೆರೆದಿದ್ದ ವಿಪ್ರ ಬಂಧುಗಳಿಗೆ ಉಚಿತ ಅರೋಗ್ಯ ತಪಾಸಣಾ ಶಿಬಿರವನ್ನು ಅಯೋಗಿಸಲಾಗಿತ್ತು, ಹಲವಾರು ವಿಪ್ರರು ಇದರ ಪ್ರಯೋಜನವನ್ನು ಪಡೆದುಕೊಂಡರು ಹಾಗೂ ಬೃಹತ್ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು ಇದರಲ್ಲಿ ಹಲವಾರು ವಿಪ್ರರು ರಕ್ತದಾನ ಮಾಡಿದರು. ಬೆಳಿಗ್ಗೆ 9:45 ಕ್ಕೆ ಅನುರಾಧ ಉಡುಪ ಇವರ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು, ಇದರಲ್ಲಿ ಕೌಸ್ತುಭ ರಾವ್ ವೀಣಾವಾದನ, ಶ್ರೀಕರ ನಾರಾಯಣ ವೇಣುವಾದನ ಹಾಗೂ ಅನ್ವಿತ ಮುಗೆರಾಯ ಭರತನಾಟ್ಯ ಪ್ರದರ್ಶನ ಮಾಡಿದರು. ರಾಷ್ಟ್ರಗೀತೆಯೊಂದಿಗೆ ಸಭಾ ಕಾರ್ಯಕ್ರಮ ಮುಕ್ತಾಯಗೊಂಡಿತು. ಭೋಜನದ ನಂತರ ಉಡುಪಿ ಜಿಲ್ಲಾ ಯುವ ವಿಪ್ರ ವೇದಿಕೆ, ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಹಾಗೂ ಕಾರ್ಕಳ ತಾಲೂಕು ಬ್ರಾಹ್ಮಣ ಸಂಘ ಹಾಗೂ ಮಹಿಳಾ ಘಟಕ ಇದರ ಜಂಟಿ ಪ್ರಾಯೋಜಿಕತ್ವದಲ್ಲಿ ವಿಪ್ರ ಸರಿಗಮಪ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು ಈ ಕಾರ್ಯಕ್ರಮದಲ್ಲಿ 40 ವಿಪ್ರರು ಭಾಗವಹಿಸಿದರು ಹಾಗೂ ವಿಜೇತರಿಗೆ ಪ್ರಶಸ್ತಿ ಪತ್ರಗಳನ್ನು ಹಸ್ತಾಂತರಿಸಲಾಯಿತು.