
ಕಾರ್ಕಳ: ಕಾರ್ಕಳ ತಾಲೂಕು ಮಟ್ಟದ ಪ್ರಾಥಮಿಕ ವಿಭಾಗದ ಬಾಲ್ – ಬ್ಯಾಡ್ಮಿಂಟನ್ ಪಂದ್ಯಾಟ ದಲ್ಲಿ ಎಸ್.ವಿ.ಟಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕಾರ್ಕಳ. ಇಲ್ಲಿನ ಬಾಲಕರ ತಂಡವು ದ್ವಿತೀಯ ಸ್ಥಾನಗಳಿಸಿ, ಸಾಕ್ಷಿತ್, ಧನುಷ್ ಆಚಾರ್ಯ, ರತನ್ ಬಿ.ಜಿ, ಮೊಹಮ್ಮದ್ ಇಮಾಝ್, ಮಾಲಿಂಗರಾಯ ಯಲ್ಲಪ್ಪ ರಾಜೂರ ಇವರು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಕ್ರೀಡಾ ಪಟುಗಳಿಗೆ ಎಸ್.ವಿ.ಟಿ ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಪ್ರಿಯಾ ಪ್ರಭು, ಕೋಚ್ ಕೀರ್ತನ್ ತರಬೇತಿ ನೀಡಿರುತ್ತಾರೆ.
ಸಾಧನೆಗೈದ ವಿದ್ಯಾರ್ಥಿಗಳನ್ನು ಶಾಲೆಯ ಆಡಳಿತ ಮಂಡಳಿ, ಶಾಲಾ ಮುಖ್ಯೋಪಾಧ್ಯಾಯರು, ಹಾಗು ಶಿಕ್ಷಕ ವೃಂದದವರು ಅಭಿನಂದಿಸಿರುತ್ತಾರೆ.