
ಕಾರ್ಕಳ: ಪ್ರಿಂಟಿಂಗ್ ಕ್ಷೇತ್ರದಲ್ಲಿ ತನ್ನ ವಿಶಿಷ್ಟ ಸೇವೆಯಿಂದ ಗ್ರಾಹಕರ ಮೆಚ್ಚುಗೆ ಗಳಿಸಿರುವ ಕಾರ್ಕಳ ಜೋಡುರಸ್ತೆಯಲ್ಲಿರುವ ಎನ್ ಪಿ ಪ್ರಿಂಟಿಂಗ್ ಸೊಲ್ಯೂಷನ್ಸ್, ಇದೀಗ ಯಶಸ್ವಿಯಾಗಿ ಎರಡು ವರ್ಷಗಳನ್ನು ಪೂರೈಸಿದೆ. ಎನ್ ಪಿ ಗ್ರೂಪ್ಸ್‌ನ ಅಂಗಸಂಸ್ಥೆಯಾಗಿರುವ ಈ ಸಂಸ್ಥೆಯು ಕಳೆದ ಎರಡು ವರ್ಷಗಳಿಂದ ಜೋಡುರಸ್ತೆಯಲ್ಲಿ ಪ್ರಿಂಟಿಂಗ್ ಗೆ ಸಂಬಂಧ ಪಟ್ಟ ಎಲ್ಲಾ ರೀತಿಯ ಸೇವೆಗಳನ್ನು ಉತ್ತಮ ಗುಣಮಟ್ಟದಲ್ಲಿ ಒದಗಿಸುತ್ತಿದೆ.
ಈ ಶುಭ ಸಂದರ್ಭದಲ್ಲಿ ಎರಡು ವರ್ಷಗಳ ಪಯಣದಲ್ಲಿ ಸಹಕರಿಸಿದ ಎಲ್ಲಾ ಗ್ರಾಹಕರಿಗೆ , ಸಿಬ್ಬಂದಿಗಳಿಗೆ ಮತ್ತು ಹಿತೈಷಿಗಳಿಗೆ ಎನ್ ಪಿ ಗ್ರೂಪ್ಸ್‌ನ ಚೇರ್ ಮ್ಯಾನ್ & ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಶ್ರೀ ವಾಸುದೇವ ಭಟ್ ರವರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಅಲ್ಲದೇ , ಮುಂದೆಯೂ ಇದೇ ರೀತಿಯ ಸಹಕಾರವನ್ನು ನೀಡಿ ಸಂಸ್ಥೆಯು ಮತ್ತಷ್ಟು ಬೆಳೆಯಲು ಸಹಕರಿಸುವಂತೆ ಕೋರಿದ್ದಾರೆ.
































