spot_img

ಕಾರ್ಕಳ: ಬೂತ್ ಅಧ್ಯಕ್ಷರುಗಳು ಮತ್ತು ಯುವ ಪದಾಧಿಕಾರಿಗಳಿಗೆ ‘ನವ ಸಂಕಲ್ಪ’ ಕಾರ್ಯಾಗಾರ ಯಶಸ್ವಿ

Date:

spot_img
spot_img

ಕಾರ್ಕಳ: ಕಾರ್ಕಳ ಬ್ಲಾಕ್ ಕಾಂಗ್ರೆಸ್ ಸಮಿತಿ ಮತ್ತು ಯುವ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಬೂತ್ ಅಧ್ಯಕ್ಷರುಗಳು ಹಾಗೂ ಯುವ ಕಾಂಗ್ರೆಸ್ ಪದಾಧಿಕಾರಿಗಳಿಗೆ “ನವ-ಸಂಕಲ್ಪ” ಕಾರ್ಯಾಗಾರವು ಭಾನುವಾರ ಹೊಟೇಲ್ ಮಯೂರ ಸಭಾಂಗಣದಲ್ಲಿ ನಡೆಯಿತು.

ಸೈನಿಕರಂತೆ ಕೆಲಸ ಮಾಡಿ: ಕಾರ್ಯಾಗಾರದಲ್ಲಿ ಪಾಲ್ಗೊಂಡ ಕಾರ್ಕಳ ಕಾಂಗ್ರೆಸ್ ನಾಯಕರಾದ ಉದಯ ಶೆಟ್ಟಿ ಮುನಿಯಾಲು ಮಾತನಾಡಿ, ಬೂತ್ ಮಟ್ಟದಲ್ಲಿ ಅಧ್ಯಕ್ಷರುಗಳು ಕಾಂಗ್ರೆಸ್ ಪಕ್ಷದ ಸೈನಿಕರಂತೆ ಕೆಲಸ ಮಾಡಿದಾಗ ಮಾತ್ರ ಪಕ್ಷವು ತಳಮಟ್ಟದಲ್ಲಿ ಸದೃಢವಾಗಲು ಸಾಧ್ಯ ಎಂದರು.

ಸಂಘಟನೆ ಅನಿವಾರ್ಯ: ಹಿರಿಯ ಕಾಂಗ್ರೆಸ್ ನಾಯಕ ಶೇಖರ ಮಡಿವಾಳ ಮಾತನಾಡಿ, ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತವನ್ನು ಅರಿತುಕೊಳ್ಳಲು ಇಂತಹ ಕಾರ್ಯಾಗಾರಗಳನ್ನು ಸಂಘಟಿಸುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಮಹತ್ತರವಾದ ಹೆಜ್ಜೆಯಿಟ್ಟಿರುವುದು ಶ್ಲಾಘನೀಯ ಎಂದು ನುಡಿದರು.

ಜವಾಬ್ದಾರಿ ಅರಿತು ಕೆಲಸ ಮಾಡಿ: ಬ್ಲಾಕ್ ಅಧ್ಯಕ್ಷರಾದ ಶುಭದ್ ರಾವ್ ಮಾತನಾಡಿ, ಬ್ಲಾಕ್ ಮಟ್ಟದಲ್ಲಿ ಪಕ್ಷದ ಪರವಾಗಿ ಹಲವಾರು ಹೋರಾಟಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಗ್ರಾಮೀಣ ಭಾಗಗಳಲ್ಲಿ ಬೂತ್ ಅಧ್ಯಕ್ಷರುಗಳ ಕಾರ್ಯ ಕ್ಷಮತೆಯನ್ನು ಇನ್ನಷ್ಟು ಹೆಚ್ಚಿಸಲು ಈ ಕಾರ್ಯಾಗಾರ ಸಹಕಾರಿಯಾಗಿದೆ. ಪ್ರತಿಯೊಬ್ಬ ಪದಾಧಿಕಾರಿಯೂ ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಪಕ್ಷ ಸಂಘಟನೆಯ ಕೆಲಸವನ್ನು ಮಾಡಬೇಕು ಎಂದು ಕರೆ ನೀಡಿದರು. ಅವರು ಸೌಹಾರ್ದ ಗೀತೆಯನ್ನು ಹಾಡಿ ಶಿಬಿರಾರ್ಥಿಗಳನ್ನು ಹುರಿದುಂಬಿಸಿದರು.

ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ: ಕೆಪಿಸಿಸಿ ಸಾಮಾಜಿಕ ಜಾಲತಾಣದ ರಾಜ್ಯ ಉಪಾಧ್ಯಕ್ಷರಾದ ಚಂದ್ರಶೇಖರ ಶೆಟ್ಟಿಯವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಸಾಮಾಜಿಕ ಜಾಲತಾಣದ ಉಪಯೋಗದ ಬಗ್ಗೆ ತಿಳಿಸಿಕೊಟ್ಟರು. ಇನ್ನೋರ್ವ ಸಂಪನ್ಮೂಲ ವ್ಯಕ್ತಿ, ರಾಷ್ಟ್ರೀಯ ತರಬೇತುದಾರ ಸುಧಾಕರ ಪೂಜಾರಿಯವರು ನಾಯಕತ್ವದ ಬಗ್ಗೆ ತರಬೇತಿ ಹಾಗೂ ಚಟುವಟಿಕೆಗಳನ್ನು ಮಾಡಿ ಕಾರ್ಯಾಗಾರ ನಡೆಸಿಕೊಟ್ಟರು.

ಉಪಸ್ಥಿತಿ: ಕಾರ್ಯಾಗಾರದಲ್ಲಿ ಹೆಬ್ರಿ ಬ್ಲಾಕ್ ಅಧ್ಯಕ್ಷ ಗೋಪಿನಾಥ್ ಭಟ್, ಮಾಜಿ ಅಧ್ಯಕ್ಷರಾದ ಸದಾಶಿವ ದೇವಾಡಿಗ, ಗ್ಯಾರಂಟಿ ಸಮಿತಿ ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಸೂರಜ್ ಶೆಟ್ಟಿ, ಮಲ್ಲಿಕ್ ಅತ್ತೂರು, ಪ್ರಚಾರ ಸಮಿತಿಯ ಸುಪ್ರಿತ್ ಶೆಟ್ಟಿ, ದಿನಕರ್ ಶೆಟ್ಟಿ, ಕೆ.ಎಂ.ಎಫ್. ನಿರ್ದೇಶಕ ಸುಧಾಕರ್ ಶೆಟ್ಟಿ ಸೇರಿದಂತೆ ಬ್ಲಾಕ್ ಪದಾಧಿಕಾರಿಗಳು, ಮುಂಚೂಣಿ ಘಟಕಗಳ ಪದಾಧಿಕಾರಿಗಳು, ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರು ಮತ್ತು ಬೂತ್ ಅಧ್ಯಕ್ಷರುಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರ್ವಹಣೆ: ಬ್ಲಾಕ್ ವಕ್ತಾರ ಪ್ರದೀಪ್ ಬೇಲಾಡಿ ಕಾರ್ಯಕ್ರಮ ನಿರೂಪಿಸಿದರು, ಮಂಜುನಾಥ್ ಜೋಗಿ ಸ್ವಾಗತಿಸಿ ಯೋಗೀಶ್ ಇನ್ನಾ ಧನ್ಯವಾದವಿತ್ತರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ಧನತ್ರಯೋದಶಿ

ದೀಪಾವಳಿ ಹಬ್ಬದ ಮೊದಲ ದಿನವಾದ ಧನತ್ರಯೋದಶಿ (ಧನತೇರಸ್‌) ಯನ್ನು, ಆಶ್ವಯುಜ ಮಾಸದ ಕೃಷ್ಣ ಪಕ್ಷದ 13ನೇ ದಿನದಂದು ಸಂಭ್ರಮದಿಂದ ಆಚರಿಸಲಾಗುತ್ತದೆ

ಸೀರೆಯ ಸೌಂದರ್ಯಕ್ಕೆ ಆಕಾರ ಮುಖ್ಯವಲ್ಲ: ಮಹಿಳೆಯರಿಗಾಗಿ ಸೀರೆಯ ವಿನ್ಯಾಸ ಮತ್ತು ಶೈಲಿಯ ವಿಶೇಷ ಮಾರ್ಗದರ್ಶಿ

ದೇಹದ ಗಾತ್ರ ಎಷ್ಟೇ ಇದ್ದರೂ, ಸರಿಯಾದ ಆಯ್ಕೆ ಮತ್ತು ಡ್ರೇಪಿಂಗ್ ತಂತ್ರಗಳಿಂದ ಪ್ರತಿ ಪ್ಲಸ್ ಸೈಜ್ ಮಹಿಳೆಯೂ ಸೀರೆಯಯಲ್ಲಿ ವಿಶ್ವಾಸ ಮತ್ತು ಆಕರ್ಷಣೆಯಿಂದ ಮಿಂಚಬಹುದು

ಶಿವಮೊಗ್ಗ: ಧರ್ಮಸ್ಥಳ ಪ್ರಕರಣ; ಆರೋಪಿ ಚಿನ್ನಯ್ಯನ ವಿಚಾರಣೆ ಮತ್ತೆ ಆರಂಭ

ಧರ್ಮಸ್ಥಳ ಪರಿಸರದಲ್ಲಿ ನಡೆದಿದೆ ಎನ್ನಲಾದ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (ಎಸ್ಐಟಿ) ಅಧಿಕಾರಿಗಳು, ಪ್ರಮುಖ ಆರೋಪಿ ಚಿನ್ನಯ್ಯನನ್ನು ವಿಚಾರಣೆಗೊಳಪಡಿಸಲು ಶಿವಮೊಗ್ಗಕ್ಕೆ ಆಗಮಿಸಿದ್ದಾರೆ.

‘ಹಿಂದೂ ಹುಡುಗಿಯರು ಜಿಮ್‌ಗೆ ಹೋಗಬಾರದು ಬಿಜೆಪಿ ಶಾಸಕರಿಂದ ವಿವಾದಾತ್ಮಕ ಹೇಳಿಕೆ

ಮಹಾರಾಷ್ಟ್ರದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕರಾದ ಗೋಪಿಚಂದ್ ಪಡಲ್ಕರ್ ಅವರು ಹಿಂದೂ ಸಮುದಾಯದ ಯುವತಿಯರ ಕುರಿತು ನೀಡಿರುವ ಹೇಳಿಕೆಯೊಂದು ತೀವ್ರ ವಿವಾದಕ್ಕೆ ಕಾರಣವಾಗಿದೆ