spot_img

ಸ್ಕೂಟಿ ಅಪಘಾತ: ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಮೃತ

Date:

ಕಾರ್ಕಳ: ಹುಟ್ಟುಹಬ್ಬದ ಸಂಭ್ರಮದಲ್ಲಿ ಮಗುವಿಗೆ ಐಸ್ ಕ್ರೀಂ ತರಲು ಹೊರಟಿದ್ದ ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷನೊಬ್ಬ, ಸ್ಕೂಟಿಯು ನಿಯಂತ್ರಣ ತಪ್ಪಿ ಸೇತುವೆಯಿಂದ ಹೊಳೆಗೆ ಬಿದ್ದು ದುರ್ಘಟನೆಯಲ್ಲಿ ಮೃತಪಟ್ಟ ದುಃಖದ ಘಟನೆ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಪರಪುವಿನಲ್ಲಿ ಜೂನ್ 7ರ ರಾತ್ರಿ ಸಂಭವಿಸಿದೆ.ಮೃತಪಟ್ಟವರು ಕುಕ್ಕುಂದೂರು ಗ್ರಾಮದ ಪರಪುವಿನ ನಿವಾಸಿ ಸುಬ್ರಹ್ಮಣ್ಯ ಸಾಲ್ಯಾನ್ (ವಯಸ್ಸು 36), ಆಟೋ ಚಾಲಕರಾಗಿದ್ದು, ಕುಕ್ಕುಂದೂರು ಬಿಜೆಪಿ ಗ್ರಾಮ ಸಮಿತಿಯ ಅಧ್ಯಕ್ಷರಾಗಿದ್ದರು.

ಶನಿವಾರ ರಾತ್ರಿ ಸುಮಾರು 10:30ರ ವೇಳೆಗೆ ಸುಬ್ರಹ್ಮಣ್ಯ ಅವರು ತಮ್ಮ ಮಗುವಿಗೆ ಐಸ್ ಕ್ರೀಂ ತರಲು ಪೇಟೆಗೆ ತೆರಳಿದ್ದರು. ವಾಪಸ್ ಮನೆಗೆ ಸ್ಕೂಟಿಯಲ್ಲಿ ಮರಳುವ ವೇಳೆ ಪರಪು ಸೇತುವೆ ಬಳಿ ಅವರ ವಾಹನ ನಿಯಂತ್ರಣ ತಪ್ಪಿ ಹೊಳೆಯಲ್ಲಿ ಬಿದ್ದಿದೆ ಎಂದು ಶಂಕಿಸಲಾಗಿದೆ. ರಾತ್ರಿಯಿಡೀ ಹತ್ತಿರದವರು ಹುಡುಕಾಟ ನಡೆಸಿದರೂ ಸುಬ್ರಹ್ಮಣ್ಯ ಅವರ ಸುಳಿವು ಸಿಕ್ಕಿರಲಿಲ್ಲ.

ಜೂನ್ 8ರಂದು ಬೆಳಿಗ್ಗೆ ಗ್ರಾಮಸ್ಥರು ಹುಡುಕಾಟ ನಡೆಸಿದ ವೇಳೆ, ಸೇತುವೆಯಡಿ ಸ್ಕೂಟಿಯೊಂದಿಗೆ ಮೃತದೇಹ ಪತ್ತೆಯಾಯಿತು. ಘಟನೆಯ ಸ್ಥಳ ಪರಿಶೀಲಿಸಿದ ಸ್ಥಳೀಯರು, ಹೊಳೆಯಲ್ಲಿ ನೀರಿನ ಆಳತೆ ಕಡಿಮೆಯಾಗಿದ್ದರಿಂದ ಅಪಘಾತದ ಹಿಂದಿರುವ ಸಾಧ್ಯತೆಯಾಗಿ ಹೃದಯಾಘಾತವನ್ನು ಶಂಕಿಸುತ್ತಿದ್ದಾರೆ.

ಮೃತರು ತಂದೆ ಕೃಷ್ಣ ಸಾಲ್ಯಾನ್, ತಾಯಿ ಕೌಶಲ್ಯ, ತಂಗಿ ಆಶಾ, ಪತ್ನಿ ಮನಿಶಾ ಹಾಗೂ ಪುಟ್ಟಮಗಳಾದ ತಸ್ಮಯಿಯನ್ನು ಅಗಲಿದ್ದಾರೆ. ಸಮಾಜ ಸೇವೆಯಲ್ಲಿ ಚುರುಕಾಗಿ ತೊಡಗಿಸಿಕೊಂಡಿದ್ದ ಅವರು, ತಮ್ಮ ಜನ್ಮದಿನದಂದು ಇಂತಹ ದುರ್ಘಟನೆಗೆ ಒಳಗಾಗಿರುವುದು ದುಃಖದ ಪರಿಸ್ಥಿತಿಯಾಗಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಕಾರ್ಕಳ ಪರಶುರಾಮ ಪ್ರತಿಮೆ ವಿವಾದ: ಸರ್ಕಾರಕ್ಕೆ ಹೈಕೋರ್ಟ್‌ನಿಂದ ಕಾನೂನು ಹೋರಾಟದ ನೋಟಿಸ್

ಅರ್ಜಿದಾರರಾದ ಉದಯ ಶೆಟ್ಟಿ ಅವರು ರೂ. 5 ಲಕ್ಷ ಮೊತ್ತವನ್ನು ಹೈಕೋರ್ಟ್ ರಿಜಿಸ್ಟ್ರಿಯಲ್ಲಿ ಠೇವಣಿ ಇರಿಸಿದ ನಂತರ, ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ದಿನ ವಿಶೇಷ – ವಿಶ್ವ ಆತ್ಮಹತ್ಯಾ ನಿರೋಧ ದಿನ

ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ಅಂತರರಾಷ್ಟ್ರೀಯ ಆತ್ಮಹತ್ಯಾ ನಿರೋಧ ಸಂಘಟನೆಯ (IASP) ಜಂಟಿ ಉದ್ದೇಶದೊಂದಿಗೆ ಪ್ರತಿ ವರ್ಷ ಸೆಪ್ಟೆಂಬರ್ 10 ರಂದು ಈ ದಿನವನ್ನು ಆಚರಿಸಲಾಗುತ್ತದೆ.

ಆಪಲ್‌ನಿಂದ ಐಫೋನ್ ಲೋಕಕ್ಕೆ ಹೊಸ ಸ್ಪರ್ಧಿ: ಅತಿ ತೆಳುವಾದ ‘ಐಫೋನ್ ಏರ್’ ಅನಾವರಣ!

ಅತಿ ತೆಳುವಾದ ಐಫೋನ್ 'ಏರ್' ಮಾದರಿ, ಹೊಸ ವೈಶಿಷ್ಟ್ಯಗಳೊಂದಿಗೆ ಐಫೋನ್ 17, ಸುಧಾರಿತ ಏರ್‌ಪಾಡ್ಸ್ ಪ್ರೊ 3 ಮತ್ತು ರಕ್ತದೊತ್ತಡ ಮಾನಿಟರ್ ಹೊಂದಿರುವ ಆಪಲ್ ವಾಚ್.

ಭಾರತದ ನೂತನ ಉಪರಾಷ್ಟ್ರಪತಿಯಾಗಿ ಸಿ.ಪಿ. ರಾಧಾಕೃಷ್ಣನ್ ಆಯ್ಕೆ

ಭಾರತದ 17ನೇ ಉಪರಾಷ್ಟ್ರಪತಿಯಾಗಿ ಮಹಾರಾಷ್ಟ್ರದ ಹಾಲಿ ರಾಜ್ಯಪಾಲ ಮತ್ತು ಎನ್‌ಡಿಎ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಅವರು ಆಯ್ಕೆಯಾಗಿದ್ದಾರೆ.