spot_img

ಕಾರ್ಕಳದ ಬೈಲೂರಿನಲ್ಲಿ ಕಾಂಗ್ರೆಸ್ ಜನಸೇವಾ ಕಚೇರಿಯ ಉದ್ಘಾಟನಾ ಸಮಾರಂಭ

Date:

spot_img

ಕಾರ್ಕಳ (ಬೈಲೂರು): ರಾಜ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಸಹಾಯಕವಾಗುವಂತೆ ಮತ್ತು ಜನಸೇವೆಗೆ ಪೂರಕವಾಗುವಂತೆ ಕಾರ್ಕಳದ ಬೈಲೂರಿನ ಪರಶುರಾಮ ಥೀಮ್ ಪಾರ್ಕ್ ಬಳಿಯಲ್ಲಿರುವ ಮನೀಶ್ ಕಾಂಪ್ಲೆಕ್ಸ್,ನಲ್ಲಿ “ಕಾಂಗ್ರೆಸ್ ಜನಸೇವಾ ಕಚೇರಿ” ಉದ್ಘಾಟನೆಗೊಂಡಿತು.

ಕಚೇರಿ ಉದ್ಘಾಟಿಸಿ ಮಾತನಾಡಿದ ಕಾರ್ಕಳ ಕಾಂಗ್ರೆಸ್ ನಾಯಕರಾದ ಉದಯಶೆಟ್ಟಿ ಮುನಿಯಾಲು ರವರು ಕಾಂಗ್ರೆಸ್ ಜನಸೇವಾ ಕಚೇರಿಯು ಜನ ಸೇವೆಯೇ ಜನಾರ್ಧನ ಸೇವೆ ಎನ್ನುವ ಧ್ಯೇಯದೊಂದಿಗೆ ಬೈಲೂರು ಭಾಗದ ಜನತೆಯ ಸಮಸ್ಯೆಗಳಿಗೆ ಸ್ಪಂದಿಸುವಂತಾಗಲಿ ಎಂದು ಹಾರೈಸಿದರು. ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದ್ ರಾವ್ ನೂತನ ಕಾರ್ಯಾಲಯಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ‌ಸಮಿತಿ ಅಧ್ಯಕ್ಷರಾದ ಅಜಿತ್ ಹೆಗ್ಡೆ, ಹಿರ್ಗಾನ ಸೊಸೈಟಿ ಅಧ್ಯಕ್ಷರಾದ ಸಿರಿಯಣ್ಣ ಶೆಟ್ಟಿ, ಹೆಬ್ರಿ ಬ್ಲಾಕ್ ಅಧ್ಯಕ್ಷರಾದ ಗೋಪಿನಾಥ್ ಭಟ್, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಕರುಣಾಕರ ಹೆಗ್ಡೆ, ಬೈಲೂರು ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಉದಯ್ ಶೆಟ್ಟಿ, ನೀರೆ ಗ್ರಾಮೀಣ ಅಧ್ಯಕ್ಷರಾದ ಪ್ರಸನ್ನ ಆಚಾರ್ಯ, ಎರ್ಲಪಾಡಿ ಗ್ರಾಮೀಣ ಅಧ್ಯಕ್ಷರಾದ ಸಚ್ಚಿನ್ ಶೆಟ್ಟಿ, ಸಾಣೂರು ಗ್ರಾಮೀಣ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಸೂರಜ್ ಶೆಟ್ಟಿ ನಕ್ರೆ,ಹಿರಿಯ ಕಾಂಗ್ರೆಸ್ ಮುಖಂಡರಾದ ಬೋಜ ಶೆಟ್ಟಿ,ಮಹಿಳಾ ಕಾಂಗ್ರೆಸ್ ಅದ್ಯಕ್ಷೆ ಭಾನು ಭಾಸ್ಕರ್, ಅನಿಲ್ ನೆಲ್ಲಿಗುಡ್ಡೆ, ಕೆ.ಎಂ.ಎಫ್ ಸುಧಾಕರ್ ಶೆಟ್ಟಿ ಅಬ್ದುಲ್ಲಾ ಸಾಣೂರು, ರೀನಾ, ಪಕ್ಷದ ವಿವಿಧ ಘಟಕದ ಪದಾಧಿಕಾರಿಗಳು, ಉಪಸ್ಥಿತರಿದ್ದರು, ವಿದ್ಯಾರ್ಥಿ ಮುಖಂಡ ಕನಿಷ್ಕ್ ಸ್ವಾಗತಿಸಿದರು, ಆಶಾ ಶೆಟ್ಟಿ ಧನ್ಯವಾದವಿತ್ತರು.ನಿತೀಶ್ ಕರ್ಕೇರ ಕಾರ್ಯಕ್ರಮವನ್ನು ನಿರ್ವಹಿಸಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಹಿರ್ಗಾನ ಸಂತ ಮರಿಯ ಗೊರೆಟ್ಟಿ ಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ: ಸದೃಢ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳಿಗೆ ಕರೆ

ಬೈಲೂರು ವಲಯದ ಹಿರ್ಗಾನ ಕಾರ್ಯಕ್ಷೇತ್ರದ ಸಂತ ಮರಿಯ ಗೊರೆಟ್ಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಗಳ ಜಂಟಿ ಆಶ್ರಯದಲ್ಲಿ "ಸ್ವಾಸ್ಥ್ಯ ಸಂಕಲ್ಪ" ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು

ಧಾರ್ಮಿಕ ಸೌಹಾರ್ದಕ್ಕೆ ಬೈಲೂರು ಮಾದರಿ: ಭಜನಾ ಪರಿಕರ ವಿತರಣಾ ಸಮಾರಂಭಕ್ಕೆ ಸಿದ್ಧತೆ

ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಗಳಲ್ಲಿ ಸಕ್ರಿಯವಾಗಿರುವ ಭಜನಾ ಮಂಡಳಿಗಳಿಗೆ ಉತ್ತೇಜನ ನೀಡುವ ದೃಷ್ಟಿಯಿಂದ, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್, ಭಜನಾ ಮಂಡಳಿಗಳ ಒಕ್ಕೂಟ ಹಾಗೂ ಕರಾವಳಿ ಭಜನಾ ಸಂಸ್ಕಾರ ವೇದಿಕೆ

ಮೈಕ್ರೋಸಾಫ್ಟ್ ಶೇರ್‌ಪಾಯಿಂಟ್‌ಗೆ ಸೈಬರ್ ದಾಳಿ: ರಾಷ್ಟ್ರ-ಪ್ರಾಯೋಜಿತ ಹ್ಯಾಕರ್‌ಗಳಿಂದ ಸೂಕ್ಷ್ಮ ಡೇಟಾ ಸೋರಿಕೆ!

ಮೈಕ್ರೋಸಾಫ್ಟ್‌ನ ಶೇರ್‌ಪಾಯಿಂಟ್ ಪ್ಲಾಟ್‌ಫಾರ್ಮ್ ಮೇಲೆ ಇತ್ತೀಚೆಗೆ ಪ್ರಮುಖ ಭದ್ರತಾ ಘಟನೆಯೊಂದು ಪರಿಣಾಮ ಬೀರಿದೆ.

ಜು.28ರ ‘ಏಕ ವಿನ್ಯಾಸ’ ಸಮಸ್ಯೆ ವಿರುದ್ಧ ಬಿಜೆಪಿ ಪ್ರತಿಭಟನೆ ಯಶಸ್ವಿಗೊಳಿಸಲು ಕುತ್ಯಾರು ಕರೆ

ಜಿಲ್ಲೆಯ ಸಂಸದರು, ಶಾಸಕರು, ಪಕ್ಷದ ಪ್ರಮುಖರು ಪಾಲ್ಗೊಳ್ಳುವ ಈ ಪ್ರತಿಭಟನೆಯನ್ನು ಪಕ್ಷದ ಎಲ್ಲಾ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಕಾರ್ಯಕರ್ತರು ಹಾಗೂ ಸದ್ರಿ ಸಮಸ್ಯೆಯನ್ನು ಎದುರಿಸುತ್ತಿರುವ ಸಾರ್ವಜನಿಕರು ಸೇರಿ ಯಶಸ್ವಿಗೊಳಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಕರೆ ನೀಡಿದರು.