ಸಂಬಳ ಬಿಡುಗಡೆಯಲ್ಲೂ ಕ್ರೆಡಿಟ್ ವಾರ್: ಸುನಿಲ್ ಕುಮಾರ್ ಗಿಮಿಕ್ ಬಿಟ್ಟು ಅಭಿವೃದ್ಧಿ ಕಡೆ ನೋಡಲಿ ಎಂದ ಭಾನು ಭಾಸ್ಕರ.

Date:

spot_img

ಭಾರತದ ಪ್ರತಿ ಹಳ್ಳಿಯ ಮಹಿಳೆಯರ ಮತ್ತು ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ, ಮಹಿಳೆಯರ ಮೇಲಿನ ಕಾಳಜಿಯಿಂದ ಕೇಂದ್ರ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ 2005 ಇಸವಿಯಲ್ಲಿ ಆಶಾ ಕಾರ್ಯಕರ್ತೆಯರ ಹುದ್ದೆಯನ್ನು ಹುಟ್ಟುಹಾಕಿತು.


2005 ರಿಂದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಭಾಗವಾಗಿ ಆರೋಗ್ಯ ಸೇವೆಗಳನ್ನು ಗ್ರಾಮೀಣ ಭಾಗಗಳ ಜನರಿಗೆ ತಲುಪಿಸುವ ಕೊಂಡಿಯಾಗಿ ಆಶಾ ಕಾರ್ಯರ್ತೆಯರು ದೇಶದಾದ್ಯಂತ ಕಾರ್ಯನಿರ್ವಹಿಸುತ್ತಿದ್ದಾರೆ, ಅವರಿಗೆ ಸರ್ಕಾರಗಳು ವೇತನವನ್ನು ನೀಡುತ್ತಿದ್ದು ಅಲ್ಪ ಸಮಯದ ವಿಳಂಬ ಆಗುವುದು ಸಹಜ, ಸಹಜ ಪ್ರಕ್ರಿಯೆಯಂತೆ ಆಶಾ ಕಾರ್ಯಕರ್ತರಿಗೆ ಈ ಬಾರಿಯೂ ಸರ್ಕಾರವು ವೇತನವನ್ನು ನೀಡಿರುತ್ತದೆ ಇದರಲ್ಲಿ ಕಾರ್ಕಳ ಶಾಸಕರ ಯಾವುದೇ ಪಾತ್ರ ಇಲ್ಲ ಇದೊಂದು ನೌಕರರಿಗೆ ವೇತನ ನೀಡುವ ಸರ್ಕಾರದ ಸಹಜ ಪ್ರಕ್ರಿಯೆ ಎಂದು ಕಾರ್ಕಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಭಾನು ಭಾಸ್ಕರ ಪೂಜಾರಿ ಹೇಳಿದ್ದಾರೆ.

ಡಾ. ಮನಮೋಹನ ಸಿಂಗ್ ನೇತೃತ್ವದ ಅಂದಿನ ಕಾಂಗ್ರೆಸ್ ಸರ್ಕಾರದ ದೂರದೃಷ್ಟಿತ್ವದ ಯೋಜನೆಯ ಕಾರಣದಿಂದಾಗಿ ಹಳ್ಳಿಗಳೇ ಹೆಚ್ಚಿರುವ ಭಾರತದ ದೇಶದಲ್ಲಿ ಮಹಿಳೆಯರ ಮತ್ತು ಮಕ್ಕಳ ಆರೋಗ್ಯ ಸುಸ್ತಿರವಾಗಿ ಕಾಪಾಡುವಲ್ಲಿ ಆಶಾ ಕಾರ್ಯಕರ್ತೆ ಯೋಜನೆಯು ಬಹು ಮುಖ್ಯ ಪಾತ್ರವನ್ನು ವಹಿಸಿದೆ, ಮಹಿಳೆಯರ ಮಕ್ಕಳ ಆರೋಗ್ಯ ಕಾಪಾಡುವಲ್ಲಿ ಪ್ರಾಮಾಣಿಕವಾಗಿ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರ ಬೇಡಿಕೆಯನ್ನು ಪುರಸ್ಕರಿಸಿ ಮಾನ್ಯ ಮುಖ್ಯಮಂತ್ರಿಗಳು ಈ ಹಿಂದೆಯೇ ವೇತನವನ್ನು ಹೆಚ್ಚಳವನ್ನು ಮಾಡಿರುವುದನ್ನು ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳಬಹುದು.

ದೇಶದ ಗ್ರಾಮೀಣ ಭಾಗದ ಮಹಿಳೆಯರ ಮತ್ತು ಮಕ್ಕಳ ಆರೋಗ್ಯದ ಹಿತ ದೃಷ್ಟಿಯಿಂದ ಆಶಾ ಕಾರ್ಯಕರ್ತರು ಎನ್ನುವ ಹುದ್ದೆಯನ್ನು ಹುಟ್ಟು ಹಾಕಿ, ಜನರ ಆರೋಗ್ಯವನ್ನು ಕಾಪಾಡುವಲ್ಲಿ ಕಾಂಗ್ರೆಸ್ ಸರ್ಕಾರ ಮಹತ್ವದ ಕೊಡುಗೆಯನ್ನು ನೀಡಿದೆ, ಕಾಂಗ್ರೆಸ್ ಸರ್ಕಾರಗಳಿಗೆ ಇರುವಂತಹ ದೂರದೃಷ್ಟಿ ಚಿಂತನೆಗಳು ಮಹಿಳಾ ಮತ್ತು ಮಕ್ಕಳ ಪರವಾದ ಯೋಜನೆಗಳು ಮುಂತಾದ ಯಾವ ಕಲ್ಪನೆಯೂ ಇಲ್ಲದ ಕಾರ್ಕಳ ಶಾಸಕರು ಕೇವಲ ಪ್ರಚಾರಕ್ಕಾಗಿ ಆಶಾ ಕಾರ್ಯಕರ್ತೆಯರನ್ನು ತನ್ನ ಕಚೇರಿಗೆ ಕರೆಸಿಕೊಂಡು ಫೋಟೋ ಶೂಟ್ ಮಾಡಿಸಿ ನಾನೇ ಸಂಬಳ ಬಿಡುಗಡೆ ಮಾಡಿಸಿದೆ ಎಂದು ಪ್ರಚಾರ ಪಡೆಯುತ್ತಿರುವುದು ಅವರ ಪ್ರಚಾರದ ಹಪಾಪಿಯನ್ನು ಸೂಚಿಸುತ್ತದೆ ಮತ್ತು ಇದು ತೀರಾ ಹಾಸ್ಯಾಸ್ಪದವಾಗಿದೆ.

ಆಶಾ ಕಾರ್ಯಕರ್ತೆಯರ ವೇತನವು ಕೇವಲ ಕಾರ್ಕಳ ಜಿಲ್ಲೆ ತಾಲೂಕಿಗೆ ಮಾತ್ರ ಬಿಡುಗಡೆಯಾಗಿದ್ದಲ್ಲ ಇದು ಉಡುಪಿ ಜಿಲ್ಲೆ ಸಹಿತ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರವು ವೇತನವನ್ನು ಬಿಡುಗಡೆ ಮಾಡಿದೆ, ಹಾಗಾದರೆ ರಾಜ್ಯದಾದ್ಯಂತ ಆಶಾ ಕಾರ್ಯಕರ್ತೆಯರ ವೇತನ ಬಿಡುಗಡೆಗೆ ಕಾರ್ಕಳದ ಶಾಸಕರಾಗಿರುವ ಸುನಿಲ್ ಕುಮಾರ್ ಕಾರಣರಾಗುತ್ತಾರೆಯೆ..? ಅವರೇನು ಈ ರಾಜ್ಯದ ಮುಖ್ಯಮಂತ್ರಿಯೆ..? ಅಥವಾ ಹಣಕಾಸು ಮಂತ್ರಿಯೆ..?

ಬಡ ಅಮಾಯಕ ಮುಗ್ದ ಆಶಾ ಕಾರ್ಯಕರ್ತೆಯರ ಮುಂದೆ ಈ ರೀತಿ ಸುಳ್ಳುಗಳನ್ನು ಹೇಳಿ ಪ್ರಚಾರ ಪಡೆಯಲು ಯತ್ನಿಸುವ ಸುನೀಲ್ ಕುಮಾರ್ ಅವರಿಗೆ ಇದು ಶೋಭೆ ತರುವುದಿಲ್ಲ. ಸರ್ಕಾರ ಯಾರನ್ನೂ ಕೂಡ ಬಿಟ್ಟಿಯಾಗಿ ದುಡಿಸಿಕೊಳ್ಳುವುದಿಲ್ಲ, ಕಾಲ ಕಾಲಕ್ಕೆ ಅನುಗುಣವಾಗಿ ಅವರಿಗೆ ವೇತನವನ್ನು ನೀಡುತ್ತದೆ, ವೇತನ ನೀಡದಿದ್ದರೆ ಸರ್ಕಾರದ ಆಡಳಿತ ಯಂತ್ರ ನಡೆಯಲು ಸಾಧ್ಯವಿಲ್ಲ, ಎಲ್ಲದರಲ್ಲೂ ಪ್ರಚಾರ ಪಡೆಯಲು ಹವಣಿಸುವ, ಅಮಾಯಕರನ್ನು ಕಚೇರಿಗೆ ಕರೆಸಿ ಪೋಟೊ ಶೂಟ್ ಮಾಡಿಸುವ ಶಾಸಕರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಭಾನು ಭಾಸ್ಕರ ಪೂಜಾರಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಜನ ನಾಯಗನ್ ಅಡ್ವಾನ್ಸ್ ಬುಕಿಂಗ್ ದಾಖಲೆ: ವಿಜಯ್ ಚಿತ್ರ ಜುಲೈ 23ಕ್ಕೆ ಬಿಡುಗಡೆ

ವಿಜಯ್ ಅಭಿನಯದ ಕೊನೆಯ ಚಿತ್ರ 'ಜನ ನಾಯಗನ್' ಜುಲೈ 23ರಂದು ಬಿಡುಗಡೆಯಾಗಲಿದ್ದು, ಅಡ್ವಾನ್ಸ್ ಬುಕಿಂಗ್‌ನಲ್ಲಿ ಭಾರಿ ದಾಖಲೆ ಬರೆದಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ನೀಟ್ ಪ್ರತಿಭಟನೆ ಮೇಲಿನ ಪೊಲೀಸ್ ಕ್ರಮ: ತುರ್ತು ವಿಚಾರಣೆಗೆ ಸುಪ್ರೀಂ ನಿರಾಕರಣೆ

ದೆಹಲಿಯಲ್ಲಿ ನೀಟ್ ವಿದ್ಯಾರ್ಥಿಗಳ ಪ್ರತಿಭಟನೆ ಮೇಲಿನ ಪೊಲೀಸ್ ದೌರ್ಜನ್ಯ ತನಿಖೆ ಕೋರಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಸಂಗಾತಿ ಮೇಲೆ ಆಸಕ್ತಿ ಇಲ್ಲವೆಂದು ಡಿವೋರ್ಸ್ ಸಿಗಲ್ಲ: ಹೈಕೋರ್ಟ್ ಆದೇಶ

ಮದುವೆ ಒಪ್ಪಂದವಲ್ಲ, ಸಂಸ್ಕಾರ. ಹೆಂಡತಿ ಮೇಲೆ ಆಸಕ್ತಿ ಇಲ್ಲವೆಂದು ವಿಚ್ಛೇದನ ಕೇಳಿದ ಪತಿಯ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಉಡುಪಿ ಬಿಜೆಪಿ ಎಸ್ಐಆರ್ ಅಭಿಯಾನ: ಕುತ್ಯಾರು ನವೀನ್ ಶೆಟ್ಟಿ ಕರೆ

ಉಡುಪಿಯಲ್ಲಿ ಜುಲೈ 25-26ಕ್ಕೆ ಬಿಜೆಪಿಯಿಂದ ಎಸ್ಐಆರ್ ಮಹಾ ಸಂಪರ್ಕ ಅಭಿಯಾನ ಹಾಗೂ 1112 ಬೂತ್‌ಗಳಲ್ಲಿ ಮನ್ ಕೀ ಬಾತ್ ವೀಕ್ಷಣೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ