ಜೆಇಇ ಮೈನ್ (ಬಿ.ಟೆಕ್) ಮೊದಲ ಹಂತದ ಫಲಿತಾಂಶ

Date:

spot_img

ಜ್ಞಾನಸುಧಾದ 8 ವಿದ್ಯಾರ್ಥಿಗಳಿಗೆ 99ಕ್ಕಿಂತ ಅಧಿಕ ಟೋಟಲ್ ಪರ್ಸಂಟೈಲ್ – 99.9055199 ಪರ್ಸಂಟೈಲ್‌ನೊಂದಿಗೆ ಕನಿಷ್ಕ್ ಅಮೀನ್ ಟಾಪರ್‌

ಸಾಧಕ ವಿದ್ಯಾರ್ಥಿಗಳಿಗೆ 3.42 ಲಕ್ಷ ರೂ. ಟ್ರಸ್ಟಿನಿಂದ ಬಹುಮಾನ

ಕಾರ್ಕಳ : ರಾಷ್ಟ್ರಮಟ್ಟದ ಇಂಜಿನಿಯರಿಂಗ್ ಪ್ರವೇಶಕ್ಕಾಗಿ ಎನ್.ಟಿ.ಎ. ನಡೆಸಿದ ಜೆಇಇ ಮೈನ್ (ಬಿ.ಟೆಕ್)-2026ರ ಪ್ರಥಮ ಹಂತದ ಫಲಿತಾಂಶದಲ್ಲಿ ಜ್ಞಾನಸುಧಾ ಪಿ.ಯು. ಕಾಲೇಜಿನ 8 ವಿದ್ಯಾರ್ಥಿಗಳು 99ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿ ಉತ್ತಮ ಸಾಧನೆ ಮೆರೆದಿದ್ದಾರೆ. ಟಾಪರ್ ಆಗಿ 99.9055199 ಪರ್ಸಂಟೈಲ್‌ನೊಂದಿಗೆ ಕನಿಷ್ಕ್ ಅಮೀನ್ ಹೊರಹೊಮ್ಮಿದ್ದಾರೆ. 22 ವಿದ್ಯಾರ್ಥಿಗಳು 98 ಪರ್ಸಂಟೈಲ್‌ಗಿಂತ ಅಧಿಕ, 48 ವಿದ್ಯಾರ್ಥಿಗಳು 97 ಪರ್ಸಂಟೈಲ್‌ಗಿಂತ ಅಧಿಕ, 74 ವಿದ್ಯಾರ್ಥಿಗಳು 96 ಪರ್ಸಂಟೈಲ್‌ಗಿಂತ ಅಧಿಕ, 94 ವಿದ್ಯಾರ್ಥಿಗಳು 95 ಪರ್ಸಂಟೈಲ್‌ಗಿಂತ ಅಧಿಕ ಹಾಗೂ 222 ವಿದ್ಯಾರ್ಥಿಗಳು 90 ಪರ್ಸಂಟೈಲ್‌ಗಿಂತ ಅಧಿಕ ಫಲಿತಾಂಶ ತಮ್ಮದಾಗಿಸಿಕೊಂಡಿದ್ದಾರೆ.

ಸಾಧಕ ವಿದ್ಯಾರ್ಥಿಗಳಿಗೆ 3.42ಲಕ್ಷ ರೂಪಾಯಿ ಟ್ರಸ್ಟಿನಿಂದ ಘೋಷಣೆ
97ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿದ ಸಾಧಕ ವಿದ್ಯಾರ್ಥಿಗಳಿಗೆ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರಾದ ಡಾ. ಸುಧಾಕರ್ ಶೆಟ್ಟಿ ಬಹುಮಾನವಾಗಿ 3.42ಲಕ್ಷ ರೂ. ಘೋಷಿಸಿದ್ದಾರೆ.

ಜೆ.ಇ.ಇ. ಮೈನ್ ಪ್ರಥಮ ಹಂತದ ಫಲಿತಾಂಶದಲ್ಲಿ 99.9055199 ಪರ್ಸಂಟೈಲ್ ಪಡೆದ ಕನಿಷ್ಕ್ ಅಮೀನ್‌ರವರಿಗೆ 1 ಲಕ್ಷ ರೂ., 99.8254499 ಪರ್ಸಂಟೈಲ್ ಪಡೆದ ಸೋಹನ್ ಗಿರಿರಡ್ಡಿಯವರಿಗೆ 75ಸಾವಿರ ರೂ., 99.6543996 ಪರ್ಸಂಟೈಲ್ ಪಡೆದ ಮೇಧಾನ್ಶ್ ಎನ್.ಬಿ. ಹಾಗೂ 99.6130095 ಪರ್ಸಂಟೈಲ್ ಪಡೆದ ಅನಿರುದ್ಧ್ ಆರ್. ಉಡುಪರವರಿಗೆ ತಲಾ 35 ಸಾವಿರ ರೂ., 99.5087645 ಪರ್ಸಂಟೈಲ್ ಪಡೆದ ತುಷಾರ್ ಎ. ಶೆಟ್ಟಿಯವರಿಗೆ 25 ಸಾವಿರ ರೂ., 99.4253270 ಪರ್ಸಂಟೈಲ್ ಪಡೆದ ನಿಶಾನ್ ಎನ್. ಸಾಲ್ಯಾನ್, 99.2313099 ಪರ್ಸಂಟೈಲ್ ಪಡೆದ ತೇಜಸ್ ನಾಯಕ್ ಹಾಗೂ 99.0090928 ಪರ್ಸಂಟೈಲ್ ಪಡೆದ ಅನಿಕೇತ್ ಆರ್. ಉಡುಪರವರಿಗೆ ತಲಾ 15ಸಾವಿರ ರೂ. ಘೋಷಿಸಿರುತ್ತಾರೆ.
ಮನೋಜ್ ಎಂ. 98.9239678 ಪರ್ಸಂಟೈಲ್, ವೈಷ್ಣವಿ ಕುಲಕರ್ಣಿ 98.8384918 ಪರ್ಸಂಟೈಲ್, ಸಂಜನಾ ಬಿ.ಎ. 98.7722886 ಪರ್ಸಂಟೈಲ್, ಸಾಯಿ ರಾಘವೇಂದ್ರ ಬಿ. 98.6885295 ಪರ್ಸಂಟೈಲ್, ಮಯೂರ್ ವಿ. ಗೌಡ 98.5943336 ಪರ್ಸಂಟೈಲ್, ವರುಣ್ ಜೆ. 98.5707051 ಪರ್ಸಂಟೈಲ್, ಅನಾಮಯ ಯೋಗೇಶ್ ದಿವಾಕರ್ 98.4810184 ಪರ್ಸಂಟೈಲ್, ವಿದ್ವತ್ ವಿ. ಕಾಮತ್ 98.4287569 ಪರ್ಸಂಟೈಲ್, ಪ್ರಭಂಜನ್ ಭಟ್ 98.4281519 ಪರ್ಸಂಟೈಲ್, ಆಸ್ತಿಕಾ ಆರ್. ಭಾಗವತ್ 98.413806 ಪರ್ಸಂಟೈಲ್, ಜೀವನ್ ಎನ್. ಬಿ 98.3173191 ಪರ್ಸಂಟೈಲ್, ದಿಗಂತ್ ಎಸ್. 98.2292253 ಪರ್ಸಂಟೈಲ್, ಎನ್.ಎಸ್.ವಿವೇಕ್ 98.1685978 ಪರ್ಸಂಟೈಲ್, ವಿಶಾಖ್ ಕೃಷ್ಣರಾಜ್ 98.132748 ಪರ್ಸಂಟೈಲ್ ಪಡೆದಿದ್ದು, ಇವರಿಗೆ ತಲಾ 1 ಸಾವಿರ ರೂ. ಹಾಗೂ 97ಕ್ಕಿಂತ ಅಧಿಕ ಪರ್ಸಂಟೈಲ್ ಪಡೆದ ವಿದ್ಯಾರ್ಥಿಗಳಿಗೆ 500 ರೂ. ನಗದು ಪುರಸ್ಕಾರವನ್ನು ಘೋಷಿಸಿರುತ್ತಾರೆ.

ಸಾಧಕ ವಿದ್ಯಾರ್ಥಿಗಳನ್ನು ಹಾಗೂ ಸೂಕ್ತ ತರಬೇತಿ ನೀಡಿರುವ ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿಯಾ ಪರಿಶ್ರಮವನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‌ ಅಭಿನಂದಿಸಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಸಂಡೆ ಬಜಾರ್ ವ್ಯಾಪಾರಕ್ಕೆ ಮುಕ್ತ ಅವಕಾಶಕ್ಕೆ ಪಟ್ಟು: ಪಾಲಿಕೆಗೆ ಮುತ್ತಿಗೆ

ಸಂಡೆ ಬಜಾರ್ ವ್ಯಾಪಾರಕ್ಕೆ ಮುಕ್ತ ಅವಕಾಶ ನೀಡಲು ಆಗ್ರಹ: ಮಂಗಳೂರು ಪಾಲಿಕೆಗೆ...

CJP ಪ್ರತಿಭಟನೆ: ಕೇಂದ್ರ ಸರ್ಕಾರ ಮತ್ತು CJP ನಡುವೆ ಇಂದು ಸಭೆ!

NEET ಪರೀಕ್ಷೆ ಅಕ್ರಮ: ಇಂದು ಕೇಂದ್ರ ಸರ್ಕಾರ ಹಾಗೂ ಕಾಕ್ರೋಚ್ ಜನತಾ...

ಪೇಪರ್ ಲೀಕ್ ಹೊಣೆಗಾರಿಕೆ ಚರ್ಚೆಗೆ ಕೇಂದ್ರ ಅಭಯ: ಸೋನಮ್ ವಾಂಗ್ಚುಕ್!

26 ದಿನಗಳ ಸುದೀರ್ಘ ಉಪವಾಸ ಅಂತ್ಯಗೊಳಿಸಿದ ಬಳಿಕ ಪರಿಸರ ಹೋರಾಟಗಾರನ ವಾಗ್ದಾನ ಲೇಹ್...

ಪೇಪರ್ ಲೀಕ್ ತಡೆಗೆ ಕೇಂದ್ರದ ಕಠಿಣ ಅಸ್ತ್ರ: ಇಂದಿನ ಸಂಪುಟ ಸಭೆಯಲ್ಲಿ ಪ್ರಕಟಣೆ!

ಪೇಪರ್ ಲೀಕ್ ತಡೆಗೆ ಕೇಂದ್ರದಿಂದ ಕಠಿಣ ನಿಯಮ: ಇಂದು ಸಚಿವ ಸಂಪುಟದಿಂದ...