CJP ಪ್ರತಿಭಟನೆ: ಕೇಂದ್ರ ಸರ್ಕಾರ ಮತ್ತು CJP ನಡುವೆ ಇಂದು ಸಭೆ!

Date:

spot_img

NEET ಪರೀಕ್ಷೆ ಅಕ್ರಮ: ಇಂದು ಕೇಂದ್ರ ಸರ್ಕಾರ ಹಾಗೂ ಕಾಕ್ರೋಚ್ ಜನತಾ ಪಾರ್ಟಿ ನಡುವೆ ತಟಸ್ಥ ಸ್ಥಳದಲ್ಲಿ ಪ್ರಮುಖ ಸಭೆ!

ನವದೆಹಲಿ: NEET-UG ಪರೀಕ್ಷೆ ಅಕ್ರಮ ಖಂಡಿಸಿ ಮತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್‌ನಲ್ಲಿ ಧರಣಿ ನಡೆಸುತ್ತಿರುವ ಕಾಕ್ರೋಚ್ ಜನತಾ ಪಾರ್ಟಿ (CJP) ಹಾಗೂ ಕೇಂದ್ರ ಸರ್ಕಾರದ ಪ್ರತಿನಿಧಿಗಳ ನಡುವೆ ಇಂದು ಪ್ರಮುಖ ಮಾತುಕತೆ ನಡೆಯಲಿದೆ.

ನವದೆಹಲಿಯ ಕಾನ್‌ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ಮಧ್ಯಾಹ್ನ 12:30 ಕ್ಕೆ ಈ ಸಭೆ ನಿಗದಿಯಾಗಿದ್ದು, ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಪಾಲ್ಗೊಳ್ಳಲಿದ್ದಾರೆ. ಈ ಹಿಂದೆ ಕೇಂದ್ರ ನಾಯಕರ ಕಚೇರಿ ಅಥವಾ ನಿವಾಸದಲ್ಲಿ ಚರ್ಚೆಗೆ ಆಹ್ವಾನಿಸಲಾಗಿತ್ತು. ಆದರೆ ತಟಸ್ಥ ಸ್ಥಳದಲ್ಲೇ ಸಭೆ ನಡೆಸಬೇಕೆಂಬ ಸಿಜೆಪಿ ಬೇಡಿಕೆಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ.

ಕಳೆದ ಒಂದು ತಿಂಗಳಿನಿಂದ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಸಿಜೆಪಿ, ಶಿಕ್ಷಣ ಸಚಿವರ ರಾಜೀನಾಮೆ ಜೊತೆಗೆ ಪರೀಕ್ಷೆಯಲ್ಲಿ ಅಕ್ರಮ ಎಸಗಿದವರ ವಿರುದ್ಧ ಕಠಿಣ ಕ್ರಮ ಹಾಗೂ ನೊಂದ ಅಭ್ಯರ್ಥಿಗಳ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದೆ.

ದೇಶದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ NEET-UG 2026 ಪರೀಕ್ಷೆ ಅಕ್ರಮದ ವಿಚಾರವಾಗಿ ಕೇಂದ್ರ ಸರ್ಕಾರ ಮತ್ತು ಪ್ರತಿಭಟನಾ ನಿರತ ಕಾಕ್ರೋಚ್ ಜನತಾ ಪಾರ್ಟಿ ನಡುವಿನ ಜಟಾಪಟಿ ಈಗ ನಿರ್ಣಾಯಕ ಹಂತ ತಲುಪಿದೆ. ಜಂತರ್ ಮಂತರ್‌ನಲ್ಲಿ ಸತತ ಧರಣಿ ನಡೆಸುತ್ತಿರುವ ಯುವ ಸಂಘಟನೆಯ ಪ್ರತಿನಿಧಿಗಳನ್ನು ಮಾತುಕತೆಗೆ ಆಹ್ವಾನಿಸಿರುವ ಕೇಂದ್ರ ಸರ್ಕಾರ, ಮಧ್ಯಸ್ಥಿಕೆ ವಹಿಸಲು ಸಿದ್ಧವಾಗಿದೆ.

ಪ್ರತಿಭಟನಾಕಾರರು ಯಾವುದೇ ಸಚಿವರ ಖಾಸಗಿ ನಿವಾಸ ಅಥವಾ ಕಚೇರಿಗೆ ತೆರಳಿ ಚರ್ಚಿಸಲು ನಿರಾಕರಿಸಿದ್ದರಿಂದ, ಸಭೆಯನ್ನು ತಟಸ್ಥ ಸ್ಥಳವಾದ ಕಾನ್‌ಸ್ಟಿಟ್ಯೂಷನ್ ಕ್ಲಬ್‌ಗೆ ಸ್ಥಳಾಂತರಿಸಲಾಗಿದೆ. ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮಾತನಾಡಿ, “ವಿದ್ಯಾರ್ಥಿಗಳ ಭವಿಷ್ಯ ಮತ್ತು ಹಿತದೃಷ್ಟಿಯಿಂದ ಸರ್ಕಾರ ಯಾವುದೇ ಪ್ರತಿಷ್ಠೆಗೆ ಬೀಳದೆ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಲು ಬದ್ಧವಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ, ಮೃತರಾದ ಪರೀಕ್ಷಾರ್ಥಿಗಳ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಮೂಲಭೂತ ಸುಧಾರಣೆ ತರಬೇಕೆಂಬ ಬೇಡಿಕೆಯನ್ನು ಸಿಜೆಪಿ ವಕ್ತಾರ ಸೌರವ್ ದಾಸ್ ಪುನರುಚ್ಚರಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಪ್ರಧಾನಿ ಮೋದಿ ಮಧ್ಯರಾತ್ರಿ ವಿಡಿಯೋಗೆ CJP ತೀವ್ರ ತಿರುಗೇಟು: ಶಿಕ್ಷಣ ಸಚಿವರ ವಜಾಕ್ಕೆ ಪಟ್ಟು!

ಶೀಘ್ರಗತಿ ನ್ಯಾಯಾಲಯದ ಭರವಸೆ ನೀಡಿದ ಪ್ರಧಾನಿ: ಸಚಿವ ಧರ್ಮೇಂದ್ರ ಪ್ರಧಾನ್ ವಜಾಗೊಳಿಸಲು...

CJP ರಾಷ್ಟ್ರವ್ಯಾಪಿ ಪ್ರತಿಭಟನೆ: ಕೇಂದ್ರ ಸರ್ಕಾರದ ಜೊತೆ ಇಂದು 2ನೇ ಸಭೆ!

‘ಒಂದು ಜಿಲ್ಲೆ, ಒಂದು ಬೇಡಿಕೆ’: CJP ಯಿಂದ ಇಂದು ದೇಶಾದ್ಯಂತ ಬೃಹತ್...

ಸರ್ಕಾರ ಮತ್ತು CJP ಜಟಾಪಟಿಗೆ ಅಂತ್ಯ: ತಟಸ್ಥ ಸ್ಥಳದಲ್ಲಿ ಸಭೆಗೆ ಒಪ್ಪಿಗೆ!

ಸಚಿವರ ಕಚೇರಿ ತಿರಸ್ಕರಿಸಿ ತಟಸ್ಥ ಸ್ಥಳದಲ್ಲೇ ಸಭೆ ನಡೆಸಲು ಪಟ್ಟು ಹಿಡಿದ...

ರಾಹುಲ್, ಪ್ರಿಯಾಂಕಾ ಗಾಂಧಿ ಬಂಧನ ಖಂಡನೀಯ: ದಿನೇಶ್ ಮೂಳೂರು!

ಪ್ರಜಾಪ್ರಭುತ್ವದ ಮೌಲ್ಯಗಳ ಮಾರಣಹೋಮ: ರಾಹುಲ್ ಗಾಂಧಿ ಅಕ್ರಮ ಬಂಧನ ವಿರೋಧಿಸಿ ದಿನೇಶ್...