
ಟೆಹ್ರಾನ್: ಇಸ್ರೇಲ್ ನಡೆಸಿದ ಭಾರಿ ದಾಳಿಗಳಿಂದ ಇರಾನ್‌ನಾದ್ಯಂತ ಕನಿಷ್ಠ 865 ಮಂದಿ ಮೃತಪಟ್ಟಿದ್ದು, 3,396ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವಾಷಿಂಗ್ಟನ್ ಮೂಲದ ಮಾನವ ಹಕ್ಕು ಸಂಸ್ಥೆಯೊಂದು ಭಾನುವಾರ ಮಾಹಿತಿ ನೀಡಿದೆ.
ಸಂಸ್ಥೆಯ ಪ್ರಕಾರ, ಮೃತರಲ್ಲಿ 363 ಮಂದಿ ನಾಗರಿಕರು ಹಾಗೂ 215 ಮಂದಿ ಭದ್ರತಾ ಸಿಬ್ಬಂದಿಯಾಗಿದ್ದಾರೆ. ಇರಾನ್ ಆರೋಗ್ಯ ಸಚಿವಾಲಯದ ಇತ್ತೀಚಿನ ವರದಿಯ ಪ್ರಕಾರ ಶನಿವಾರವಷ್ಟೇ 400ಕ್ಕೂ ಅಧಿಕ ಮಂದಿ ಮೃತರಾದರು ಎಂಬ ಮಾಹಿತಿ ಹೊರಬಿದ್ದಿದೆ. ಆದರೆ ಸರಿಯಾದ ಸಂಖ್ಯೆಯ ಮಾಹಿತಿಯನ್ನು ಇರಾನ್ ನಿಯಮಿತವಾಗಿ ಬಹಿರಂಗಪಡಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.
ಇದರ ಬೆನ್ನಲ್ಲೇ, ವಿಶ್ವಸಂಸ್ಥೆಯಲ್ಲಿನ ಇರಾನ್ ರಾಯಭಾರಿ ಅಮೀರ್ ಸಯೀದ್ ಇರಾವಾನಿ ಭದ್ರತಾ ಮಂಡಳಿಗೆ ತುರ್ತು ಸಭೆ ನಡೆಸುವಂತೆ ಬರೆದು ಮನವಿ ಮಾಡಿದ್ದಾರೆ. ಈ ದಾಳಿಯನ್ನು ಅವರು “ಕಾನೂನುಬಾಹಿರ ಹಾಗೂ ಘೋರ ಬಲಪ್ರಯೋಗ” ಎಂದುಆರೋಪಿಸಿರುವುದರ ಜೊತೆಗೆ, ಅಮೆರಿಕ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.