
ನವದೆಹಲಿ: ಪಹಲ್ಗಾಮ್‌ನಲ್ಲಿ ಭಾರತೀಯ ಯೋಧರ ಮೇಲೆ ನಡೆದ ಉಗ್ರರ ಹತ್ಯಾಕಾಂಡಕ್ಕೆ ತೀರಾ ತೀಕ್ಷ್ಣ ಪ್ರತೀಕಾರವಾಗಿ ಭಾರತೀಯ ಸೇನೆ “ಆಪರೇಷನ್ ಸಿಂಧೂರ್” ಹೆಸರಿನಲ್ಲಿ ಪಾಕಿಸ್ತಾನದ ಉಗ್ರ ನೆಲೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿದೆ. ಮಂಗಳವಾರ ತಡರಾತ್ರಿ 1.30ರ ಸುಮಾರಿಗೆ ನಡೆದ ಈ ದಾಳಿಯಲ್ಲಿ ಕನಿಷ್ಠ 9 ಉಗ್ರ ಶಿಬಿರಗಳು ನಾಶವಾಗಿದ್ದು, ಇದರಿಂದ ಪಾಕಿಸ್ತಾನದ ಭದ್ರತಾ ವ್ಯವಸ್ಥೆ ಬೆಚ್ಚಿಬಿದ್ದಂತಾಗಿದೆ.
ಈ ದಾಳಿಯ ಬಳಿಕ ಪಾಕಿಸ್ತಾನ ಪ್ರಜೆಗಳು ‘ಸಿಂಧೂರ’ ಎಂಬ ಶಬ್ದದ ಅರ್ಥವೇನು ಎಂಬುದರ ಕುರಿತು ಗೂಗಲ್‌ನಲ್ಲಿ ತಲೆಕೆಡಿಸಿಕೊಳ್ಳುತ್ತಿದ್ದಾರೆ. “ಆಪರೇಷನ್ ಸಿಂಧೂರ್”, “ಇಂಡಿಯಾ ಮಿಸೈಲ್ ಅಟ್ಯಾಕ್”, “ಬಿಳಿಧ್ವಜ”, “ಸಿಂಧೂರ್ ಅಟ್ಯಾಕ್ ಮೀನಿಂಗ್”, “ಆಪರೇಷನ್ ಸಿಂಧೂರ್ ವಿಕಿಪೀಡಿಯಾ” ಮುಂತಾದ ವಿಷಯಗಳನ್ನು ಗೂಗಲ್‌ನಲ್ಲಿ ಶೋಧಿಸುತ್ತಿರುವುದಾಗಿ ಟ್ರೆಂಡ್ ವರದಿ ಮಾಡಿದೆ.
ಭಾರತೀಯ ಸೇನೆ ಈ ದಾಳಿ ಮೂಲಕ ಪಹಲ್ಗಾಮ್ ಉಗ್ರ ದಾಳಿಯ ದುಃಖದ ಪ್ರತೀಕಾರವನ್ನು ತೀರಿಸಿ ದೇಶದ ಭದ್ರತೆಗೆ ಮತ್ತೆ ಬಲ ನೀಡಿದೆ. ‘ಸಿಂಧೂರ್’ ಎಂಬ ಶಬ್ದವೇ ಪಾಕಿಸ್ತಾನದಲ್ಲಿ ಆತಂಕದ ಹೆಸರಾಗಿ ಪರಿಣಮಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ದಾಳಿ ಬಗ್ಗೆ ಚರ್ಚೆ ಜೋರಾಗಿರುವುದು ಗಮನ ಸೆಳೆದಿದೆ.