ದೇಶದ ಭದ್ರತೆ ವಿಚಾರದಲ್ಲೂ ಗೋಸುಂಬೆಗಳ ತರಹ ವರ್ತಿಸುವ ಕಾಂಗ್ರೆಸ್: ರಾಕೇಶ್ ಶೆಟ್ಟಿ ಕುಕ್ಕುಂದೂರು

Date:

spot_img

ಕಾರ್ಕಳ: ಕಾಶ್ಮಿರದ ಪೆಹಲ್ಗಾಮ್ ನಲ್ಲಿ ಹಿಂದೂಗಳ ಹತ್ಯೆ ದೇಶದ ಭದ್ರತೆ ಮತ್ತು ಭಯೋತ್ಪಾದಕರ ವಿರುದ್ಧದ ಕಠಿಣ ನಿರ್ಧಾರಗಳ ಕುರಿತು ಕಾಂಗ್ರೆಸ್ ಪಕ್ಷ ಗೋಸುಂಬೆ ರೀತಿ ವರ್ತಿಸುತ್ತಿದೆ. ಕಾಂಗ್ರೆಸ್ ಇನ್ನಾದರೂ ನರಿ ಬುದ್ದಿ ಬಿಟ್ಟು ದೇಶದ ಭದ್ರತೆ, ರಕ್ಷಣೆ ವಿಚಾರದಲ್ಲಿ ಒಗ್ಗಟ್ಟಿನ ಸ್ಪಷ್ಟ ನಿಲುವು ಪ್ರಕಟಿಸಲಿ ಎಂದು ಕಾರ್ಕಳ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಶೆಟ್ಟಿ ಕುಕ್ಕುಂದೂರು ಹೇಳಿದ್ದಾರೆ.

ಕಾಂಗ್ರೆಸ್ ವರ್ತನೆ ತೀವೃ ಗೊಂದಲದಲ್ಲಿ ಇದ್ದಂತಿದೆ. ಪೆಹಲ್ಗಾಮ್ ಹಿಂದೂ ನಾಗರಿಕರ ಹತ್ಯೆಗೆ ಕೇಂದ್ರದ ಭದ್ರತಾ ವೈಫಲ್ಯವೆಂದು ಆರಂಭದಲ್ಲಿ ದೂರಿದ ಕಾಂಗ್ರೆಸ್ ನಂತರದಲ್ಲಿ ಯುದ್ಧ ಬದಲು ಶಾಂತಿ ಮಂತ್ರ ಜಪಿಸಿ ಭಯೋತ್ಪಾದಕರ ಪರ ಮೃದು ನಿಲುವು ತಳೆದಿತ್ತು. ಸಿ.ಎಂ ಸಿದ್ಧರಾಮಯ್ಯನವರಂತೂ ಯುದ್ಧ ಬೇಡ’ ಎಂದು ಪಾಕಿಸ್ತಾನ ಪರ ನುಡಿಯ ಹಾರೈಸಿದರು ಎಂದು ಅವರು ಕಿಡಿಕಾರಿದರು. ಕಾಂಗ್ರೆಸ್ ಪಾರ್ಟಿ, ರಾಷ್ಟ್ರೀಯ ಭದ್ರತೆ, ಸೈನಿಕರ ಹಿತಾಸಕ್ತಿ ಅಥವಾ ಪ್ರಧಾನಿಯ ನಿರ್ಧಾರಗಳ ಬಗ್ಗೆ ಬೆಂಬಲ ನೀಡುವ ಬದಲು, ತಪ್ಪು ಪ್ರಶ್ನೆಗಳನ್ನು ಎತ್ತುವ, ಗೊಂದಲ ಹುಟ್ಟಿಸುವ ರಾಜಕಾರಣವನ್ನು ಮಾಡುತ್ತ ಬಂದಿದೆ. ದೇಶ ಭಯೋತ್ಪಾದಕರ ವಿರುದ್ಧ ನಿರ್ಧಾರಾತ್ಮಕ ಕ್ರಮ ಕೈಗೊಂಡಿರುವ ಸಂದರ್ಭದಲ್ಲೂ, ಕಾಂಗ್ರೆಸ್ ದೇಶದ ಬದಿಗೆ ನಿಲ್ಲದೆ ನರಿ ಬುದ್ಧಿಯಲ್ಲಿ ಮುಳುಗಿದೆ. ನಿಜಕ್ಕೂ ಜನತೆ ಈ ನಾಟಕವನ್ನು ಸಹಿಸಲಾರರು ಎಂದ ಅವರು, ಕಾಂಗ್ರೆಸ್ ಪಕ್ಷ ‘ದ್ವಂಧ್ವ ರಾಜಕಾರಣ’ಕ್ಕೆ ಇತಿಶ್ರೀ ಹಾಡಿ ದೇಶ, ಕೇಂದ್ರ ಸರಕಾರ, ಸೈನಿಕರ ಪರ ಒಗ್ಗಟ್ಟಿನ ಕ್ಷಮತೆ ಪಾಲಿಸಿ, ಸರಕಾರದ ನಿರ್ಧಾರವನ್ನು ಬೆಂಬಲಿಸಲಿ ಎಂದು ಆಗ್ರಹಿಸಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಚೆನ್ನಮ್ಮ ದೇವೇಗೌಡ ನಿಧನ: ಡಾ ಮಂಜುನಾಥ್ ಭಾವುಕ

ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನರಾಗಿದ್ದು, ಅಳಿಯ ಡಾ. ಸಿ.ಎನ್. ಮಂಜುನಾಥ್ ಭಾವುಕರಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕ್ರಿಯೇಟಿವ್ ಪುಸ್ತಕಧಾರೆ 2026: ಕಾರ್ಕಳದಲ್ಲಿ 25 ಕೃತಿಗಳ ಬಿಡುಗಡೆ

ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ಪುಸ್ತಕಧಾರೆ 2026 ಕಾರ್ಯಕ್ರಮ ಸಡಗರದಿಂದ ಜರುಗಿದ್ದು, ಒಟ್ಟು 25 ಕೃತಿಗಳು ಲೋಕಾರ್ಪಣೆಗೊಂಡಿವೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಸುರತ್ಕಲ್‌ನಲ್ಲಿ ಅಣ್ಣನಿಂದ ತಮ್ಮನ ಹತ್ಯೆ; ಕಲ್ಲು ಎತ್ತಿಹಾಕಿ ಬರ್ಬರ ಕೊಲೆ

ಸುರತ್ಕಲ್‌ನ ಚೊಕ್ಕಬೆಟ್ಟಿನಲ್ಲಿ ಸ್ವಂತ ಅಣ್ಣನಿಂದ ತಮ್ಮನ ಬರ್ಬರ ಹತ್ಯೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು ತನಿಖೆ ಮುಂದುವರಿದಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಕಾರ್ಕಳದ ಶಿವಪ್ರಸಾದ್ ರಾವ್ ಶ್ರದ್ಧಾಂಜಲಿ ಸಭೆ

ಕಾರ್ಕಳದಲ್ಲಿ ದಕ್ಷ ಕಂದಾಯ ನಿರೀಕ್ಷಕ ಶಿವಪ್ರಸಾದ್ ವಿ. ರಾವ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪೂರ್ಣ ಮಾಹಿತಿ ಇಲ್ಲಿದೆ ಓದಿ.