spot_img

2026ರ ಮಾರ್ಚ್ 21ಕ್ಕೆ ನಕ್ಸಲಿಸಂ ಮುಕ್ತ ಭಾರತ: ಅಮಿತ್ ಶಾ

Date:

spot_img

ನವದೆಹಲಿ: 2026ರ ಮಾರ್ಚ್ 21ರೊಳಗೆ ಭಾರತ ನಕ್ಸಲಿಸಂ ಮುಕ್ತವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ಘೋಷಿಸಿದ್ದಾರೆ. ಶುಕ್ರವಾರ ಗೃಹ ಸಚಿವಾಲಯದ ಕಾರ್ಯಗಳ ಕುರಿತ ಪ್ರಶ್ನೆಗೆ ಉತ್ತರಿಸುತ್ತಾ, “ನಕ್ಸಲಿಸಂ ರಾಜಕೀಯ ವಿಷಯವೆಂದು ಪರಿಗಣಿಸಿದ ಸರಕಾರವಿದ್ದಾಗ ಏನಾಗುತ್ತದೆ, ಭದ್ರತೆ ಮತ್ತು ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡಿದ ನಮ್ಮ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಏನಾಗುತ್ತದೆ” ಎಂಬುದನ್ನು ಗಮನಿಸುವಂತೆ ತಿಳಿಸಿದರು.

ನಕ್ಸಲರ ವಿರುದ್ಧ ಕೇಂದ್ರದ ಹೋರಾಟ
2023ರ ಡಿಸೆಂಬರ್‌ನಲ್ಲಿ ಛತ್ತೀಸ್‌ಗಢದಲ್ಲಿ ಬಿ ಜೆ ಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕೇವಲ ಒಂದು ವರ್ಷದಲ್ಲಿ 380 ನಕ್ಸಲರು ಹತ್ಯೆಗೀಡಾಗಿದ್ದಾರೆ. ನಿನ್ನೆ ನಡೆದ ಕಾರ್ಯಾಚರಣೆಯಲ್ಲಿ 30 ನಕ್ಸಲರು ಹತರಾಗಿದ್ದು, ಇದನ್ನು ಹತ್ಯೆಗೀಡಾದವರ ಲೆಕ್ಕಕ್ಕೆ ಸೇರಿಸಿಲ್ಲ. ಇದಲ್ಲದೆ, 1194 ನಕ್ಸಲರನ್ನು ಬಂಧಿಸಲಾಗಿದ್ದು, 1045 ಮಂದಿ ಶರಣಾಗಿದ್ದಾರೆ. ಇದರ ಪರಿಣಾಮ, ಸಕ್ರಿಯ ನಕ್ಸಲರ ಸಂಖ್ಯೆ 2619ಕ್ಕೆ ಕುಸಿದಿದೆ. ಈ ಅವಧಿಯಲ್ಲಿ 26 ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ ಎಂದು ಅಮಿತ್ ಶಾ ಮಾಹಿತಿ ನೀಡಿದರು.

ಶಾಂತಿ ಒಪ್ಪಂದ ಮತ್ತು ಭಯೋತ್ಪಾದನೆ ನಿಯಂತ್ರಣ
ಈಶಾನ್ಯ ರಾಜ್ಯಗಳಲ್ಲಿ ಪ್ರಮುಖ ಶಾಂತಿ ಒಪ್ಪಂದಗಳನ್ನು ಕೇಂದ್ರ ಸರ್ಕಾರ ಮಾಡಿಕೊಂಡಿದೆ. 2019 ರಿಂದ ಈವರೆಗೆ 12 ಪ್ರಮುಖ ಶಾಂತಿ ಒಪ್ಪಂದಗಳಿಗೆ ಸಹಿ ಹಾಕಿದ್ದು, 10,900 ಮಂದಿ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮುಖ್ಯವಾಹಿನಿಗೆ ಸೇರಿದ್ದಾರೆ. ಬೋಡೋಲ್ಯಾಂಡ್ ನೇರ ವಿಚಾರಣೆಗೆ ತೆರಳಿದಾಗ ಸಹಸ್ರಾರು ಯುವಕರು ಈಗ ಅಭಿವೃದ್ಧಿಯ ಹಾದಿಯಲ್ಲಿ ನಡೆಯುತ್ತಿದ್ದಾರೆ ಎಂದು ಅವರು ತಿಳಿಸಿದರು.

“ಭಯೋತ್ಪಾದನೆ ವಿರುದ್ದ ಶೂನ್ಯ ಸಹನಶೀಲತೆ”
ಜಮ್ಮು-ಕಾಶ್ಮೀರದ ಭಯೋತ್ಪಾದನೆ, ಎಡಪಂಥೀಯ ಉಗ್ರವಾದ ಮತ್ತು ಈಶಾನ್ಯ ರಾಜ್ಯಗಳ ಅಶಾಂತಿ ಭಾರತದ ಪ್ರಮುಖ ಸವಾಲುಗಳಾಗಿವೆ ಎಂದು ಶಾ ಹೇಳಿದರು. ಕಳೆದ ನಾಲ್ಕು ದಶಕಗಳಲ್ಲಿ 92,000 ನಾಗರಿಕರು ಭಯೋತ್ಪಾದನೆಗೆ ಬಲಿಯಾಗಿದ್ದಾರೆ, ಆದರೆ ಕೇಂದ್ರ ಸರ್ಕಾರವು ಇದನ್ನು ಎದುರಿಸಲು ಸಂಘಟಿತ ಪ್ರಯತ್ನವನ್ನು ಮಾಡುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಇನ್ನೋನೆಕ್ಸ್ಟ್ ಏರಿಯನ್ ಭಾರತ್ ಅಸ್ಟ್ರಾನೋಮಿ ಎಕ್ಸ್‌ಪೋ 1.0ಬಾಹ್ಯಾಕಾಶದ ಕೌತುಕ ಕಂಡು ಬೆರಗಾದ ವಿದ್ಯಾರ್ಥಿಗಳು

ಇನ್ನೋನೆಕ್ಸ್ಟ್ ಮೈಂಡ್ ಪ್ರೈವೇಟ್ ಲಿಮಿಟೆಡ್ (ಏರಿಯನ್ ಭಾರತ್) ಆಶ್ರಯದಲ್ಲಿ ಗುರುವಾರ ನಡೆದ ಆಸ್ಟ್ರಾನೊಮಿ ಎಕ್ಸ್‌ಪೋ 1.0ರ ಆವೃತ್ತಿ ನಗರದ ಮಂತ್ರಿ ಮಾಲ್‌ನ ಐನಾಕ್ಸ್‌ ಚಿತ್ರಮಂದಿರಲ್ಲಿ ಗುರುವಾರ ಉದ್ಘಾಟನೆಗೊಂಡಿತು.

ರೋಬೋಟ್ ‘ಶುವಾಂಗ್ ಶುವಾಂಗ್’ ಪದವಿ ಪಡೆದ ವಿಚಿತ್ರ ಘಟನೆ: ಚೀನಾದಲ್ಲಿ ತಾಂತ್ರಿಕ ಕ್ರಾಂತಿ!

ಚೀನಾದ ಫುಜಿಯನ್ ಪ್ರಾಂತ್ಯದ ಶುವಾನ್ಶಿ ಹೈಸ್ಕೂಲ್‌ನಲ್ಲಿ ನಡೆದ ಪದವಿ ಪ್ರದಾನ ಸಮಾರಂಭವೊಂದು ವಿಶಿಷ್ಟ ಘಟನೆಗೆ ಸಾಕ್ಷಿಯಾಗಿದೆ. "ಶುವಾಂಗ್ ಶುವಾಂಗ್" ಹೆಸರಿನ ಮಾನವಾಕಾರದ ರೋಬೋಟ್ ಒಂದು ಸಮಾರಂಭದಲ್ಲಿ ಭಾಗವಹಿಸಿ, ವೇದಿಕೆಗೆ ನಡೆದು, ಶಿಕ್ಷಕರಿಂದ ಕೈಚಲಾವಣೆ ಮೂಲಕ ಪ್ರಮಾಣಪತ್ರ ಸ್ವೀಕರಿಸಿತು.

ಹಲಸಿನ ಹಣ್ಣು ತಿಂದು ಬ್ರೀಥಲೈಸರ್‌ನಲ್ಲಿ ಫೇಲ್: ಕೇರಳದಲ್ಲಿ ಅಚ್ಚರಿಯ ಘಟನೆ!

ಮದ್ಯಪಾನ ಮಾಡದಿದ್ದರೂ, ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಮೂವರು ಬಸ್ ಚಾಲಕರು ಬ್ರೀಥಲೈಸರ್ ಪರೀಕ್ಷೆಯಲ್ಲಿ ವಿಫಲರಾಗಿ, ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ ಪ್ರಕರಣ ದಾಖಲಾಗಿರುವ ವಿಚಿತ್ರ ಘಟನೆ ವರದಿಯಾಗಿದೆ.

ದಿನ ವಿಶೇಷ – ವಿಶ್ವ ಐವಿಎಫ್ ದಿನ

ಈ ದಿನವು ಸಂತಾನೋತ್ಪತ್ತಿ ವಿಜ್ಞಾನದಲ್ಲಿನ ಮಹತ್ವದ ಮೈಲಿಗಲ್ಲನ್ನು ಗುರುತಿಸುತ್ತದೆ ಮತ್ತು ಬಂಜೆತನದಿಂದ ಬಳಲುತ್ತಿರುವ ಅಸಂಖ್ಯಾತ ದಂಪತಿಗಳಿಗೆ ಆಶಯದ ದಾರಿಯನ್ನು ತೆರೆದ ಐವಿಎಫ್ ತಂತ್ರಜ್ಞಾನದ ಪ್ರಗತಿಯನ್ನು ಸ್ಮರಿಸುತ್ತದೆ