
ಮಾರ್ದನಿಸಲಿದೆ ಭಾರತದ ಬಾಹ್ಯಾಕಾಶ ಸಾಮರ್ಥ್ಯ; ಇಸ್ರೋದ SpaDeX ಕಾರ್ಯಾಚರಣೆಗೆ ದಿನಗಣನೆ
ಜಾಗತಿಕ ಬಾಹ್ಯಾಕಾಶ ಸ್ಪರ್ಧೆಯಲ್ಲಿ ವಿಶ್ವದ ಪ್ರಬಲ ರಾಷ್ಟ್ರಗಳಿಗೆ ಪೈಪೋಟಿ ನೀಡುತ್ತಿರುವ ಭಾರತ, ತನ್ನ ಬಾಹ್ಯಾಕಾಶ ಕಾರ್ಯಾಚರಣೆಗಳಿಂದ ಜಗತ್ತನ್ನು ದಂಗು ಬಡಿಸುತ್ತಿದೆ. ಇದೀಗ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದ ಮಹತ್ವಾಕಾಂಕ್ಷಿ SpaDex ಕಾರ್ಯಾಚರಣೆಗೆ ಕ್ಷಣಗಣನೆ ಆರಂಭವಾಗಿದ್ದು, ಇದೇ ಡಿ.30ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಅಂತರೀಕ್ಷದಲ್ಲಿ ಡಾಕಿಂಗ್ ವ್ಯವಸ್ಥೆಯನ್ನು ಪ್ರಯೋಗಕ್ಕೆ ಗುರಿಪಡಿಸುವ ಎರಡು ಬಾಹ್ಯಾಕಾಶ ನೌಕೆಗಳು ನಭಕ್ಕೆ ಚಿಮ್ಮಲಿವೆ. ಈ ಎರಡೂ ನೌಕೆಗಳನ್ನು ಪಿಎಸ್‌ಎಲ್‌ವಿ C-60 ರಾಕೆಟ್ ಮೂಲಕ ಉಡಾವಣೆ ಮಾಡಲಾಗುವುದು ಎಂದು ಇಸ್ರೋ ಮಾಹಿತಿ ನೀಡಿದೆ.