
ಬೆಂಗಳೂರು : ಕರ್ನಾಟಕ ಸರ್ಕಾರ ಮಹತ್ವದ ಆಡಳಿತಾತ್ಮಕ ಹೆಜ್ಜೆ ಇಟ್ಟು, ರಾಜ್ಯದ ವಿವಿಧ ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ನೇಮಕ ಮಾಡಿ ಆದೇಶ ಹೊರಡಿಸಿದೆ. ವಿವಿಧ ಅಭಿವೃದ್ಧಿ ಯೋಜನೆಗಳ ಜಾರಿಗೆ ಮೇಲ್ವಿಚಾರಣೆ ಮತ್ತು ತಪಾಸಣೆಗೆ, ಹಿರಿಯ ಐಎಎಸ್ ಅಧಿಕಾರಿಗಳನ್ನು ಈ ಹುದ್ದೆಗಳಿಗೆ ನಿಯೋಜಿಸಲಾಗಿದೆ.
ಈ ಬಗ್ಗೆ ಇಂದು ರಾಜ್ಯದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿ ಪ್ರಕಟಣೆ ನೀಡಿದ್ದು, ಜಿಲ್ಲೆಗಳಿಗೆ ರಾಜ್ಯ ಮಟ್ಟದ ಪ್ರಮುಖ ಅಧಿಕಾರಿಗಳನ್ನು ಉಸ್ತುವಾರಿ ಕಾರ್ಯದರ್ಶಿಗಳಾಗಿ ನೇಮಿಸಲಾಗಿದೆ.
ಪ್ರಮುಖ ನೇಮಕಾತಿಗಳ ಪಟ್ಟಿಯಲ್ಲಿ:
ರೋಹಿಣಿ ಸಿಂಧೂರಿ ದಾಸರಿ – ಉಡುಪಿ
ತುಳಸಿ ಮದ್ದಿನೇನಿ – ದಕ್ಷಿಣ ಕನ್ನಡ
ಹರ್ಷ ಗುಪ್ತ – ಬೆಂಗಳೂರು ನಗರ
ಡಾ. ಪಿಸಿ ಜಾಫರ್ – ಬೆಂಗಳೂರು ಗ್ರಾಮಾಂತರ
ವಿ. ರಶ್ಮಿ ಮಹೇಶ್ – ರಾಮನಗರ
ಡಾ. ಶಮ್ಲಾ ಇಕ್ಬಾಲ್ – ದಾವಣಗೆರೆ
ಬಿಬಿ ಕಾವೇರಿ – ಶಿವಮೊಗ್ಗ
ಡಾ. ಎಸ್ ಸೆಲ್ವಕುಮಾರ್ – ಮೈಸೂರು
ವಿ. ಅನ್ಬುಕುಮಾರ್ – ಮಂಡ್ಯ
ಡಾ. ಎಂವಿ ವೆಂಕಟೇಶ – ಚಾಮರಾಜನಗರ
ಪಂಕಜ್ ಕುಮಾರ್ ಪಾಂಡೆ – ಕಲಬುರ್ಗಿ
ಡಾ. ಕೆವಿ ತ್ರಿಲೋಕ್ ಚಂದ್ರ – ಬಳ್ಳಾರಿ
ಹೀಗೆ 31 ಜಿಲ್ಲೆಗಳಿಗೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಈ ಅಧಿಕಾರಿಗಳು ಜಿಲ್ಲೆಯಲ್ಲಿ ಯೋಜನೆಗಳ ಮೇಲ್ವಿಚಾರಣೆ, ಅನಿರೀಕ್ಷಿತ ಪರಿಶೀಲನೆ, ವರದಿ ಸಂಗ್ರಹ ಮತ್ತು ಸರ್ಕಾರಕ್ಕೆ ವರದಿ ಸಲ್ಲಿಸುವ ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸಲಿದ್ದಾರೆ.