“ನಾನು ಹಿಂದೂವಾಗಿಯೇ ಸಾಯುತ್ತೇನೆ” – ಡಿಕೆಶಿ ಹೇಳಿಕೆಗೆ ಈಶ್ವರಪ್ಪ ಪ್ರಶಂಸೆ

Date:

spot_img

ಶಿವಮೊಗ್ಗ: “ನಾನು ಹಿಂದೂವಾಗಿ ಹುಟ್ಟಿದ್ದೇನೆ, ಹಿಂದೂವಾಗಿಯೇ ಸಾಯುತ್ತೇನೆ” ಎಂಬ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈಶ್ವರಪ್ಪ ಮಾತನಾಡಿ, “ಡಿಕೆಶಿಯ ಈ ಹೇಳಿಕೆ ಯುವಜನತೆಗೆ ಸ್ಫೂರ್ತಿ ನೀಡುವಂತಿದೆ. ಗಾಂಧೀಜಿ ಹುತಾತ್ಮರಾಗುವ ವೇಳೆ ‘ಹೇ ರಾಮ್’ ಎಂದರು. ಅದು ಡಿಕೆಶಿಗೆ ಸ್ಫೂರ್ತಿ ನೀಡಿರಬಹುದು” ಎಂದರು.

“ಶಿವರಾತ್ರಿ ಕಾರ್ಯಕ್ರಮಕ್ಕೆ ಸದ್ಗುರು ಅವರ ಆಹ್ವಾನಕ್ಕೆ ಡಿಕೆಶಿ ಹೋಗಿರುವುದರಲ್ಲಿ ತಪ್ಪೇನೂ ಇಲ್ಲ. ಅಷ್ಟೇ ಅಲ್ಲ, ಆರೆಸ್ಸೆಸ್‌ನ ವಿಜಯದಶಮಿ ಉತ್ಸವಕ್ಕೆ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಕೂಡಾ ಹೋಗಿದ್ದರು” ಎಂದು ಈಶ್ವರಪ್ಪ ಉದಾಹರಣೆ ನೀಡಿದರು.

“ಕಾಂಗ್ರೆಸ್ ನಾಯಕರಿಗೂ ಹಿಂದೂ ಧರ್ಮದ ಮೇಲೆ ಒಲವಿದೆ, ಆದರೆ ಅದನ್ನು ಹೇಳುವ ಧೈರ್ಯ ಇಲ್ಲ” ಎಂದು ಟೀಕಿಸಿದ ಅವರು, “ನಾನು ಜೀವನದಲ್ಲಿ ಮೊದಲ ಬಾರಿ ಡಿಕೆಶಿಯನ್ನು ಹೊಗಳುತ್ತಿದ್ದೇನೆ. ಅವರ ಮಾತು ಸ್ವಾತಂತ್ರ್ಯ ಪೂರ್ವದ ಸಿದ್ಧಾಂತವನ್ನು ಪ್ರತಿಬಿಂಬಿಸುತ್ತದೆ” ಎಂದು ಹೇಳಿದರು.

ಇದೇ ವೇಳೆ ತಮ್ಮ ರಾಜಕೀಯ ಜೀವನದ ಬಗ್ಗೆ ಮಾತನಾಡಿದ ಅವರು, “ನಾನು ಇಂದು ಈ ಸ್ಥಾನಕ್ಕೆ ಬರುವುದಕ್ಕೆ ಬಿ.ಎಸ್. ಯಡಿಯೂರಪ್ಪ ಮತ್ತು ಆರೆಸ್ಸೆಸ್ ಕಾರಣ. ಅದನ್ನು ನಾನು ಎಂದಿಗೂ ಮರೆಯಲಾರೆ” ಎಂದು ಭಾವುಕತೆ ವ್ಯಕ್ತಪಡಿಸಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಅಡುಗೆಮನೆಯಲ್ಲೇ ಇದೆ ಮ್ಯಾಜಿಕ್ ಲಿಕ್ವಿಡ್: ಅಕ್ಕಿ ತೊಳೆದ ನೀರನ್ನು ಅಪ್ಪಿತಪ್ಪಿಯೂ ಚೆಲ್ಲಬೇಡಿ

ಅಕ್ಕಿ ತೊಳೆದ ನೀರು ಮತ್ತು ಗಂಜಿ ನೀರಿನಿಂದ ಪಡೆಯಬಹುದಾದ ಅದ್ಭುತ ಆರೋಗ್ಯ ಹಾಗೂ ಸೌಂದರ್ಯ ಪ್ರಯೋಜನಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ನೀಟ್ ಹಗರಣ: ಸೋನಂ ವಾಂಗ್ಚುಕ್ ಉಪವಾಸ ಅಂತ್ಯಕ್ಕೆ 3 ಷರತ್ತು

ನೀಟ್ ಪತ್ರಿಕೆ ಸೋರಿಕೆ ಖಂಡಿಸಿ ಉಪವಾಸ ನಿರತರಾಗಿರುವ ಸೋನಂ ವಾಂಗ್ಚುಕ್ ಸತ್ಯಾಗ್ರಹ ಅಂತ್ಯಗೊಳಿಸಲು 3 ಪ್ರಮುಖ ಷರತ್ತು ವಿಧಿಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಆತ್ರಾಡಿ ಶಾಂಭವಿ ಹೋಟೆಲ್ ಆಟಿ ಆಹಾರ ಉತ್ಸವ

ಉಡುಪಿಯ ಶಾಂಭವಿ ಹೋಟೆಲ್‌ನಲ್ಲಿ ಜುಲೈ 24 ರಿಂದ ಸಾಂಪ್ರದಾಯಿಕ 'ಆಟಿ ದ ಒಂಜಿ ಊಟ' ಆಹಾರ ಉತ್ಸವ ಆರಂಭವಾಗಲಿದ್ದು, ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಪರ್ಕಳ ಶಿಶು ಸ್ಪರ್ಧೆ ಮತ್ತು ತಾಯಿ ಮಗುವಿನ ಆರೋಗ್ಯ ಶಿಬಿರ 2026

ಪರ್ಕಳದಲ್ಲಿ ನಡೆದ ತಾಯಿ-ಮಗುವಿನ ಆರೋಗ್ಯ ಮಾಹಿತಿ ಕಾರ್ಯಕ್ರಮ ಹಾಗೂ ಮಕ್ಕಳ ಶಿಶು ಸ್ಪರ್ಧೆ 2026 ರ ಪೂರ್ಣ ಮಾಹಿತಿ ಇಲ್ಲಿದೆ ಓದಿ.