
ಹುಕ್ಕೇರಿ : ಇಂಗಳಿ ಗ್ರಾಮದಲ್ಲಿ ನಡೆದ ಶ್ರೀರಾಮ ಸೇನೆಯ ಕಾರ್ಯಕರ್ತರ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಹುಕ್ಕೇರಿ ಪೊಲೀಸ್ ಠಾಣೆಯ ಪಿಎಸ್‌ಐ ನಿಖಿಲ್ ಕಾಂಬ್ಳೆ ಅವರನ್ನು ಅಮಾನತುಗೊಳಿಸಿ ಎಸ್‌ಪಿ ಭೀಮಾಶಂಕರ್ ಗುಳೇದ್ ಆದೇಶ ಹೊರಡಿಸಿದ್ದಾರೆ.
ಜೂನ್ 26ರಂದು ಶ್ರೀರಾಮ ಸೇನೆಯ ಕಾರ್ಯಕರ್ತರು ಒಂದು ಗೋವಿನೊಂದಿಗೆ ಠಾಣೆಗೆ ದೂರು ನೀಡಲು ತೆರಳಿದ್ದರು. ಆದರೆ ಪೊಲೀಸರು ಎಫ್‌ಐಆರ್ ದಾಖಲಿಸದೇ ನಿರ್ಲಕ್ಷ್ಯ ವಹಿಸಿದ್ದು, ಈ ಪ್ರಕರಣವು ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿತು. ಅಲ್ಲದೆ, ಗಡಿಪಾರ ಆದ ರೌಡಿಶೀಟರ್ ಮಹಾವೀರ್ ಸೊಲ್ಲಾಪುರೆಯನ್ನು ಬಿಡಿಸಿ ಕಳುಹಿಸಿದ ಅಂಶಗಳೂ ಈ ಕ್ರಮಕ್ಕೆ ಕಾರಣವಾಗಿವೆ.
ಘಟನೆ ಸಂಬಂಧಿತ ಮಾಹಿತಿ ಮೆಲುಕು ಹಾಕದಿರುವುದು, ಎಫ್‌ಐಆರ್ ದಾಖಲು ಮಾಡುವಲ್ಲಿ ವಿಳಂಬ ಮತ್ತು ಸಂಘಟನೆಯ ಕಾರ್ಯಕರ್ತರ ಭದ್ರತೆ ಕಡೆಗಣಿಸಿದ ಹಿನ್ನೆಲೆಯಲ್ಲಿ ಎಸ್‌ಪಿ ತುರ್ತು ಕ್ರಮ ಕೈಗೊಂಡಿದ್ದಾರೆ. ಜುಲೈ 3ರಂದು ಶ್ರೀರಾಮ ಸೇನೆಯಿಂದ ‘ಇಂಗಳಿ ಚಲೋ’ ಪ್ರತಿಭಟನೆಗೂ ಮೊದಲೇ ಪಿಎಸ್‌ಐ ಅವರನ್ನು ಅಮಾನತು ಮಾಡಿ ಬೆಳಗಾವಿ ಎಸ್‌ಪಿ ಆದೇಶ ಹೊರಡಿಸಿದ್ದಾರೆ.