
ಅಲಿಗಢ : ಉತ್ತರಪ್ರದೇಶದ ಅಲಿಗಢದಲ್ಲಿ ನಡೆದ 5 ದಿನಗಳ ಪ್ರವಾಸದ ವೇಳೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಸ್ವಯಂಸೇವಕರೊಂದಿಗೆ ಮಾತನಾಡಿ, “ಎಲ್ಲರಿಗೂ ಒಂದೇ ದೇಗುಲ, ಒಂದೇ ಬಾವಿ, ಒಂದೇ ಸ್ಮಶಾನ” ಎಂಬ ತತ್ವವನ್ನು ಅನುಸರಿಸುವ ಮೂಲಕ ಹಿಂದೂ ಸಮಾಜವು ಜಾತಿ ತಾರತಮ್ಯವನ್ನು ನಿವಾರಿಸಬೇಕು ಎಂದು ಹೇಳಿದರು.
ಸಾಮಾಜಿಕ ಏಕತೆಗಾಗಿ ಸಂಘದ ಕಾರ್ಯಕರ್ತರು ಸಮಾಜದ ಎಲ್ಲ ವರ್ಗಗಳಿಗೆ ತಲುಪಬೇಕು, ಎಲ್ಲರನ್ನೂ ಮನೆಗೆ ಆಹ್ವಾನಿಸಿ, ಬೇರುಮಟ್ಟದಲ್ಲಿ ಸಾಮರಸ್ಯದ ಸಂದೇಶ ಹರಡಬೇಕು ಎಂಬುದಾಗಿ ಸಲಹೆ ನೀಡಿದರು. ಹಬ್ಬಗಳನ್ನು ಸಮೂಹವಾಗಿ ಆಚರಿಸುವ ಮೂಲಕ ರಾಷ್ಟ್ರೀಯ ಒಗ್ಗಟ್ಟಿಗೆ ನಾಂದಿಯಾಗಬೇಕು ಎಂದು ಸೂಚಿಸಿದರು.
ಭಾರತೀಯ ಸಮಾಜದ ಶಕ್ತಿಯು ಮೌಲ್ಯಗಳಲ್ಲಿ ಸ್ಥಾಪಿತವಾಗಿದೆ ಎಂದು ಅವರು ಹೇಳಿದ್ದಾರೆ. ಆರೆಸ್ಸೆಸ್ ಶತಮಾನೋತ್ಸವದ ಅಂಗವಾಗಿ ಈ ಮೌಲ್ಯಗಳಾದ್ಯಂತ ಸಾಮಾಜಿಕ ಆಂದೋಲನವನ್ನು ಆರಂಭಿಸಲಾಗುತ್ತಿದೆ. ಈ ದೃಷ್ಟಿಯಿಂದ ಸಂಘವು ಯೋಜನೆ ಮತ್ತು ಕಾರ್ಯತಂತ್ರಗಳನ್ನು ರೂಪಿಸಿದೆ ಎಂದು ಅವರು ತಿಳಿಸಿದ್ದಾರೆ.