
ಹೆಬ್ರಿ : ಹೆಬ್ರಿ ಗಣೇಶೋತ್ಸವದ ಸುವರ್ಣ ಸಂಭ್ರಮದ ಪ್ರಯುಕ್ತ ಪುರುಷ ಮತ್ತು ಮಹಿಳೆಯರಿಗಾಗಿ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಈ ಕ್ರೀಡಾಕೂಟಕ್ಕೆ ಮಹಿಳಾ ಸಮಿತಿಯ ಸಂಚಾಲಕಿ ಬಾನು ಪಿ. ಬಲ್ಲಾಲ್ ಅವರು ಚಾಲನೆ ನೀಡಿದರು.

ಮುಕ್ತ ಸ್ಪರ್ಧೆಗಳಿಗೆ ಚಾಲನೆ
ಗಣೇಶೋತ್ಸವ ಸಮಿತಿ ಅಧ್ಯಕ್ಷ ಜನಾರ್ಧನ್ ಹೆಚ್. ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಪುರುಷರ ಮುಕ್ತ ವಾಲಿಬಾಲ್, ಮಹಿಳೆಯರ ಮುಕ್ತ ತ್ರೋಬಾಲ್ ಹಾಗೂ ಮುಕ್ತ ಹಗ್ಗ ಜಗ್ಗಾಟ ಸ್ಪರ್ಧೆಗಳು ಯಶಸ್ವಿಯಾಗಿ ಜರುಗಿದವು. ಈ ಸಂದರ್ಭದಲ್ಲಿ ಮಾತನಾಡಿದ ಬಾನು ಪಿ. ಬಲ್ಲಾಲ್ ಅವರು ಸ್ಪರ್ಧಾಳುಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಬಹುಮಾನಗಳ ಪ್ರಾಯೋಜಕರಾದ ವಸಂತ ನಾಯ್ಕ್ ವಿ ಎಸ್ ಎಸ್ , ಸುದೀಪ್ ದೇವಾಡಿಗ , ಸಮಿತಿಯ ಕಾರ್ಯದರ್ಶಿ ರಾಜೇಶ್ ಆಚಾರ್ಯ, ಸುವರ್ಣ ಸಂಭ್ರಮ ಕ್ರೀಡಾ ಸಂಚಾಲಕ ಕರುಣಾಕರ ಸೇರಿಗಾರ್ ಉಪಾಧ್ಯಕ್ಷರುಗಳಾದ ಎಚ್ ಕೆ ಸುಧಾಕರ , ದಿವಾಕರ್ ಶೆಟ್ಟಿ ಸೀತಾನದಿ , ದೈಹಿಕ ಶಿಕ್ಷಕರಾದ ಯಶೋಧ ಶೆಟ್ಟಿ , ಉದಯ್ ಪ್ರಭು ಹುತ್ತುರ್ಕೆ, ಸಮಿತಿಯ ಸಂಚಾಲಕರಾದ ವಸಂತ್ ಶೆಟ್ಟಿ , ಅರುಣ್ ಹೆಗ್ಡೆ , ಸಂತೋಷ್ ನಾಯಕ್, ಉಪ ಸಮಿತಿಯ ವಿದ್ಯಾ ಜನಾರ್ಧನ್, ವಿದ್ಯಾಮಲ್ಯ , ನಿತೀಶ್ ಎಸ್ ಪಿ, ನಾಗರಾಜ್ ಬಿ ಶೆಟ್ಟಿ , ಪ್ರಸನ್ನ ದೇವಾಡಿಗ , ಶೋಭಾ ದೇವಾಡಿಗ ಮುಂತಾದವರು ಉಪಸ್ಥಿತರಿದ್ದರು.

ವೇದಿಕೆ ಸಮಿತಿಯ ಸಂಚಾಲಕ ಪ್ರಸಾದ್ ಶೆಟ್ಟಿ ಕಾರ್ಯಕ್ರಮವನ್ನು ನಿರ್ವಹಿಸಿದರು.
