spot_img

ಗ್ಯಾರಂಟಿ ಸಮಿತಿ ಕಾಂಗ್ರೆಸ್ ಕಾರ್ಯಕರ್ತರಿಗೆ ‘ಗಂಜಿ ಕೇಂದ್ರ’ ಆಗಬಾರದು: ಬಿಜೆಪಿ

Date:

spot_img

ಪಂಚ ಗ್ಯಾರಂಟಿಗಳ ಘೋಷಣೆಯೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದ ರಾಜ್ಯ ಕಾಂಗ್ರೆಸ್ ಪಕ್ಷವು ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಎಡವಿರುವುದು ಮಾತ್ರವಲ್ಲದೇ ರಾಜ್ಯದಲ್ಲಿ ಅಭಿವೃದ್ಧಿ ಚಟುವಟಿಕೆಗಳು ಕುಂಠಿತವಾಗಿರುವುದು ಈಗಾಗಲೇ ಜಗತ್‌ ಜಾಹಿರವಾಗಿದ್ದು, ಭಾರತೀಯ ಜನತಾ ಪಾರ್ಟಿಯು ಪಂಚ ಗ್ಯಾರಂಟಿಗಳ ಅನುಷ್ಠಾನದಲ್ಲಿ ಆಗಬಹುದಾದ ಬಾಧಕಗಳ ಬಗ್ಗೆ ವಿರೋಧ ವ್ಯಕ್ತಪಡಿಸಿತ್ತೇ ವಿನಃ ಪಂಚಗ್ಯಾರಂಟಿಗಳನ್ನು ವಿರೋಧಿಸಿಲ್ಲ.

ಇದೀಗ ರಾಜ್ಯ ಸರ್ಕಾರವು ಪಂಚ ಗ್ಯಾರಂಟಿ ಯೋಜನೆಯ ಅನುಷ್ಠಾನದಲ್ಲಿ ಎಡವಿದ್ದು, ಸಂಪನ್ಮೂಲ ಹೊಂದಿಸಲು ಒದ್ದಾಡುತ್ತಿದ್ದರೂ ಅದಕ್ಕೊಂದು ಅನುಷ್ಠಾನ ಸಮಿತಿ ರಚಿಸಿ ಅದಕ್ಕೆ ತನ್ನ ಕಾರ್ಯಕರ್ತಗಳನ್ನು ಅಧ್ಯಕ್ಷ, ಉಪಾಧ್ಯಕ್ಷರನ್ನಾಗಿ ನೇಮಿಸಿ ಅವರಿಗೆ ವೇತನ ನಿಗಧಿಪಡಿಸಿ ಜನರ ತೆರಿಗೆಯ ಹಣ ಕಾಂಗ್ರೇಸ್ ಕಾರ್ಯಕರ್ತರ ಜೇಬಿನ ಪಾಲಾಗುತಿದ್ದು, ಈ ರೀತಿ ತೆರಿಗೆಯ ಹಣ ಪೋಲಾಗುತ್ತಿರುವುದನ್ನು ವಿಧಾನಸಭೆಯಲ್ಲಿ ಶಾಸನಬದ್ಧವಾಗಿ ಪ್ರಶ್ನಿಸಲಾಗಿತ್ತು ಮತ್ತು ಇದು ಒಬ್ಬ ಜವಬ್ದಾರಿಯುತ ಶಾಸಕನ ಕರ್ತವ್ಯ ಕೂಡ ಆಗಿದೆ. ಅಂಬೇಡ್ಕರ್ ರಚಿತ ಭಾರತದ ಸಂವಿಧಾನದ ಪ್ರಕಾರ ನಿಯಮಗಳ ಆಯ್ಕೆಗೊಂಡ ಶಾಸಕರ ಸ್ಥಾನಮಾನಗಳ ಬಗ್ಗೆ ಮಾನದಂಡ ಹಾಗೂ ಅವರಿಗಿರುವ ಅಧಿಕಾರಗಳ ಬಗ್ಗೆ ತಿಳಿ ಹೇಳಿದ್ದು, ಅದಕ್ಕೆ ಚ್ಯುತಿ ಬಂದಾಗ ಶಾಸನ ಸಭೆಯಲ್ಲಿ ಪ್ರಶ್ನಿಸುವುದು ಶಾಸಕನ ಹಕ್ಕು ಮತ್ತು ಕರ್ತವ್ಯ ಕಾರ್ಕಳ ತಾಲೂಕಿನ ಕಾಂಗ್ರೇಸ್‌ ನಾಯಕರೆನೆಸಿಕೊಂಡವರು ಉಡುಪಿ ಜಿಲ್ಲಾ ಅನುಷ್ಠಾನ ಸಮಿತಿಯಲ್ಲೂ ಉಪಾಧ್ಯಕ್ಷರಾಗಿದ್ದುಕೊಂಡು ವೇತನ ಪಡೆಯುವುದು ಎಷ್ಟರ ಮಟ್ಟಿಗೆ ಸರಿ? ಈ ಬಗ್ಗೆ ಕಾಂಗ್ರೇಸ್ ನಾಯಕರು ಆತ್ಮ ವಿಮರ್ಶೆ ಮಾಡಿಕೊಳ್ಳಲಿ.

ಕಾಂಗ್ರೇಸ್ ನಾಯಕರುಗಳು ಪುತ್ತೂರು ತಾಲೂಕಿನಲ್ಲಿ ಸರಕಾರಿ ಮೆಡಿಕಲ್‌ ಕಾಲೇಜು ಸ್ಥಾಪನೆಯ ಬಗ್ಗೆ ಬಜೆಟ್ ನಲ್ಲಿ ಘೋಷಣೆಯಾದಾಗ ಪುತ್ತೂರು ಶಾಸಕನ ಅಭಿನಂದಿಸುವ ಭರದಲ್ಲಿ ಈ ಬೇಡಿಕೆ ಸುಮಾರು ಒಂದುವರೆ ದಶಕಗಳ ಹಿಂದಿನದ್ದು, ಇದಕ್ಕೆ ಈ ಹಿಂದಿನ ಶಾಸಕರುಗಳ ಪ್ರಯತ್ನ ಕೂಡ ಇದೆ ಎನ್ನುವುದನ್ನು ಮರೆತು ಬಾಯಿ ಚಪಲಕ್ಕಾಗಿ ಕಾರ್ಕಳ ಶಾಸಕರ ಬಗ್ಗೆ ಆಡಿರುವ ಮಾತುಗಳು ಖಂಡನೀಯ, ಕಾರ್ಕಳದಲ್ಲಿ ನಾಲ್ಕು ಬಾರಿ ಶಾಸಕ ಮತ್ತು ಎರಡು ಖಾತೆಗಳ ಮಂತ್ರಿಯಾಗಿ ಅದನ್ನು ಯಶಸ್ವಿಯಾಗಿ ನಿಭಾಯಿಸಿದ ಸುನಿಲ್ ಕುಮಾರ್ ರವರಿಗೆ ಅಭಿವೃದ್ಧಿಯ ವಿಷಯದಲ್ಲಿ ಕಾಂಗ್ರೇಸ್ ನಾಯಕರುಗಳಿಂದ ಪಾಠ ಕಲಿಯುವ ಅಗತ್ಯವಿಲ್ಲ. ಕಾರ್ಕಳದಲ್ಲಿ ಈಗಾಗಲೇ ಆರಂಭವಾಗಿರುವ ಐಟಿಐ, ಕಾಲೇಜು, ಮಹಿಳಾ ಪಾಲಿಟೆಕ್ನಿಕ್ ಕಾಲೇಜು, ಮಹಿಳಾ ನರ್ಸಿಂಗ್ ಕಾಲೇಜು ಯಾರ ಕಾಲದಲ್ಲಿ ಆಗಿರುತ್ತದೆ ಎನ್ನುವುದನ್ನು ಕಾಂಗ್ರೆಸ್ ನಾಯಕರು ತಿಳಿದುಕೊಳ್ಳುವುದು ಒಳಿತು, ಕುಮಾರ್‌ರವರು ಶಾಸನ ಸಭೆಯಲ್ಲಿ ಒಬ್ಬ ಶಾಸನಬದ್ಧವಾಗಿ ಇರುವ ಹಕ್ಕು ಮತ್ತು ಅಧಿಕಾರಗಳ ಬಗ್ಗೆ ಮಾತನಾಡಿದರೇ ಹೊರತು ನಿಮ್ಮ ರೀತಿ ಗಂಜಿ ಕೇಂದ್ರಗಳಿಗೆ ಎಡಕಾಡಲಿಲ್ಲ. ಬರೀ ವಿರೋಧ ಮಾಡಲಿಕ್ಕಾಗಿಯೇ ವಿರೋಧ ಮಾಡುತ್ತಿರುವ ಮನಸ್ಥಿತಿಯಿಂದ ಹೊರಬಂದು ಕಾರ್ಕಳದ ಅಭಿವೃದ್ಧಿಗೆ ಕಾಂಗ್ರೆಸ್ ನಾಯಕರುಗಳು ಕೈಜೋಡಿಸಲಿ, ಇಲ್ಲದ್ದಿದರೆ ಜನತೆಯೇ ನಿಮಗೆ ತಕ್ಕ ಪಾಠಕಲಿಸುವ ದಿನ ದೂರವಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದರು

ರವೀಂದ್ರ ಮೊಯ್ಲಿ ವಕ್ತಾರರು ಭಾರತೀಯ ಜನತಾ ಪಾರ್ಟಿ ಕಾರ್ಕಳ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಧರ್ಮಸ್ಥಳ ಪ್ರಕರಣ: ತಿಮರೋಡಿ, ಸಮೀರ್, ಮಟ್ಟಣ್ಣನವರ್ ರವರ ತನಿಖೆಗೆ ಸ್ನೇಹಮಯಿ ಕೃಷ್ಣ ಆಗ್ರಹ!

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿರುವುದಾಗಿ ಆರೋಪಿಸಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ (SP) ಪತ್ರ ಬರೆದಿದ್ದಾರೆ.

ನೆಲದ ಮೇಲೆ ಕುಳಿತು ಊಟ ಮಾಡುವುದರ ಅದ್ಭುತ ಪ್ರಯೋಜನಗಳು

ಇತ್ತೀಚಿನ ಜೀವನಶೈಲಿ ಬದಲಾವಣೆಗಳ ನಡುವೆ, ಹಿಂದಿನ ಉತ್ತಮ ಅಭ್ಯಾಸಗಳು ಮರೆಯಾಗುತ್ತಿವೆ. ಕೆಲ ವರ್ಷಗಳ ಹಿಂದೆ ಕುಟುಂಬದವರೆಲ್ಲಾ ಒಟ್ಟಿಗೆ ನೆಲದ ಮೇಲೆ ಕುಳಿತು ಊಟ ಮಾಡುತ್ತಿದ್ದ ದೃಶ್ಯ ಈಗ ವಿರಳ.

ಕೆಜಿಎಫ್ ಬಾಬು ಮನೆಗೆ R.T.O ದಾಳಿ: ಐಷಾರಾಮಿ ಕಾರುಗಳ ತೆರಿಗೆ ಪರಿಶೀಲನೆ!

ರಾಜಕೀಯ ಮುಖಂಡ ಕೆಜಿಎಫ್ ಬಾಬು ಅವರ ಮನೆಗೆ ಇಂದು ಬೆಳ್ಳಂಬೆಳಗ್ಗೆ ಆರ್ಟಿಓ ಅಧಿಕಾರಿಗಳು ದಾಳಿ ನಡೆಸಿ ಶಾಕ್ ನೀಡಿದ್ದಾರೆ. ಐಷಾರಾಮಿ ಕಾರುಗಳ ತೆರಿಗೆ ಪಾವತಿ ಕುರಿತು ಪರಿಶೀಲನೆ ನಡೆಸಲು ಈ ದಾಳಿ ನಡೆಸಲಾಗಿದೆ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಾತ್ಸಲ್ಯ ವಿದ್ಯಾನಿಧಿ ವಿತರಣಾ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್, ಉಡುಪಿ ಯೋಜನಾ ಕಚೇರಿಯಲ್ಲಿ ವಾತ್ಸಲ್ಯ ವಿದ್ಯಾನಿಧಿ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.