
ಹಿರಿಯಡ್ಕ: ಎಂಜಿನಿಯರ್ಸ್ ಡೇ ಅಂಗವಾಗಿ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಹಿರಿಯಡ್ಕ ಶಾಖೆಯಲ್ಲಿ ಹಿರಿಯ ಸಿವಿಲ್ ಎಂಜಿನಿಯರ್ ಪ್ರದೀಪ್ ಭಂಡಾರ್ಕರ್ ಅವರನ್ನು ಸನ್ಮಾನಿಸಲಾಯಿತು.

ಈ ಅಭಿನಂದನಾ ಸಮಾರಂಭದಲ್ಲಿ ಸೊಸೈಟಿಯ ಶಾಖಾ ಸಲಹಾ ಸಮಿತಿಯ ಅಧ್ಯಕ್ಷ ವಿಜೇತ್ ಕುಮಾರ್ ಬೆಳ್ಳರ್ಪಾಡಿ ಮತ್ತು ಸದಸ್ಯರಾದ ವಾಸು ಪ್ರಭು ನರ್ಜೆ, ಸದಾನಂದ ಪ್ರಭು ಪೆರ್ಣಂಕಿಲ ಉಪಸ್ಥಿತರಿದ್ದರು. ಶಾಖಾ ವ್ಯವಸ್ಥಾಪಕಿ ಶಾಲಿನಿ, ಸಿಬ್ಬಂದಿ ಪ್ರೀತಿ ಪ್ರಭು, ಹಾಗೂ ಪಿಗ್ಮಿ ಸಂಗ್ರಾಹಕರಾದ ಮುದ್ದು ನಾಯಕ್, ಉಪೇಂದ್ರ ನಾಯಕ್, ರಮ್ಯಾ ನಾಯಕ್, ಚಿನ್ನಾಭರಣ ಮೌಲ್ಯಮಾಪಕ ಉದಯ ಕುಮಾರ್, ಮತ್ತು ಗ್ರಾಹಕರಾದ ಮಹೇಶ್ ಮರಾಠೆ ಹಾಗೂ ರಮಾನಂದ ನಾಯಕ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಾಖೆಯ ಸಿಬ್ಬಂದಿ ಶ್ರೀಶ ನಾಯಕ್ ಎಳ್ಳಾರೆ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು.
