spot_img

ಅಪರೂಪದ ಹೃದಯ ರೋಗದಿಂದ ಬಳಲುತ್ತಿದ್ದ ಗರ್ಭಿಣಿಗೆ ಯಶಸ್ವಿ ಚಿಕಿತ್ಸೆ ನೀಡಿದ ಬಸವೇಶ್ವರ ಆಸ್ಪತ್ರೆಯ ವೈದ್ಯರು

Date:

spot_img

ಕಲಬುರ್ಗಿ: 31 ವರ್ಷ ವಯಸ್ಸಿನ ಲಕ್ಷ್ಮಿ ಎಂಬ ಮಹಿಳೆಯು ಅಪರೂಪದ ಹೃದಯ ರೋಗದಿಂದ ಬಳಲುತ್ತಿದ್ದಳು. ಚಿಕಿತ್ಸೆಗಾಗಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಳು. ಜೀವಕ್ಕೆ ಅಪಾಯಕಾರಿಯಾದ ಅಪರೂಪದ ಹೃದಯ ಸಂಬಂಧಿ ಕಾಯಿಲೆ ಸಮಸ್ಯೆಯಿಂದ ಬಳಲುತ್ತಿದ್ದ ಈಕೆಗೆ 8 ತಿಂಗಳು ಗರ್ಭಿಣಿಯಾಗಿರುವಾಗ ಇವಳಿಗೆ ಆಂಟಿ ಪಾರ್ಟಂ ಎಕ್ಲಾಂಪ್ಸಿಯಾ ತೊಂದರೆಯಿದೆ ಎಂದು ಗುರುತಿಸಿ ತಕ್ಷಣವೆ ಆಸ್ಪತ್ರೆಯಲ್ಲಿ ಇಂಟ್ಯುಬೇಷನ್ ಮಾಡಿ ಆಂಟಿ ಹೈಪರ್ ಟೆನ್ಸಿವ್ ಗಳಿಂದ ಚಿಕಿತ್ಸೆ ನೀಡಲಾಯಿತು ಆದರೆ ಅವಳಿಗೆ ಗರ್ಭಾವಸ್ಥೆಯ ಮಧುಮೇಹ ( Gestational Diabetes), ಮತ್ತು ಹೈಪೋಥೈರಾಯಿಡಿಸಂ ಹಾಗೂ HBsag ಪಾಸಿಟಿವ್ ಇರುವುದು ಕಂಡು ಬಂತು. ಗರ್ಭಿಣಿಯ ಜೀವ ಉಳಿಸುವ ಸಲುವಾಗಿ ಸಿಸೇರಿಯನ್ ಶಸ್ತ್ರಚಿಕಿತ್ಸೆ ಮಾಡಲಾಯಿತು. ಅವಳಿಗೆ ಅವಳಿ ಎರಡು ಹೆಣ್ಣು ಮಕ್ಕಳು ಜನಿಸಿದವು ಶಸ್ತ್ರ ಚಿಕಿತ್ಸೆ ಸುಗಮವಾಗಿ ನಡೆದು ಮಕ್ಕಳು ಸಹ ಸುರಕ್ಷಿತವಾಗಿದ್ದವು ಆದರೆ ಗರ್ಭಿಣಿಗೆ ಟಕೋಟ್ಸುಬೋ ಕಾರ್ಡಿಯೋಮ್ಯೋಪತಿ ( Takotsubo cardiomyopathy) ಎಂಬ ಅಪರೂಪದ ಹೃದಯರೋಗ ತಗುಲಿ ಕೊಂಡಿತು. ಇದರಲ್ಲಿ ಹೃದಯದ ಇಜೇಕ್ಷನ್ ಫ್ರಾಕ್ಷನ್ ಕೇವಲ ಪ್ರತಿಶತ 40 ಇತ್ತು. ತಕ್ಷಣ ಎಂ ಆರ್ ಐ ಮಾಡಲು ನಿರ್ಧರಿಸಲಾಯಿತು. ಪರೀಕ್ಷೆಯಲ್ಲಿ ಆ ಹೆಣ್ಣು ಮಗಳಿಗೆ ಪೋಸ್ಟೀರಿಯರ್ ರಿವರ್ಸಿಬಲ್ ಎನ್ಸೆಫಲೋಪತಿ ಸಿಂಡ್ರೋಮ್ (PRES) ಲಕ್ಷಣಗಳು ಕಂಡು ಬಂದವು. ಇದನ್ನು ಗಮನಿಸಿದ ಆಸ್ಪತ್ರೆಯ ನುರಿತ ವೈದ್ಯರ ತಂಡ ತಕ್ಷಣ ಚಿಕಿತ್ಸೆ ಮುಂದುವರಿಸಿತು ಕೂಡಲೆ ಚಿಕಿತ್ಸೆಗೆ ಸ್ಪಂದಿಸಿದ ಆ ರೋಗಿಗೆ ಶಸ್ತ್ರಚಿಕಿತ್ಸಯ ಎರಡನೆಯ ದಿನವೆ ಎಕ್ಸ್ಟ್ಯಬೇಟ್ ಮಾಡಿ ಚಿಕಿತ್ಸೆ ಮುಂದುವರಿಸಿದಾಗ ಅವಳ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ ಕಂಡು ಬಂದಿತು. ಐದನೆಯ ದಿನ ಅವಳನ್ನು ಪರೀಕ್ಷೆಗೆ ಒಳಪಡಿಸಿದಾಗ ಎಕೋಕಾರ್ಡಿಯೋಗ್ರಾಂ ಪರೀಕ್ಷೆಯಲ್ಲಿ ಹೃದಯದ ಸಾಮರ್ಥ್ಯ ಅತ್ಯುತ್ತಮವಾಗಿರುವದು ದೃಢಪಟ್ಟಿದ್ದು ಅವಳು ಅಪಾಯದಿಂದ ಪಾರಾಗಿದ್ದರಿಂದ ಅವಳಿಗೆ ನಿರಂತರ ಚಿಕಿತ್ಸೆ ನೀಡಿದ ವೈದ್ಯಕೀಯ ತಂಡಕ್ಕೆ ಸಂತೋಷವಾಯಿತು.

ಈ ಗರ್ಭಿಣಿ ಮಹಿಳೆಗೆ ಚಿಕಿತ್ಸೆ ನೀಡಿದ ಬಸವೇಶ್ವರ ಆಸ್ಪತ್ರೆಯ ವೈದ್ಯರ ತಂಡದಲ್ಲಿ ಸ್ತ್ರೀರೋಗ ಹಾಗೂ ಪ್ರಸೂತಿ ವಿಭಾಗದ ಡಾ ಮೀನಾಕ್ಷಿ ದೇವರಮನಿ ನೇತ್ರತ್ವ ವಹಿಸಿದ್ದರು. ಹಿರಿಯ‌ ತಜ್ಞ ವೈದ್ಯರಾದ ಡಾ ನೀತಾ ಹರವಾಳ, ಡಾ ಭಾಗ್ಯಶ್ರೀ ಪಾಟೀಲ್, ಡಾ ಸಂಜನಾ ಪಾಟೀಲ್, ಡಾ ಪೂಜಾ ಪಾಟೀಲ್ , ಹೃದಯ ರೋಗ ತಜ್ಞರಾದ ಡಾ ಈರಣ್ಣ ಹೀರಾಪೂರ, ಡಾ ಸೋಹೈಲ್, ಡಾ ವಿಕಾಸ ಜೋಶಿ , ಡಾ ಮಂಜುಶ್ರೀ ಅವರ ಜೊತೆ ಸ್ನಾತಕೋತ್ತರ ಪದವಿ ವೈದ್ಯರಾದ ಡಾ ಮೇರಿ, ಆಶಾ ಡಿ , ಡಾ ಅನುಪಮಾ ಎವಳೆ, ಹಾಗೂ ಡಾ ಅನುಶ್ರೀ ಸಹ ಸಕ್ರಿಯವಾಗಿ ಪಾಲ್ಗೊಂಡಿದ್ದರು. ತಾಯಿ ಮತ್ತು ಮಕ್ಕಳ ಸುರಕ್ಷತೆಗೆ ಶ್ರಮಿಸಿದ ವೈದ್ಯರ ತಂಡಕ್ಕೆ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ ಉಪಾಧ್ಯಕ್ಷರಾದ ರಾಜಾ ಭಿ ಭೀಮಳ್ಳಿ, ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ, ಆಸ್ಪತ್ರೆಯ ಸಂಚಾಲಕರಾದ ಡಾ ಕಿರಣ್ ದೇಶಮುಖ್, ವೈದ್ಯಕೀಯ ಅಧಿಕ್ಷಕರಾದ ಡಾ ಮಲ್ಲಿಕಾರ್ಜುನ ತೇಗನೂರ ಅಭಿನಂದನೆ ಸಲ್ಲಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಖಾಲಿ ಹೊಟ್ಟೆಗೆ ಮೆಂತೆ ಕಾಳು ನೀರು: ಹಲವು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ

ಮೆಂತೆ ಕಾಳುಗಳನ್ನು ರಾತ್ರಿಯಿಡಿ ನೆನೆಸಿಟ್ಟು, ಬೆಳಗ್ಗೆ ಖಾಲಿ ಹೊಟ್ಟೆಗೆ ಆ ನೀರನ್ನು ಸೇವಿಸುವುದರಿಂದ ಹಲವಾರು ರೋಗಗಳಿಂದ ಮುಕ್ತಿ ಪಡೆಯಬಹುದು.

ಧರ್ಮಸ್ಥಳ ಎಸ್‌ಐಟಿ ತನಿಖೆ: ಕ್ಷೇತ್ರದ ವಿಶ್ವಾಸ ಇನ್ನಷ್ಟು ಬಲಗೊಳ್ಳಲಿದೆ- ಸಚಿವ ಎಂ.ಬಿ. ಪಾಟೀಲ್

ಧರ್ಮಸ್ಥಳದ ಕುರಿತು ನಡೆಯುತ್ತಿರುವ ಎಸ್‌ಐಟಿ ತನಿಖೆಯಿಂದ ಆ ಕ್ಷೇತ್ರದ ಮೇಲಿನ ಜನರ ವಿಶ್ವಾಸ ಇನ್ನಷ್ಟು ಬಲಗೊಳ್ಳಲಿದೆ ಎಂದು ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.

ಅಪ್ರಾಪ್ತೆಯನ್ನು ಗರ್ಭವತಿಯನ್ನಾಗಿಸಿದ ಯುವಕ: ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು, ಆರೋಪಿಗಾಗಿ ಶೋಧ

ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಆಕೆಯನ್ನು ಗರ್ಭವತಿಯನ್ನಾಗಿಸಿದ ಆರೋಪಕ್ಕೆ ಸಂಬಂಧಿಸಿದಂತೆ, ಅನ್ಯಕೋಮಿನ ಯುವಕನ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆದರ್ಶ ಆಸ್ಪತ್ರೆಯಲ್ಲಿ ನೂತನ ಹೊರರೋಗಿ ವಿಭಾಗ ಉದ್ಘಾಟನೆ

ನಗರದ ಆದರ್ಶ ಆಸ್ಪತ್ರೆಯಲ್ಲಿ ನೂತನ ಹೊರರೋಗಿ ವಿಭಾಗ ಉದ್ಘಾಟನೆಯಾಗಿದ್ದು, ಇನ್ನು ಮುಂದೆ ಹೃದ್ರೋಗ ತಜ್ಞ ಡಾ. ಸುಹಾಸ್ ಜಿ.ಸಿ. ಅವರು ಇಲ್ಲಿ ಸೇವೆ ಲಭ್ಯವಿದೆ.