
ಹೆಬ್ರಿ: ಲೋಕಕಲ್ಯಾಣಕ್ಕಾಗಿ ಹೆಬ್ರಿ ಶ್ರೀ ಅನಂತಪದ್ಮನಾಭ ಪಾದಯಾತ್ರಾ ಸಮಿತಿಯ ವಿಪ್ರ ಬಾಂಧವರು ಹೆಬ್ರಿಯ ಅನಂತಪದ್ಮನಾಭ ದೇವಸ್ಥಾನದಿಂದ ನಾರಾವಿಯ ಶ್ರೀ ಸೂರ್ಯನಾರಾಯಣ ದೇವಸ್ಥಾನದವರೆಗೆ ಭಕ್ತಿ ಪಾದಯಾತ್ರೆ ನಡೆಸಿದರು.
ಗಿಲ್ಲಾಳಿ ವಿಷ್ಣುಮೂರ್ತಿ ಆಚಾರ್ಯ, ಬಲ್ಲಾಡಿ ಚಂದ್ರಶೇಖರ ಭಟ್ ಮತ್ತು ಹೆಬ್ರಿ ಸುದರ್ಶನ ಜೋಯಿಸ್ ಅವರ ನೇತೃತ್ವದಲ್ಲಿ ನಡೆದ ಈ ಪಾದಯಾತ್ರೆಯಲ್ಲಿ ರಾಘವೇಂದ್ರ ಭಟ್ ದುಗ್ಗೋಡು ಉಪ್ಪಳ, ವೆಂಕಟರಮಣ ಕಲ್ಕೂರ್ ಉಪ್ಪಳ, ನಿತ್ಯಾನಂದ ಭಟ್ ಹೆಬ್ರಿ, ಪ್ರಕಾಶ್ ಭಟ್ ಹೆಬ್ರಿ, ಗಿರೀಶ್ ಭಟ್ ಶಿವಪುರ, ಪ್ರಶಾಂತ್ ಭಟ್ ದೊಡ್ಡಬಳ್ಳಾಪುರ, ಅಮೋಘ ಭಟ್ ಮುದ್ರಾಡಿ, ವಿದ್ಯಾಲಕ್ಷ್ಮಿ ಆಚಾರ್ಯ ಗಿಲ್ಲಾಳಿ, ರಮ್ಯಾ ಭಟ್ ಬಲ್ಲಾಡಿ ಸೇರಿದಂತೆ ಹಲವು ಭಕ್ತರು ಭಾಗವಹಿಸಿದರು.
ಪಾದಯಾತ್ರೆ ಅವಧಿಯಲ್ಲಿ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ, ಶ್ರೀ ಕೃಷ್ಣಾಷ್ಟೋತ್ತರ ಶತನಾಮ ಸ್ತೋತ್ರ, ಶ್ರೀ ವೆಂಕಟೇಶ ಸ್ತೋತ್ರ, ಶ್ರೀ ರಾಮ ತಾರಕ ಮಂತ್ರ ಮತ್ತು ಭಕ್ತಿಗೀತೆಗಳೊಂದಿಗೆ ದೇವರ ನಾಮಾವಳಿ ಪಠಿಸಲಾಯಿತು.