
ಬೆಂಗಳೂರು: ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ‘ಕಾಂತಾರ: ಚಾಪ್ಟರ್ 1’ ಚಿತ್ರದ ಬಿಡುಗಡೆ ಸಿದ್ಧವಾಗಿದ್ದು, ಚಿತ್ರೀಕರಣದ ವೇಳೆ ನಡೆದ ಘಟನೆಗಳ ಬಗ್ಗೆ ಆಶ್ಚರ್ಯಕರ ಮಾಹಿತಿ ಹೊರಬಿದ್ದಿದೆ. ಚಿತ್ರದ ನಿರ್ಮಾಪಕರಾದ ಹೊಂಬಾಳೆ ಫಿಲ್ಮ್ಸ್‌ನ ಚೆಲುವೇ ಗೌಡ ಅವರು, ಚಿತ್ರೀಕರಣದ ಸಮಯದಲ್ಲಿ ಕೆಲವು ಅವಘಡಗಳು ಸಂಭವಿಸಲಿವೆ ಎಂದು ಪಂಜುರ್ಲಿ ದೈವ ಮುಂಚೆಯೇ ಎಚ್ಚರಿಕೆ ನೀಡಿತ್ತು ಎಂದು ಬಹಿರಂಗಪಡಿಸಿದ್ದಾರೆ.
ಒಂದು ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಚೆಲುವೇ ಗೌಡ ಅವರು, “‘ಕಾಂತಾರ-1’ ಆರಂಭಕ್ಕೂ ಮುನ್ನ ನಾವು ದೈವದ ಬಳಿ ಪ್ರಾರ್ಥಿಸಿಕೊಂಡಾಗ, ಸಾಕಷ್ಟು ಅಡೆತಡೆಗಳು ಎದುರಾಗಲಿವೆ, ಆದರೆ ಕೊನೆಯಲ್ಲಿ ದೊಡ್ಡ ಯಶಸ್ಸು ಸಿಗಲಿದೆ ಎಂದು ದೈವ ಅಭಯ ನೀಡಿತ್ತು” ಎಂದು ಹೇಳಿದ್ದಾರೆ.
ಸದ್ಯ, ಚಿತ್ರದ ಮೇಕಿಂಗ್ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದು, ಚಿತ್ರವು ಅಕ್ಟೋಬರ್ 2 ರಂದು ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆಗೆ ರುಕ್ಮಿಣಿ ವಸಂತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.