spot_img

ಹಿರಿಯಡ್ಕದ ದೇವಾಡಿಗರ ಸಂಘದಲ್ಲಿ ಗಣಹೋಮ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ವಿದ್ಯಾರ್ಥಿವೇತನ, ಸನ್ಮಾನ ಮತ್ತು ಪುಸ್ತಕ ವಿತರಣಾ ಸಮಾರಂಭ – 2025

Date:

spot_img

ಹಿರಿಯಡ್ಕ: ಕರ್ನಾಟಕ ರಾಜ್ಯ ದೇವಾಡಿಗರ ಸಂಘ (ರಿ) ಮಂಗಳೂರು – ಉಪಸಂಘ ಹಿರಿಯಡ್ಕದ ಆಶ್ರಯದಲ್ಲಿ ಜೂನ್ 29, 2025 ಭಾನುವಾರ ಗಣಹೋಮ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ವಿದ್ಯಾರ್ಥಿವೇತನ, ಸನ್ಮಾನ ಮತ್ತು ಪುಸ್ತಕ ವಿತರಣಾ ಸಮಾರಂಭ ಜರುಗಲಿದೆ.

ಕಾರ್ಯಕ್ರಮವು ಬೆಳಿಗ್ಗೆ 7:30 ರಿಂದ ಆರಂಭವಾಗಲಿದ್ದು, ಮೊದಲಿಗೆ ಗಣಹೋಮ ಮತ್ತು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ. ನಂತರ ಬೆಳಿಗ್ಗೆ 9:30 ಕ್ಕೆ ಲಘು ಉಪಹಾರ ವ್ಯವಸ್ಥೆ ಇರುವುದಲ್ಲದೆ, ಬೆಳಿಗ್ಗೆ 10:30ರಿಂದ ಸಮಾಜದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ಬೆಳಿಗ್ಗೆ 11:00ರಿಂದ ಮುಖ್ಯ ಕಾರ್ಯಕ್ರಮವಾದ ವಿದ್ಯಾರ್ಥಿ ವೇತನ, ಸನ್ಮಾನ ಮತ್ತು ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭ SSLC ಹಾಗೂ PUC ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿರುವ ಉಪಸಂಘದ ಸದಸ್ಯರ ಮಕ್ಕಳಿಗೆ ಸನ್ಮಾನ ಹಾಗೂ ಪುಸ್ತಕ ವಿತರಣೆ ಮಾಡಲಾಗುತ್ತದೆ.

ಈ ಸಮಾರಂಭದ ಮುಖ್ಯ ಉದ್ದೇಶ ಸಮಾಜದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದು ಹಾಗೂ ವಿದ್ಯಾಭ್ಯಾಸದ ಪ್ರಾರಂಭದಲ್ಲಿಯೇ ಶ್ರದ್ಧೆ ಬೆಳೆಸುವುದು. ಸಮಾಜದ ಪ್ರತಿಯೊಬ್ಬ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

ಸಮಾರಂಭ ಆಯೋಜಕರು:
ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಸರ್ವ ಸದಸ್ಯರು ಕರ್ನಾಟಕ ರಾಜ್ಯ ದೇವಾಡಿಗರ ಸಂಘ (ರಿ) ಮಂಗಳೂರು – ಉಪಸಂಘ ಹಿರಿಯಡ್ಕ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಕೃಷ್ಣರಾಜ ಹೆಗ್ಡೆ ಕೌಡೂರು ( ತಮ್ಮಣ್ಣ) ದೈವಾಧೀನ – ನಾಳೆ ಬೈಲೂರಿನಲ್ಲಿ ಅಂತಿಮ ದರ್ಶನ

ಎಲ್ಲರಿಗೂ ಪ್ರೀತಿಪಾತ್ರರಾಗಿದ್ದ ಹಾಗೂ ಗೌರವಾನ್ವಿತ ವ್ಯಕ್ತಿಯಾಗಿದ್ದ ಕೌಡೂರಿನ ಶ್ರೀ ಕೃಷ್ಣರಾಜ ಹೆಗ್ಡೆ ರವರು ಇಂದು ದೈವಾಧೀನರಾಗಿದ್ದಾರೆ.

ರೈತರೇ ಎಚ್ಚರ ! ಅತಿಯಾದ ಯೂರಿಯಾ ಗೊಬ್ಬರ ಕೃಷಿಗೆ ಶಾಪ: ಬಂಜರಾಗುವ ಭೂಮಿ , ಆರೋಗ್ಯಕ್ಕೆ ಕುತ್ತು

ರೈತರಿಗೆ ಸುಲಭವಾಗಿ ಲಭ್ಯವಿರುವ ಮತ್ತು ಬೆಳೆಗಳ ಬೆಳವಣಿಗೆಗೆ ಶೀಘ್ರ ಫಲಿತಾಂಶ ನೀಡುತ್ತದೆ ಎಂದು ನಂಬಿರುವ ಯೂರಿಯಾ ರಾಸಾಯನಿಕ ಗೊಬ್ಬರವು ಇಂದು ರೈತ ಸಮುದಾಯ ಮತ್ತು ಭೂಮಿಯ ಆರೋಗ್ಯಕ್ಕೆ ಬಹುದೊಡ್ಡ ಅಪಾಯ ತಂದೊಡ್ಡಿದೆ.

ಜ್ಞಾನಸುಧಾ : ಸಂಸ್ಥಾಪಕರ ಜನ್ಮ ದಿನಾಚರಣೆ ;ರಕ್ತದಾನ ಶಿಬಿರ ಹಾಗೂ ಸಾಮಾಜಿಕ ನೆರವಿನ ಕಾರ್ಯಕ್ರಮ

ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್‌ ಟ್ರಸ್ಟ್‌ನ ವತಿಯಿಂದ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ದಿ.ಗೋಪ ಶೆಟ್ಟಿಯವರ 104ನೇ ಜನ್ಮದಿನದ ಅಂಗವಾಗಿ ಆಗಸ್ಟ್ 21ರಂದು ಸಾಮಾಜಿಕ ನೆರವು ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ಹೆಬ್ರಿ ಗಣೇಶೋತ್ಸವದ ಸುವರ್ಣ ಸಂಭ್ರಮ: ಪುರುಷ-ಮಹಿಳೆಯರಿಗಾಗಿ ಕ್ರೀಡಾ ಸ್ಪರ್ಧೆಗಳು

ಹೆಬ್ರಿ ಗಣೇಶೋತ್ಸವದ ಸುವರ್ಣ ಸಂಭ್ರಮದ ಪ್ರಯುಕ್ತ ಪುರುಷ ಮತ್ತು ಮಹಿಳೆಯರಿಗಾಗಿ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಈ ಕ್ರೀಡಾಕೂಟಕ್ಕೆ ಮಹಿಳಾ ಸಮಿತಿಯ ಸಂಚಾಲಕಿ ಬಾನು ಪಿ. ಬಲ್ಲಾಲ್ ಅವರು ಚಾಲನೆ ನೀಡಿದರು.