
ಉಡುಪಿ: ಕೇಂದ್ರ ಸರ್ಕಾರ ಎರಡು ವರ್ಷಗಳ ಹಿಂದೆ ಇಎಸ್‌ಐ ಆಸ್ಪತ್ರೆ ಮಂಜೂರು ಮಾಡಿದ್ದರೂ, ಅದು ಇನ್ನೂ ಉಡುಪಿಗೆ ಬರಲೇ ಇಲ್ಲ. ಇದರಿಂದ ಕಾರ್ಮಿಕರು, ಬಡವರು, ಹಾಗೂ ಹಿರಿಯ ನಾಗರಿಕರು ತೊಂದರೆ ಅನುಭವಿಸುತ್ತಿದ್ದಾರೆ. ಇದನ್ನು ಗಮನಿಸಿ, ಸಮಾಜಿಕ ಕಾರ್ಯಕರ್ತ ಜಿ.ಎ. ಕೋಟೆಯಾರ್ ಅವರ ನೇತೃತ್ವದಲ್ಲಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಯಿತು.
ಈ ಸಂಬಂಧ ಹಲವಾರು ಬಾರಿ ಪ್ರತಿಭಟನೆ, ಮನವಿ, ಒತ್ತಾಯ ಮಾಡಿದರೂ ಯಾವುದೇ ಫಲಿತಾಂಶ ದೊರಕಿಲ್ಲ. ಸರ್ಕಾರ ಮೌನ ಉಳಿಸಿಕೊಂಡಿರುವುದು ಜನರಲ್ಲಿ ಆಕ್ರೋಶ ಮೂಡಿಸಿದೆ. ಈ ಬಾರಿಯ ಸತ್ಯಾಗ್ರಹದಲ್ಲಿ ನೂರಾರು ಜನ ಭಾಗಿಯಾಗಿದ್ದು, ಮುಂದಿನ ದಿನಗಳಲ್ಲಿ ಲಕ್ಷಾಂತರ ಜನರು ಸೇರಿ ಹಕ್ಕಿಗಾಗಿ ಹೋರಾಟ ಮಾಡುವುದಾಗಿ ಜಿ.ಎ. ಕೋಟೆಯಾರ್ ಎಚ್ಚರಿಸಿದ್ದಾರೆ.
ಸತ್ಯಾಗ್ರಹದ ವೇಳೆ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಆಗಮಿಸಿ ಹೋರಾಟಗಾರರ ಮನವಿ ಸ್ವೀಕರಿಸಿದರು. ಈಗ ಸರ್ಕಾರ ಈ ಕುರಿತು ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾತರತೆಯಿಂದ ನಿರೀಕ್ಷಿಸಲಾಗುತ್ತಿದೆ.