
ಮುಂಬೈ/ಲಾಸ್ ಏಂಜಲೀಸ್: ಭಾರತೀಯ ಚಿತ್ರರಂಗದ ಹೆಮ್ಮೆಯ ತಾರೆ ದೀಪಿಕಾ ಪಡುಕೋಣೆ ಇದೀಗ ಜಾಗತಿಕ ಮಟ್ಟದಲ್ಲಿ ಮತ್ತೊಂದು ಗೌರವಕ್ಕೆ ಪಾತ್ರರಾಗಿದ್ದಾರೆ. 2026ರ ಹಾಲಿವುಡ್ ವಾಕ್ ಆಫ್ ಫೇಮ್ – ಮೋಷನ್ ಪಿಕ್ಚರ್ಸ್ ವಿಭಾಗದಲ್ಲಿ ದೀಪಿಕಾಗೆ ಸ್ಟಾರ್ ಗೌರವ ಲಭಿಸುತ್ತಿದೆ. ಈ ಕುರಿತು ಹಾಲಿವುಡ್ ಚೇಂಬರ್ ಆಫ್ ಕಾಮರ್ಸ್ ಅಧಿಕೃತ ಪಟ್ಟಿ ಬಿಡುಗಡೆ ಮಾಡಿದ್ದು, ದೀಪಿಕಾ ಹೆಸರು ಲೆಜೆಂಡರಿ ತಾರೆಯರ ಜೊತೆ ಸೇರಿದೆ.
ಅವರು ಸೇರಿರುವ ಪಟ್ಟಿಯಲ್ಲಿ ಡೆಮಿ ಮೂರ್, ರಾಚೆಲ್ ಮ್ಯಾಕ್ ಆಡಮ್ಸ್, ಎಮಿಲಿ ಬ್ಲಂಟ್, ಟಿಮೋಥಿ ಚಲಮೆಟ್, ರಾಮಿ ಮಲೆಕ್ ಮತ್ತು ಸ್ಕಾರ್ಲೆಟ್ ಟುಸಿಯಂತಹ ಅಂತರರಾಷ್ಟ್ರೀಯ ಸ್ಟಾರ್‌ಗಳ ಹೆಸರುಗಳಿವೆ.
2007ರಲ್ಲಿ “ಓಂ ಶಾಂತಿ ಓಂ” ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ನೀಡಿದ ದೀಪಿಕಾ, ಬಳಿಕ “ಪಿಕು”, “ಬಾಜಿರಾವ್ ಮಸ್ತಾನಿ”, “ಪದ್ಮಾವತ್”, “ಛಪಾಕ್”, “ಗೋಲಿಯೋನ್ ಕಿ ರಾಸ್-ಲೀಲಾ ರಾಮ್-ಲೀಲಾ” ಮುಂತಾದ ಚಿತ್ರಗಳಲ್ಲಿ ನಟಿಸಿ ಪ್ರೀತಿಯನ್ನೂ , ಪ್ರಶಂಸೆಯನ್ನೂ ಗಳಿಸಿದ್ದಾರೆ.
ನಟನೆಯ ಜತೆಗೆ, ದೀಪಿಕಾ ಪಡುಕೋಣೆ ಫ್ಯಾಷನ್ ವಿಶ್ವದಲ್ಲೂ ತನ್ನದೇ ಛಾಪು ಮೂಡಿಸಿ, ಅಂತರರಾಷ್ಟ್ರೀಯ ಬ್ರಾಂಡ್‌ಗಳ ಮುಖವಾಗಿರುವ rara ಸ್ಟಾರ್‌ಗಳ ಪೈಕಿ ಒಬ್ಬರಾಗಿದ್ದಾರೆ. ವಿಶ್ವದಾದ್ಯಂತ ಭಾರತೀಯ ಸಿನಿಮಾಗೆ ಗೌರವ ತಂದುಕೊಡುವ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.