ಸಾಸ್ತಾನ ಟೋಲ್ ಬಳಿ ನಿಲ್ಲಿಸಿದ್ದ ಲಾರಿಯೊಳಗೆ ಮೃತದೇಹ ಪತ್ತೆ!

Date:

spot_img

ಕೋಟ : ಉಡುಪಿ ಜಿಲ್ಲೆ ಸಾಸ್ತಾನದ ಗುಂಡ್ಮಿ ಟೋಲ್ ಗೇಟ್ ಬಳಿ ನಿಲ್ಲಿಸಿದ್ದ ಲಾರಿಯೊಳಗೆ ಚಾಲಕ ಮೃತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ. ಲಾರಿ ಗುಜರಾತ್ ರಾಜ್ಯಕ್ಕೆ ಸೇರಿದ ನೋಂದಣಿಯದ್ದಾಗಿದೆ.

ಸಾಲಿಗ್ರಾಮದ ನಿವಾಸಿ ಸುನಿಲ್ ಕುಮಾರ್ ಎಂಬವರು, ಎರಡು ದಿನಗಳಿಂದ ಲಾರಿ ಟೋಲ್ ಬಳಿ ನಿಲ್ಲಿಸಿರುವುದನ್ನು ಗಮನಿಸಿ ಅನುಮಾನಗೊಂಡು ಗುರುವಾರ ಸಂಜೆ ಲಾರಿಯ ಹತ್ತಿರ ತೆರಳಿದಾಗ, ಚಾಲಕನು ಲಾರಿಯ ಮುಂದಿನ ಸೀಟಿನ ಕೆಳಭಾಗದಲ್ಲಿ ಮಲಗಿ ಮೃತಪಟ್ಟಿರುವ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಕೂಡಲೇ ಅವರು ಕೋಟ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಲಾರಿಯಲ್ಲಿ ದೊರೆತ ಮೊಬೈಲ್ ಸಂಖ್ಯೆಯಿಂದ ಲಾರಿ ಮಾಲಕರನ್ನು ಸಂಪರ್ಕ ಮಾಡಲಾಗಿದ್ದು, ಲಾರಿ ಕೇರಳದಿಂದ ಗುಜರಾತ್ ಕಡೆಗೆ ತೆರಳುತ್ತಿದ್ದರೆಂದು ತಿಳಿದುಬಂದಿದೆ. ಚಾಲಕನನ್ನು ತಾಯಿರ್ ಬಾಯಿ (55) ಎಂದು ಗುರುತಿಸಲಾಗಿದೆ. ಅವರು ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎಂಬ ಮಾಹಿತಿ ಅವರ ಮಾಲಕರಿಂದ ಲಭಿಸಿದೆ.

ಬುಧವಾರ ಸಂಜೆದಿಂದ ಮೇ 8ರ ಗುರುವಾರ ಮಧ್ಯಾಹ್ನದೊಳಗೆ ಅವರು ನಿಧನರಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ಮೃತ ದೇಹವನ್ನು ಕುಂದಾಪುರದ ಶವಗಾರಕ್ಕೆ ಸ್ಥಳಾಂತರಿಸಲಾಗಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ಅಂತರರಾಷ್ಟ್ರೀಯ ಕುಟುಂಬ ಹಣ ರವಾನೆ ದಿನ

ಜೂನ್ 16 ರ ಅಂತರರಾಷ್ಟ್ರೀಯ ಕುಟುಂಬ ಹಣ ರವಾನೆ ದಿನದ ಮಹತ್ವ ಮತ್ತು ಇದು ಗ್ರಾಮೀಣ ಉದ್ಯಮಶೀಲತೆ ಹಾಗೂ ಉದ್ಯೋಗ ಸೃಷ್ಟಿಗೆ ಹೇಗೆ ಸಹಕಾರಿಯಾಗಿದೆ ಎಂಬ ಮಾಹಿತಿ ಇಲ್ಲಿದೆ.

ಡಿಜಿಟಲ್ ಕ್ರಾಂತಿ: ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರಬೇಕಾದ 12 ಪ್ರಮುಖ ಸರ್ಕಾರಿ ಅಪ್ಲಿಕೇಶನ್‌ಗಳು ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ನಿಮ್ಮ ದೈನಂದಿನ ಸರ್ಕಾರಿ ಕೆಲಸಗಳನ್ನು ಮೊಬೈಲ್ ಮೂಲಕವೇ ಸುಲಭವಾಗಿ ಮುಗಿಸಲು ನೆರವಾಗುವ 12 ಪ್ರಮುಖ ಅಪ್ಲಿಕೇಶನ್‌ಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಅಡುಗೆಮನೆಯ ಅಲರ್ಟ್: ಪ್ರೆಶರ್ ಕುಕ್ಕರ್‌ನಲ್ಲಿ ಈ ಪದಾರ್ಥಗಳನ್ನು ಬೇಯಿಸಿದರೆ ಆರೋಗ್ಯಕ್ಕೆ ಕಂಟಕ ಗ್ಯಾರಂಟಿ

ಪ್ರೆಶರ್ ಕುಕ್ಕರ್‌ನಲ್ಲಿ ಯಾವೆಲ್ಲಾ ಆಹಾರಗಳನ್ನು ಬೇಯಿಸಬಾರದು? ತಪ್ಪು ಅಡುಗೆ ಪದ್ಧತಿಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಆರ್‌ಎಸ್‌ಎಸ್‌ಗೆ ಸಚಿವ ಪ್ರಿಯಾಂಕ್ ಖರ್ಗೆ ಬಹಿರಂಗ ಪತ್ರ

ಸಚಿವ ಪ್ರಿಯಾಂಕ್ ಖರ್ಗೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಬಹಿರಂಗ ಪತ್ರ ಬರೆದು ಸಾಂವಿಧಾನಿಕ ಪಾರದರ್ಶಕತೆ ಪ್ರಶ್ನಿಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.