ಇಸ್ರೇಲ್‌ಗೆ ಡೇಟಾ ಸೋರಿಕೆ ಶಂಕೆ: ಜನರಿಗೆ ವಾಟ್ಸಾಪ್ ಅನ್‌ಇನ್‌ಸ್ಟಾಲ್ ಮಾಡಲು ಸೂಚಿಸಿದ ಇರಾನ್

Date:

spot_img

ಟೆಹರಾನ್: ವಾಟ್ಸಾಪ್ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಇಸ್ರೇಲ್‌ಗೆ ಸೋರಿಸುತ್ತಿದೆ ಎಂಬ ಶಂಕೆಯ ಹಿನ್ನೆಲೆಯಲ್ಲಿ, ಇರಾನಿನ ಸರ್ಕಾರಿ ದೂರದರ್ಶನವು ದೇಶದ ನಾಗರಿಕರಿಗೆ ವಾಟ್ಸಾಪ್ ಅನ್ನು ತಮ್ಮ ಮೊಬೈಲ್‌ಗಳಿಂದ ಡಿಲೀಟ್ ಮಾಡಿಕೊಳ್ಳುವಂತೆ ಮಂಗಳವಾರ ಎಚ್ಚರಿಕೆ ನೀಡಿದೆ. ಈ ಆರೋಪಗಳಿಗೆ ಯಾವುದೇ ದೃಢ ಪುರಾವೆಗಳನ್ನು ಸರಕಾರ ಒದಗಿಸಿಲ್ಲ.

ವಾಟ್ಸಾಪ್ ಪರವಾಗಿ ಪ್ರತಿಕ್ರಿಯಿಸಿದ ಮೆಟಾ ಕಂಪನಿಯು, ತಮ್ಮ ಸೇವೆ ಸಂಪೂರ್ಣವಾಗಿ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಆಗಿದೆ ಮತ್ತು ಸರ್ಕಾರಗಳೂ ಸೇರಿದಂತೆ ಯಾರಿಗೂ ಬಳಕೆದಾರರ ಸಂದೇಶಗಳನ್ನು ನೋಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. “ನಾವು ಯಾರು ಯಾರಿಗೆ ಸಂದೇಶ ಕಳುಹಿಸುತ್ತಿದ್ದಾರೆ ಎಂಬ ಲಾಗ್‌ಗಳನ್ನು ಇಟ್ಟುಕೊಳ್ಳುವುದಿಲ್ಲ. ನಾವು ನಿಮ್ಮ ಸ್ಥಳ ಮಾಹಿತಿಯನ್ನು ಟ್ರ್ಯಾಕ್ ಮಾಡುವುದಿಲ್ಲ ಮತ್ತು ಯಾವುದೇ ಸರ್ಕಾರಕ್ಕೂ ಈ ಮಾಹಿತಿ ಹಂಚುವುದಿಲ್ಲ” ಎಂದು ವಾಟ್ಸಾಪ್ ಹೇಳಿಕೊಂಡಿದೆ.

ಕಾರ್ನೆಲ್ ವಿಶ್ವವಿದ್ಯಾಲಯದ ಸೈಬರ್ ಭದ್ರತಾ ತಜ್ಞ ಗ್ರೆಗೊರಿ ಫಾಲ್ಕೆ ಅಭಿಪ್ರಾಯಪಟ್ಟಂತೆ, ಮೆಟಾಡೇಟಾದ ಆಧಾರದಲ್ಲಿ ಬಳಕೆದಾರರ ವರ್ತನೆಗಳನ್ನು ವಿಶ್ಲೇಷಿಸಲು ಸಾಧ್ಯವಿದೆ. “ವಾಟ್ಸಾಪ್‌ ಬಳಕೆಯ ಮುಕ್ತತೆಯ ಬಗ್ಗೆ ಹಲವು ರಾಷ್ಟ್ರಗಳಿಗೆ ಅನುಮಾನವಿದೆ. ದೇಶೀಯ ಡೇಟಾ ಭದ್ರತೆಗಾಗಿ ಕೆಲವರು ದೇಶದೊಳಗೇ ಡೇಟಾ ಸಂಗ್ರಹಣೆ ಬೇಕೆಂದು ಒತ್ತಾಯಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.

ವಾಟ್ಸಾಪ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಪ್ಲಾಟ್‌ಫಾರ್ಮ್‌ಗಳನ್ನು ಒಡೆದು ನಡಿಸುತ್ತಿರುವ ಮೆಟಾ ಕಂಪನಿಯ ಸೇವೆಗಳು ಹಿಂದೆ ಇರಾನಿನಲ್ಲಿ ನಿರ್ಬಂಧಿಸಲಾಗಿದ್ದವು. 2022 ರಲ್ಲಿ ಮಹಿಳೆಯೊಬ್ಬರ ಬಂಧನ ಮತ್ತು ಸಾವಿಗೆ ಸಂಬಂಧಿಸಿದ ಸಾರ್ವಜನಿಕ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ವಾಟ್ಸಾಪ್ ಮತ್ತು ಗೂಗಲ್ ಪ್ಲೇ ಮೇಲಿನ ನಿರ್ಬಂಧ ಹೇರಲಾಗಿತ್ತು. ನಂತರದಲ್ಲಿ, 2023 ಕೊನೆ ವೇಳೆಗೆ ಈ ನಿಷೇಧವನ್ನು ಹಿಂಪಡೆಯಲಾಗಿತ್ತು.

ಇದಕ್ಕೂ ಮುನ್ನ ಅನೇಕರು VPN ಮತ್ತು ಪ್ರಾಕ್ಸಿ ಸೇವೆಗಳ ಮೂಲಕ ಈ ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ನೀಟ್ ಪ್ರತಿಭಟನೆ ಮೇಲಿನ ಬಲಪ್ರಯೋಗ ಖಂಡನೀಯ: ಉದಯ ಶೆಟ್ಟಿ

ದೆಹಲಿಯಲ್ಲಿ ನೀಟ್ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲಿನ ಬಲಪ್ರಯೋಗವನ್ನು ಉದಯ ಶೆಟ್ಟಿ ಮುನಿಯಾಲು ತೀವ್ರವಾಗಿ ಖಂಡಿಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಕಾರ್ಕಳ: ಕಥೋಲಿಕ್ ಸಭಾವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ

ಕಾರ್ಕಳದ ಅತ್ತೂರು ಬಸಿಲಿಕಾದಲ್ಲಿ ಕಥೋಲಿಕ್ ಸಭಾವತಿಯಿಂದ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಬಾಡಿಗೆ ಸಂಗಾತಿ ಉದ್ಯಮ: ಒಂಟಿತನಕ್ಕೆ ತಾತ್ಕಾಲಿಕ ಪರಿಹಾರವೇ?

ಬೆಳೆಯುತ್ತಿರುವ ಬಾಡಿಗೆ ಸಂಗಾತಿ ಸಂಸ್ಕೃತಿಯ ಸಂಪೂರ್ಣ ವಿಶ್ಲೇಷಣೆ ಮತ್ತು ಉದ್ಯಮದ ಪ್ರಮುಖ ವಿವರಗಳು. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಗ್ಯಾಜೆಟ್ ಪ್ರಿಯರಿಗೆ ಗುಡ್ ನ್ಯೂಸ್: ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಶಿಯೋಮಿಯ ಪವರ್‌ಫುಲ್ 67W ಪವರ್ ಬ್ಯಾಂಕ್

ಶಿಯೋಮಿ ಭಾರತದಲ್ಲಿ ಹೊಸ 20000mAh ಪವರ್ ಬ್ಯಾಂಕ್ 5i ಬಿಡುಗಡೆ ಮಾಡಲಿದೆ. 67W ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯದ ಈ ಸಾಧನದ ಸಂಪೂರ್ಣ ಮಾಹಿತಿ ಇಲ್ಲಿದೆ.