spot_img

ಸಂವಿಧಾನ ಬದಲಾವಣೆ ಹೇಳಿಕೆ – “ನಾನು ಹಾಗೆ ಹೇಳಿಲ್ಲ, ಸಾಬೀತಾದರೆ ರಾಜಕೀಯ ನಿವೃತ್ತಿ!” : ಡಿಕೆ ಶಿವಕುಮಾರ್ ಸ್ಪಷ್ಟನೆ

Date:

ಬೆಂಗಳೂರು: “ನಾನು ಸಂವಿಧಾನ ಬದಲಾಯಿಸುವುದಾಗಿ ಹೇಳಿಲ್ಲ. ಹಾಗೆ ಹೇಳಿದ್ದರೆ ತಕ್ಷಣ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ” ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಹೈಕಮಾಂಡ್ ಸ್ಪಷ್ಟನೆ ಕೇಳಿದ ವಿಚಾರ :
“ನನ್ನ ಹೇಳಿಕೆ ಬಗ್ಗೆ ಪಕ್ಷದ ಹೈಕಮಾಂಡ್ ಸ್ಪಷ್ಟನೆ ಕೇಳಿದ್ದು ನಿಜ. ಆದರೆ ನಾನು ಯಾವುದೇ ರೀತಿಯ ಸಂವಿಧಾನ ವಿರೋಧಿ ಹೇಳಿಕೆ ನೀಡಿಲ್ಲ ಎಂಬುದನ್ನು ದಾಖಲೆಗಳ ಮೂಲಕ ಸಮರ್ಥಿಸಿಕೊಂಡಿದ್ದೇನೆ. ನನ್ನ ಸಂದರ್ಶನವನ್ನು ಸಂಪೂರ್ಣವಾಗಿ ನೋಡಿದರೆ ಸತ್ಯ ಅರಿವಾಗುತ್ತದೆ” ಎಂದು ಡಿಕೆಶಿ ಹೇಳಿದರು.

“ಬಿಜೆಪಿಯ ಆರೋಪಗಳಿಗೆ ಅರ್ಥವೇ ಇಲ್ಲ” ಎಂದ ಅವರು, “ಸಂವಿಧಾನ ಜಾರಿಗೆ ತಂದವರೇ ನಾವು, ಅದನ್ನು ರಕ್ಷಣೆ ಮಾಡುತ್ತಿರುವವರೂ ನಾವು. ಹೀಗಿರುವಾಗ, ಅದನ್ನು ಬದಲಾಯಿಸಲು ನಾನು ಹೇಳುವ ಪ್ರಶ್ನೆಯೇ ಇಲ್ಲ. ಬಿಜೆಪಿ ತಮ್ಮ ರಾಜಕೀಯ ಲಾಭಕ್ಕಾಗಿ ಸುಳ್ಳು ಪ್ರಚಾರ ಮಾಡುತ್ತಿದೆ” ಎಂದು ವಾಗ್ದಾಳಿ ನಡೆಸಿದರು.

ಸಂವಿಧಾನ ಬದಲಾವಣೆಯ ಬಗ್ಗೆ ಭ್ರಮೆ :
“ನಾನು ಯಾವ ಸಂದರ್ಶನದಲ್ಲೂ ಸಂವಿಧಾನ ಬದಲಾವಣೆ ಕುರಿತು ಹೇಳಿಲ್ಲ. ನಾನು ಸುಳ್ಳು ಮಾತನಾಡಲು ಬರುವ ವ್ಯಕ್ತಿ ಅಲ್ಲ. ನಾನು ಹೇಳಿದ್ದನ್ನು ಸರಿಯಾಗಿ ನೋಡಲಿ. ಸಂವಿಧಾನ ಬದಲಾಯಿಸುವುದು ಬಿಜೆಪಿ ನಾಯಕರು ಮಾಡಿರುವ ಮಾತು” ಎಂದರು.

ಕಪ್ಪು ಬಾವುಟ ಪ್ರದರ್ಶನಕ್ಕೆ ತಿರುಗೇಟು :
“ನಾನು ಹೋದ ಕಡೆ ಬಿಜೆಪಿ ಕಪ್ಪು ಬಾವುಟ ಪ್ರದರ್ಶಿಸಲು ನಿರ್ಧರಿಸಿದೆ ಎಂಬ ವಿಷಯ ಕೇಳಿ ನಗೆ ಬರುತ್ತಿದೆ. ಅವರಿಗೆ ನನ್ನ ಹೆಸರು ಉಲ್ಲೇಖಿಸದೇ ನಿದ್ದೆ ಬರುವುದಿಲ್ಲ. ತಮಿಳುನಾಡಿನಲ್ಲಿ ನಾನು ಕಪ್ಪು ಬಾವುಟ ನಿರೀಕ್ಷಿಸಿದ್ದೆ, ಆದರೆ ಮಾಧ್ಯಮಗಳ ಮೈಕ್ ಹೊರತುಪಡಿಸಿ ಬೇರೆ ಏನೂ ಕಾಣಲಿಲ್ಲ” ಎಂದು ಡಿಕೆಶಿ ವ್ಯಂಗ್ಯವಾಡಿದರು.

ಹೈಕಮಾಂಡ್ ಸ್ಪಷ್ಟನೆ ಪಡೆದಿದೆ :
“ನಾನು ಏನು ಮಾತನಾಡಿದ್ದೇನೆ ಎಂಬುದು ನನ್ನ ಪಕ್ಷದ ಹಿರಿಯರಿಗೆ ಗೊತ್ತಿದೆ. ಹೈಕಮಾಂಡ್ ನನ್ನ ವಿವರಗಳನ್ನು ಪರಿಶೀಲಿಸಿದ ನಂತರ ನಾನು ಸಂವಿಧಾನ ವಿರೋಧಿ ಹೇಳಿಕೆ ನೀಡಿಲ್ಲ ಎಂಬುದು ಅವರಿಗೆ ಅರಿವಾಗಿದೆ” ಎಂದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

“ಬದುಕಿನಲ್ಲಿ ಆರ್ಥಿಕ ಶ್ರೀಮಂತಿಕೆಗಿಂತ ಹೃದಯ ಶ್ರೀಮಂತಿಕೆ ಮುಖ್ಯ” : ಶ್ರೀ ದಾಮೋದರ ಶರ್ಮ ಬಾರ್ಕೂರು.

ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್), ಹಿರಿಯಡ್ಕದಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಶ್ರೀ ದಾಮೋದರ ಶರ್ಮ ಬಾರ್ಕೂರುರವರು ಉಪನ್ಯಾಸ ನೀಡಿದರು.

₹5 ಲಕ್ಷ ಮೌಲ್ಯದ ಅಡಿಕೆ ಕದ್ದ ವಿದ್ಯಾರ್ಥಿಗಳು: ಐಷಾರಾಮಿ ಜೀವನದ ಮೋಹದಿಂದ ಜೈಲು ಪಾಲಾದ ಯುವಕರು!

ಸುಲಭವಾಗಿ ಹಣ ಗಳಿಸಿ ಐಷಾರಾಮಿ ಜೀವನ ನಡೆಸಬೇಕೆಂದು ಕನಸು ಕಂಡಿದ್ದ ಕೆಲವು ಕಾಲೇಜು ವಿದ್ಯಾರ್ಥಿಗಳ ಗುಂಪೊಂದು, ದೊಡ್ಡ ಮಟ್ಟದ ಅಡಿಕೆ ಕಳ್ಳತನ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾರೆ.

ಭಾರತ-ಅಮೆರಿಕ ಬಾಂಧವ್ಯ ಮರುಜೋಡಣೆ: ಮೋದಿ-ಟ್ರಂಪ್ ಪೋಸ್ಟ್‌ಗಳಿಂದ ಹೊಸ ಆಶಾಕಿರಣ

ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಲು ಉತ್ಸುಕರಾಗಿರುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ಇದಕ್ಕೆ ಮೋದಿ ಅವರು ಕೂಡಲೇ ಪ್ರತಿಕ್ರಿಯೆ ನೀಡಿದ್ದಾರೆ.

ಕಾರ್ಕಳ ಪರಶುರಾಮ ಪ್ರತಿಮೆ ವಿವಾದ: ಸರ್ಕಾರಕ್ಕೆ ಹೈಕೋರ್ಟ್‌ನಿಂದ ಕಾನೂನು ಹೋರಾಟದ ನೋಟಿಸ್

ಅರ್ಜಿದಾರರಾದ ಉದಯ ಶೆಟ್ಟಿ ಅವರು ರೂ. 5 ಲಕ್ಷ ಮೊತ್ತವನ್ನು ಹೈಕೋರ್ಟ್ ರಿಜಿಸ್ಟ್ರಿಯಲ್ಲಿ ಠೇವಣಿ ಇರಿಸಿದ ನಂತರ, ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.