ಪೊಲೀಸ್ ಅಧಿಕಾರಿಯ ಆತ್ಮಹತ್ಯೆ ಮತ್ತು ಧರ್ಮಸ್ಥಳ ಎಸ್ಐಟಿ ತನಿಖೆಗೆ ಸಂಬಂಧ ಕಲ್ಪಿಸಿ ಅವಹೇಳನಕಾರಿ ಪೋಸ್ಟ್ ಹಾಕಿದವರ ವಿರುದ್ಧ ದೂರು ದಾಖಲು!

Date:

spot_img

ಬಂಟ್ವಾಳ: ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದ ಪೊಲೀಸ್ ಉಪನಿರೀಕ್ಷಕರೊಬ್ಬರ ಫೋಟೋವನ್ನು ಬಳಸಿಕೊಂಡು, ಅವರ ಸಾವಿಗೆ ಮತ್ತು ಧರ್ಮಸ್ಥಳದಲ್ಲಿ ನಡೆಯುತ್ತಿರುವ ಎಸ್.ಐ.ಟಿ ತನಿಖೆಗೂ ಸಂಬಂಧ ಕಲ್ಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಮಾನಹಾನಿಕರ ಪೋಸ್ಟ್‌ಗಳನ್ನು ಪ್ರಸಾರ ಮಾಡಿದ ನಾಲ್ಕು ಇನ್‌ಸ್ಟಾಗ್ರಾಮ್ ಖಾತೆಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಪೊಲೀಸ್ ಪುತ್ರಿಯಿಂದ ದೂರು

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಉಪನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬೀರಪ್ಪ ಘಟಕಾಂಬಳೆ ಅವರು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಪುತ್ರಿ ಕ್ಷಮಾ ಅವರು ಜುಲೈ 28, 2025 ರಂದು ತಮ್ಮ ಮೊಬೈಲ್‌ನಲ್ಲಿ ಸಾಮಾಜಿಕ ಜಾಲತಾಣ ಪರಿಶೀಲಿಸುತ್ತಿದ್ದಾಗ ಈ ಪೋಸ್ಟ್‌ಗಳು ಕಂಡುಬಂದಿವೆ. ಆ ನಾಲ್ಕು ಖಾತೆಗಳಲ್ಲಿ ತನ್ನ ತಂದೆಯ ಸಮವಸ್ತ್ರದಲ್ಲಿರುವ ಭಾವಚಿತ್ರವನ್ನು ಹಾಕಿ, ಅವರ ಆತ್ಮಹತ್ಯೆ ಮತ್ತು ಧರ್ಮಸ್ಥಳ ಪ್ರಕರಣದ ನಡುವೆ ಸಂಬಂಧ ಕಲ್ಪಿಸುವಂತಹ ಪೋಸ್ಟ್‌ಗಳನ್ನು ಪ್ರಸಾರ ಮಾಡಿರುವುದು ಗಮನಕ್ಕೆ ಬಂದಿದೆ.

ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸುವ ಯತ್ನ

ಈ ಪೋಸ್ಟ್‌ಗಳು ಉದ್ದೇಶಪೂರ್ವಕವಾಗಿ ತನ್ನ ತಂದೆಗೆ ಅವಮಾನ ಮಾಡುವ, ಶಾಂತಿ ಭಂಗ ಉಂಟುಮಾಡುವ ಮತ್ತು ಸಾರ್ವಜನಿಕರಲ್ಲಿ ಭೀತಿಯನ್ನು ಹುಟ್ಟಿಸುವಂತಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನ್ಯೂ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಕಲಂ: 352, 353(1) ಮತ್ತು 353(2) ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಿಸಲಾಗಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಬಾಲಕೃಷ್ಣಗೆ ಶೂಟಿಂಗ್ ವೇಳೆ ಅಪಘಾತ: ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

ತೆಲುಗು ನಟ ಬಾಲಕೃಷ್ಣ ಶೂಟಿಂಗ್ ವೇಳೆ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಜನ ನಾಯಗನ್ ಅಡ್ವಾನ್ಸ್ ಬುಕಿಂಗ್ ದಾಖಲೆ: ವಿಜಯ್ ಚಿತ್ರ ಜುಲೈ 23ಕ್ಕೆ ಬಿಡುಗಡೆ

ವಿಜಯ್ ಅಭಿನಯದ ಕೊನೆಯ ಚಿತ್ರ 'ಜನ ನಾಯಗನ್' ಜುಲೈ 23ರಂದು ಬಿಡುಗಡೆಯಾಗಲಿದ್ದು, ಅಡ್ವಾನ್ಸ್ ಬುಕಿಂಗ್‌ನಲ್ಲಿ ಭಾರಿ ದಾಖಲೆ ಬರೆದಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ನೀಟ್ ಪ್ರತಿಭಟನೆ ಮೇಲಿನ ಪೊಲೀಸ್ ಕ್ರಮ: ತುರ್ತು ವಿಚಾರಣೆಗೆ ಸುಪ್ರೀಂ ನಿರಾಕರಣೆ

ದೆಹಲಿಯಲ್ಲಿ ನೀಟ್ ವಿದ್ಯಾರ್ಥಿಗಳ ಪ್ರತಿಭಟನೆ ಮೇಲಿನ ಪೊಲೀಸ್ ದೌರ್ಜನ್ಯ ತನಿಖೆ ಕೋರಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಸಂಗಾತಿ ಮೇಲೆ ಆಸಕ್ತಿ ಇಲ್ಲವೆಂದು ಡಿವೋರ್ಸ್ ಸಿಗಲ್ಲ: ಹೈಕೋರ್ಟ್ ಆದೇಶ

ಮದುವೆ ಒಪ್ಪಂದವಲ್ಲ, ಸಂಸ್ಕಾರ. ಹೆಂಡತಿ ಮೇಲೆ ಆಸಕ್ತಿ ಇಲ್ಲವೆಂದು ವಿಚ್ಛೇದನ ಕೇಳಿದ ಪತಿಯ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.