
ಬೆಳ್ತಂಗಡಿ: ಧರ್ಮಸ್ಥಳ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದ ‘ಬುರುಡೆ’ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ದಳ (ಎಸ್.ಐ.ಟಿ) ತೀವ್ರಗೊಳಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸುದಂತೆ ಸೌಜನ್ಯ ಅವರ ಮಾವನಾದ ವಿಠಲ್ ಗೌಡನನ್ನು ಇಂದು (ಸೆಪ್ಟೆಂಬರ್ 10) ಸಂಜೆ 4:30ರ ಸುಮಾರಿಗೆ ಘಟನಾ ಸ್ಥಳಕ್ಕೆ ಕರೆತಂದು ಸ್ಥಳ ಮಹಜರು ನಡೆಸುತ್ತಿದೆ.
ಎಸ್‌ಪಿ ಸೈಮನ್ ನೇತೃತ್ವದಲ್ಲಿ ಮಹಜರು
ಎಸ್.ಐ.ಟಿ ಮುಖ್ಯಸ್ಥ ಎಸ್.ಪಿ. ಸಿ.ಎ. ಸೈಮನ್ ಅವರ ನೇತೃತ್ವದಲ್ಲಿ ಈ ತನಿಖಾ ಪ್ರಕ್ರಿಯೆ ನಡೆಯುತ್ತಿದೆ. ಧರ್ಮಸ್ಥಳ ಗ್ರಾಮದ ನೇತ್ರಾವತಿ ನದಿಯ ಬಳಿಯಿರುವ ಬಂಗ್ಲಗುಡ್ಡ ಪ್ರದೇಶಕ್ಕೆ ವಿಠಲ್ ಗೌಡನನ್ನು ಕರೆ ತರಲಾಗಿದ್ದು, ತನಿಖಾಧಿಕಾರಿಗಳು ಮಹತ್ವದ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದಾರೆ. ಈ ಸ್ಥಳ ಮಹಜರು ಪ್ರಕರಣದಲ್ಲಿ ಮತ್ತಷ್ಟು ಸ್ಪಷ್ಟತೆ ನೀಡುವ ನಿರೀಕ್ಷೆಯಿದೆ.