
ಬೊಮ್ಮರಬೆಟ್ಟು: ಉಡುಪಿ ಜಿಲ್ಲೆಯ ಬೊಮ್ಮರಬೆಟ್ಟು ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರಡಿಯಲ್ಲಿ 2026ರ ಮಾರ್ಚ್ 2 ರಿಂದ ಮಾರ್ಚ್ 4 ರವರೆಗೆ ವಾರ್ಷಿಕ ನೇಮೋತ್ಸವವು ಅತ್ಯಂತ ವೈಭವದಿಂದ ಜರುಗಲಿದೆ.
ಮಾರ್ಚ್ 2ರ ಸೋಮವಾರದಿಂದ ಆರಂಭವಾಗುವ ಈ ಧಾರ್ಮಿಕ ಉತ್ಸವವು ಮಾರ್ಚ್ 4ರ ಬುಧವಾರದವರೆಗೆ ವಿವಿಧ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ನಡೆಯಲಿದೆ. ಈ ಪುಣ್ಯ ಕಾರ್ಯಕ್ರಮದಲ್ಲಿ ಭಕ್ತಾಭಿಮಾನಿಗಳೆಲ್ಲರೂ ಆಗಮಿಸಿ, ತನು-ಮನ-ಧನಗಳಿಂದ ಸಹಕರಿಸಿ, ಶ್ರೀ ದೇವರ ಸಿರಿಮುಡಿ ಗಂಧ-ಪ್ರಸಾದವನ್ನು ಸ್ವೀಕರಿಸಿ, ಶ್ರೀಕ್ಷೇತ್ರದ ಶ್ರೀ ಕೊಡಮಣಿತ್ತಾಯ, ಶ್ರೀ ಬ್ರಹ್ಮಬೈದರ್ಕಳ ಹಾಗೂ ಪರಿವಾರ ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ , ಬೊಮ್ಮರಬೆಟ್ಟುಬೀಡು ಶೆಟ್ಟಿವಾಲಾ ಕುಟುಂಬಸ್ಥರು, ಗುತ್ತುಮನೆ ಕುಟುಂಬಸ್ಥರು ಬೊಮ್ಮಾರಬೆಟ್ಟು ಮನೆ , ಅರ್ಚಕರು ಕೊಡಿಬೆಟ್ಟು ಮುಕ್ಕಾಲ್ದಿಮನೆ ಕುಟುಂಬಸ್ಥರು,ಅಂಗಡಿಬೆಟ್ಟು ಮನೆ ಮತ್ತು ಗರಡಿಮನೆ ಕುಟುಂಬಸ್ಥರು , 8/8 ಭಂಡಾರದ ಮನೆಯವರು ಹಾಗೂ ಗ್ರಾಮಸ್ಥರು ವಿನಂತಿಸಿಕೊಂಡಿದ್ದಾರೆ.
































