
ಬೆಂಗಳೂರು: ಮಹಿಳೆಯರೊಂದಿಗೆ ದೈಹಿಕ ಸಂಪರ್ಕ ಇಟ್ಟುಕೊಂಡು ರಾಸಲೀಲೆ ನಡೆಸುತ್ತಿದ್ದ ಪತಿಯ ಕರ್ಮಕಾಂಡ ನೋಡಿ ಪತ್ನಿ ಶಾಕ್ ಆಗಿರುವ ಘಟನೆ ವರದಿಯಾಗಿದೆ.
ಬೆಂಗಳೂರಿನ ಇಂದಿರಾನಗರದ ಬಿಎಂ ಕಾವಲ್‌ನಲ್ಲಿ ವಾಸವಿದ್ದ ನಾರಾಯಣ್ ಎಂಬಾತ 20 ವರ್ಷಗಳ ದಾಂಪತ್ಯದ ಬಳಿಕ ಪತ್ನಿ ಅನ್ನಪೂರ್ಣ ಅವರಿಂದ ಅಂತರ ಕಾಯ್ದುಕೊಂಡಿದ್ದನು. ಅಲ್ಲದೆ, ನಾರಾಯಣ್ ತಾನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ (KPCC) ಯಲ್ಲಿ ಕೆಲಸ ಮಾಡುತ್ತಿರುವುದಾಗಿ ಮಹಿಳೆಯರನ್ನು ಪುಸಲಾಯಿಸಿ ದೈಹಿಕ ಸಂಪರ್ಕ ಇಟ್ಟುಕೊಳ್ಳುತ್ತಿದ್ದನು ಎನ್ನಲಾಗಿದೆ.
ವಿಡಿಯೋಗಳ ಮೂಲಕ ರಾಸಲೀಲೆ ಬಯಲು
ನಾರಾಯಣ್ ಮಹಿಳೆಯರೊಂದಿಗೆ ನಡೆಸುತ್ತಿದ್ದ ರಾಸಲೀಲೆಯನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಳ್ಳುತ್ತಿದ್ದನು. ಈ ವಿಡಿಯೋಗಳು ಇದೀಗ ಪತ್ನಿ ಅನ್ನಪೂರ್ಣ ಅವರ ಕೈ ಸೇರಿವೆ. ಪತಿಯ ಮೊಬೈಲ್ ನೋಡಿದ ಅನ್ನಪೂರ್ಣರಿಗೆ ಶಾಕ್ ಆಗಿದ್ದು, ಈ ಬಗ್ಗೆ ಪ್ರಶ್ನಿಸಿದಾಗ ನಾರಾಯಣ್ ಪತ್ನಿ ಮೇಲೆ ಜಗಳವಾಡುತ್ತಿದ್ದನು.
ಪತಿಯ ಅನೈತಿಕ ಸಂಬಂಧದ ಬಣ್ಣ ಬಯಲಾದ ನಂತರ ನಾರಾಯಣ್ ಪತ್ನಿಗೆ ಥಳಿಸಿ ಮನೆಯಿಂದ ಹೊರಹಾಕಿದ್ದನು. ತನಗೆ ಅನ್ಯಾಯವಾಗಿದ್ದು ನ್ಯಾಯ ಕೊಡಿಸುವಂತೆ ಅನ್ನಪೂರ್ಣ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಈ ಸಂಬಂಧ ಪೂರ್ವ ವಿಭಾಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಾಗಿದೆ.