
ಬೈಲೂರು: ಬೈಲೂರು ಚೈತನ್ಯ ಕಲಾವಿದರು ತಂಡದ ಪ್ರಸನ್ನ ಶೆಟ್ಟಿ ಅವರ ರಚನೆ ಮತ್ತು ನಿರ್ದೇಶನದ `ರಾಘು ಮಾಸ್ಟ್ರು’ ತುಳು ನಾಟಕದ ಶುಭ ಮುಹೂರ್ತವು ಸೆಪ್ಟೆಂಬರ್ 22 ರಂದು ಬೈಲೂರಿನ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ನೆರವೇರಿತು.
ಈ ಸಂದರ್ಭದಲ್ಲಿ, ದೇವಸ್ಥಾನದ ಪ್ರಧಾನ ಅರ್ಚಕರಾದ ನಾರಾಯಣ ಭಟ್ ಕೌಡೂರು ಅವರು ನಾಟಕದ ಯಶಸ್ಸಿಗಾಗಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಶುಭ ಹಾರೈಸಿದರು.



































