
ಉಡುಪಿ : ಖ್ಯಾತ ಕನ್ನಡ ಚಲನಚಿತ್ರ ನಟ ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಉಡುಪಿ ತಾಲೂಕಿನ ಕಾಪು ಹೊಸ ಮಾರಿಗುಡಿ ದೇವಸ್ಥಾನಕ್ಕೆ ಗುರುವಾರ ಭೇಟಿ ನೀಡಿದರು.
ದೇವಸ್ಥಾನ ಪ್ರವೇಶಿಸಿದ ನಂತರ, ಅವರು ಶ್ರದ್ಧೆಯಿಂದ ಕಾಪು ಮಾರಿಯಮ್ಮ ದೇವಿಯ ದರ್ಶನ ಪಡೆದರು ಹಾಗೂ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದಲ್ಲಿ ಕೆಲಕಾಲ ತಂಗಿದ್ದ ಅವರು ದೇವಿಯ ಸಾನ್ನಿಧ್ಯದಲ್ಲಿ ಪ್ರಾರ್ಥನೆ ನಡೆಸಿದರು.
ಅವರ ಆಗಮನದ ವೇಳೆ ದೇವಳದ ಅರ್ಚಕರಿಂದ ವಿಶೇಷ ಪೂಜಾದಿ ಕಾರ್ಯ ಕ್ರಮಗಳು ನೆರವೇರಿಸಲ್ಪಟ್ಟಿದ್ದು, ಸ್ಥಳೀಯ ಭಕ್ತರು ಹಾಗೂ ದೇವಸ್ಥಾನದ ಆಡಳಿತ ಮಂಡಳಿಯವರಿಂದ ಸೌಹಾರ್ದಪೂರ್ಣ ಸ್ವಾಗತ ದೊರೆತಿತು. ದೇವಸ್ಥಾನದ ಆಡಳಿತ ಮಂಡಳಿಯವರು ಅವರಿಗೆ ದೇವಾಲಯದ ಇತಿಹಾಸ ಹಾಗೂ ಮಹತ್ವ ಕುರಿತು ಮಾಹಿತಿ ನೀಡಿದರು.
ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವ ಹಿನ್ನೆಲೆಯಲ್ಲಿಯೇ ಅವರ ಈ ಭೇಟಿಯು ಗಮನ ಸೆಳೆದಿದೆ.