
ಬೊಮ್ಮರಬೆಟ್ಟು : ಬೊಮ್ಮರಬೆಟ್ಟು ಗ್ರಾಮಸ್ಥರಿಗೆ ಗ್ರಾಮ ದೇವರಾದ ಶ್ರೀ ವಿಷ್ಣು ಮೂರ್ತಿ ದೇವಸ್ಥಾನದ ಜೀರ್ಣೋದ್ದಾರ ಮಾಡಬೇಕೆಂದು ಶ್ರೀ ಪುತ್ತಿಗೆ ಮಠ , ಅರ್ಚಕರು ಮತ್ತು ಊರಿನ ಹತ್ತು ಸಮಸ್ತರ ಸಹಭಾಗಿತ್ವದಲ್ಲಿ ಇಂದು ದಿನಾಂಕ 25.07.2025ರಂದು ಶ್ರೀ ಕ್ಷೇತ್ರದಲ್ಲಿ ಅಷ್ಟ ಮಂಗಳ ಪ್ರಶ್ನೆಯು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಆರಂಭಗೊಂಡಿತು.

ಜ್ಯೋತಿಷಿಗಳಾದ ಗೋಪಾಲಕೃಷ್ಣ ಜೋಯಿಸ್ ಉಡುಪಿ ಮತ್ತು ಪ್ರವೀಣ ತಂತ್ರಿಗಳು ಪ್ರಶ್ನಾ ಚಿಂತನೆಯ ನೇತೃತ್ವ ವಹಿಸಿಕೊಂಡರು. ಈ ಪುಣ್ಯ ಕಾರ್ಯದಲ್ಲಿ ಪುತ್ತಿಗೆ ಶ್ರೀ ಮಠದ ದಿವಾನರಾದ ನಾಗರಾಜ ಆಚಾರ್ಯ, ಪ್ರಸನ್ನ ಆಚಾರ್ಯ, ಕ್ಷೇತ್ರದ ತಂತ್ರಿಗಳಾದ ವಾದಿರಾಜ ತಂತ್ರಿ, ಪ್ರಧಾನ ಅರ್ಚಕರಾದ ವಿಷ್ಣುಮೂರ್ತಿ ಭಟ್ ಹಾಗೂ ಗ್ರಾಮದ ಬೀಡಿನ ಮುಖ್ಯಸ್ಥರು ಮತ್ತು ಸಮಸ್ತ ಗ್ರಾಮಸ್ಥರು ಭಕ್ತಿ ಭಾವದಿಂದ ಭಾಗಿಯಾಗಿದ್ದರು.

ಈ ಪ್ರಶ್ನಾ ಚಿಂತನೆಯು ಜುಲೈ 26 ಮತ್ತು 27 ರಂದು ಕೂಡ ಮುಂದುವರಿಯಲಿದ್ದು ಸಂಬಂಧಪಟ್ಟ ಗ್ರಾಮಸ್ಥರೆಲ್ಲರೂ ಉಪಸ್ಥಿತರಿದ್ದು ಶ್ರೀ ದೇವರ ಜೀರ್ಣೋದ್ದಾರ ಕಾರ್ಯಕ್ಕೆ ಸಹಕರಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.