spot_img

ನಕ್ಸಲ್ ಚಳವಳಿಗೆ ಇನ್ನೊಂದು ಅಧ್ಯಾಯ: ಚಿಕ್ಕಮಗಳೂರಿನಲ್ಲಿ ಇಂದು ಶರಣಾಗಲಿರುವ ಕೊನೆಯ ನಕ್ಸಲ್!

Date:

ಚಿಕ್ಕಮಗಳೂರು: ನಕ್ಸಲ್ ಚಳವಳಿಯಲ್ಲಿ ಸಕ್ರಿಯವಾಗಿ ಇದ್ದ ಕೋಟೆಹೊಂಡ ರವೀಂದ್ರ ಇಂದೇ ಶರಣಾಗಲು ನಿರ್ಧರಿಸಿದ್ದು, ಚಿಕ್ಕಮಗಳೂರು ಎಸ್ಪಿ ಕಚೇರಿಯಲ್ಲಿ ಬೆಳಿಗ್ಗೆ 11 ಗಂಟೆಗೆ ಶರಣಾಗಲಿದ್ದಾರೆ.

ಶೃಂಗೇರಿ ತಾಲ್ಲೂಕಿನ ಕಿಗ್ಗಾ ಗ್ರಾಮದ ನಿವಾಸಿಯಾಗಿರುವ ಕೋಟೆಹೊಂಡ ರವೀಂದ್ರ, ಕಾಡಿನಲ್ಲೇ ಉಳಿದಿದ್ದ ನಕ್ಸಲ್ ಚಳವಳಿಯ ಕೊನೆಯ ವ್ಯಕ್ತಿಯಾಗಿದ್ದರು. ಈ ಮೊದಲು, ಲತಾ ಮುಂಡಗಾರು, ವನಜಾಕ್ಷಿ ಬಾಳೆಹೊಳೆ, ಸುಂದರಿ ಕುತ್ತೂರು, ಮಾರಪ್ಪ ಅರೋಲಿ, ಕೆ. ವಸಂತ (ತಮಿಳುನಾಡು), ಟಿ.ಎನ್. ಜಿಷಾ (ಕೇರಳ) ಒಳಗೊಂಡ ತಂಡ ಜನವರಿ 8ರಂದು ಮುಖ್ಯವಾಹಿನಿಗೆ ಬಂದಿತ್ತು. ಈ ಎಲ್ಲಾ ಶರಣಾಗತಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಸ್ವಾಗತಿಸಲಾಗಿತ್ತು ಮತ್ತು ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.

ಈ ತಂಡದಿಂದ ಬೇರ್ಪಟ್ಟಿದ್ದ ಕೋಟೆಹೊಂಡ ರವೀಂದ್ರ ಈವರೆಗೆ ಸಂಪರ್ಕಕ್ಕೆ ಬಂದಿರಲಿಲ್ಲ. ಆದರೆ, ನಾಗರಿಕ ವೇದಿಕೆ ಹಾಗೂ ನಕ್ಸಲ್ ಶರಣಾಗತಿ ಸಮಿತಿ ಅವರೊಂದಿಗೆ ನಿರಂತರ ಸಂವಹನ ನಡೆಸಿ, ಶರಣಾಗುವಂತೆ ಮನವಿ ಮಾಡಿತ್ತು.

ನಿನ್ನೆ ಕೊನೆಗೂ ರವೀಂದ್ರ ಅವರನ್ನು ಸಂಪರ್ಕಿಸಿ ಮಾತುಕತೆ ನಡೆಸಲಾಗಿದೆ. ಇದಾದ ಬಳಿಕ, ಇಂದು ಬೆಳಿಗ್ಗೆ ಚಿಕ್ಕಮಗಳೂರು ಎಸ್ಪಿ ಕಚೇರಿಯಲ್ಲಿ ಅವರು ಶರಣಾಗಲು ನಿರ್ಧರಿಸಿದ್ದಾರೆ ಎಂದು ನಕ್ಸಲ್ ಶರಣಾಗತಿ ಸಮಿತಿ ಸದಸ್ಯ ಕೆ.ಪಿ. ಶ್ರೀಪಾಲ್ ಹಾಗೂ ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯ ಕೆ.ಎಲ್. ಅಶೋಕ್ ತಿಳಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ವಿಶ್ವ ಆತ್ಮಹತ್ಯಾ ನಿರೋಧ ದಿನ

ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ಅಂತರರಾಷ್ಟ್ರೀಯ ಆತ್ಮಹತ್ಯಾ ನಿರೋಧ ಸಂಘಟನೆಯ (IASP) ಜಂಟಿ ಉದ್ದೇಶದೊಂದಿಗೆ ಪ್ರತಿ ವರ್ಷ ಸೆಪ್ಟೆಂಬರ್ 10 ರಂದು ಈ ದಿನವನ್ನು ಆಚರಿಸಲಾಗುತ್ತದೆ.

ಆಪಲ್‌ನಿಂದ ಐಫೋನ್ ಲೋಕಕ್ಕೆ ಹೊಸ ಸ್ಪರ್ಧಿ: ಅತಿ ತೆಳುವಾದ ‘ಐಫೋನ್ ಏರ್’ ಅನಾವರಣ!

ಅತಿ ತೆಳುವಾದ ಐಫೋನ್ 'ಏರ್' ಮಾದರಿ, ಹೊಸ ವೈಶಿಷ್ಟ್ಯಗಳೊಂದಿಗೆ ಐಫೋನ್ 17, ಸುಧಾರಿತ ಏರ್‌ಪಾಡ್ಸ್ ಪ್ರೊ 3 ಮತ್ತು ರಕ್ತದೊತ್ತಡ ಮಾನಿಟರ್ ಹೊಂದಿರುವ ಆಪಲ್ ವಾಚ್.

ಭಾರತದ ನೂತನ ಉಪರಾಷ್ಟ್ರಪತಿಯಾಗಿ ಸಿ.ಪಿ. ರಾಧಾಕೃಷ್ಣನ್ ಆಯ್ಕೆ

ಭಾರತದ 17ನೇ ಉಪರಾಷ್ಟ್ರಪತಿಯಾಗಿ ಮಹಾರಾಷ್ಟ್ರದ ಹಾಲಿ ರಾಜ್ಯಪಾಲ ಮತ್ತು ಎನ್‌ಡಿಎ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಅವರು ಆಯ್ಕೆಯಾಗಿದ್ದಾರೆ.

ಸಾಂಬಾರಿಗೆ ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು: ಕೆಂಪು ಮೆಣಸಿನಕಾಯಿಯ ಪ್ರಯೋಜನಗಳು

ಅಡುಗೆಮನೆಯಲ್ಲಿ ಸಾಮಾನ್ಯವಾಗಿ ಬಳಸುವ ಕೆಂಪು ಮೆಣಸಿನಕಾಯಿ ಕೇವಲ ಆಹಾರಕ್ಕೆ ಖಾರ ಮತ್ತು ರುಚಿ ನೀಡುವುದಷ್ಟೇ ಅಲ್ಲ, ಇದು ಅನೇಕ ಆರೋಗ್ಯಕಾರಿ ಗುಣಗಳನ್ನು ಸಹ ಹೊಂದಿದೆ.