
ಬೆಂಗಳೂರು: ರಿಲಯನ್ಸ್ ಇಂಡಸ್ಟ್ರಿಯ ನಿರ್ದೇಶಕ ಅನಂತ್ ಅಂಬಾನಿ, ಜಾಮ್‌ನಗರದಿಂದ ದೇವಭೂಮಿ ದ್ವಾರಕಾಕ್ಕೆ 141 ಕಿ.ಮೀ ಪಾದಯಾತ್ರೆ ಕೈಗೊಂಡಿದ್ದಾರೆ.
ದೈವಭಕ್ತರಾದ ಅನಂತ್ ಈಗ ದ್ವಾರಕಾದ ಸನಿಹದಲ್ಲಿದ್ದು, ಇನ್ನೂ ನಾಲ್ಕೈದು ದಿನಗಳಲ್ಲಿ ತಲುಪಲಿದ್ದಾರೆ. ಏಪ್ರಿಲ್ 10 ರಂದು ತಮ್ಮ ಜನ್ಮದಿನದ ಪ್ರಯುಕ್ತ ಈ ಪಾದಯಾತ್ರೆ ನಡೆಸಿ, ಭಗವಾನ್ ಕೃಷ್ಣನ ದರ್ಶನ ಮಾಡಲಿದ್ದಾರೆ. ಜೊತೆಗೆ, ದ್ವಾರಕಾದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.