spot_img

ಬಾಬಾ ಸಾಹೆಬ್ ಅಂಬೇಡ್ಕರ್ ಬಗ್ಗೆ ಅಮಿತ್ ಶಾ ನೀಡಿದ ಹೇಳಿಕೆ ಖಂಡನೀಯ.

Date:

spot_img

ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಂಗ್ರೆಸ್ಸಿನ ಕುತಂತ್ರವನ್ನು ಬಯಲಿಗೆಳೆದಿದ್ದಾರೆಯೇ ಹೊರತು ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರನ್ನು ಅವಮಾನಿಸಿಲ್ಲ ಎಂದು ತನ್ನ ಸಚಿವನ ಪರವಾಗಿ ಪ್ರಧಾನಿ ಮೋದಿ ನೀಡಿರುವ ಹೇಳಿಕೆ ಪ್ರಧಾನಿ ಹುದ್ದೆಗೆ ಭೂಷಣವಲ್ಲ. ಬಾಬಾ ಸಾಹೆಬ್ ಅಂಬೇಡ್ಕರ್ ಬಗ್ಗೆ ಅಮಿತ್ ಶಾ ನೀಡಿದ ಹೇಳಿಕೆ ಖಂಡನೀಯ. ಇದು ಬಿಜೆಪಿ ನಾಯಕರ ಸಂವಿಧಾನ ವಿರೋಧಿ ನೀತಿಯನ್ನು ಪ್ರತಿಪಾದಿಸುತ್ತದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹೇಳಿದೆ.
ಇತಿಹಾಸ ಅರಿಯದವರು ಇತಿಹಾಸ ನಿರ್ಮಿಸಲು ಸಾಧ್ಯವಿಲ್ಲ. ಊರ ಹೊರಗಿರ ಬೇಕಾದವನನ್ನು ಊರೊಳಗೆ ಕರೆದು ಊರನ್ನು ಆಳುವ ಅವಕಾಶ ಮಾಡಿ ಕೊಟ್ಟದ್ದೇ ಅಂಬೇಡ್ಕರ್ ನೇತೃತ್ವ ದಲ್ಲಿ ರಚನೆಗೊಂಡ ಸಂವಿಧಾನ. ಅಂತಹ ಸಂವಿಧಾನವನ್ನೇ ಬದಲಿಸಲು ಹೊರಟವರಿಗೆ ಅಂಬೇಡ್ಕರ್ ಹೆಸರಿನ ಉಲ್ಲೇಖ ಅಪತ್ಯ ಆಗುವುದರಲ್ಲಿ ಆಶ್ಚರ್ಯ ಇಲ್ಲ. ದೇಶದಲ್ಲಿ ಶತಶತಮಾನ ಗಳಿಂದ ಸಾಮಾಜಿಕ ಸಮಾನತೆಯ ಸಮಸಮಾಜ ನಿರ್ಮಾಣಕ್ಕಾಗಿ ಮನುವಾದಿ ಸಂಸ್ಕೃತಿ ವರ್ಣಭೇದ ಲಿಂಗ ತಾರತಮ್ಯದ ವಿರುದ್ಧ ಹೋರಾಡುತ್ತಲೇ ಬಂದ ಪುಳೆ ಪೆರಿಯಾರ್ ನಾರಾಯಣಗುರು ಬಸವಾದಿ ಶರಣರ ಸಂತರ ಹೆಸರನ್ನು ಇತಿಹಾಸದ ಪುಟಗಳಿಂದ ಅಳಿಸಿ ಹಾಕಲು ಷಢ್ಯಂತ್ರ ನಡೆಸಿದವರು ಯಾರು ಎನ್ನುವುದನ್ನು ಅದೇ ಇತಿಹಾಸ ದಾಖಲಿಸಿಕೊಂಡಿದೆ. ದೆಹಲಿ ರಾಜಪಥ ಪರೇಡಿನಲ್ಲಿ ನಾರಾಯಣ ಗುರುಗಳ ಸ್ತಬ್ಧಚಿತ್ರ ನಿರಾಕರಣೆ ಇದಕ್ಕೊಂದು ಇತ್ತೀಚಿನ ಉದಾಹರಣೆ ಎಂದು ಕಾಂಗ್ರೆಸ್ ಹೇಳಿದೆ.
ಅಂಬೇಡ್ಕರ್ ರಚಿಸಿದ ಸಂವಿಧಾನದ ಮಾರ್ಗಸೂಚಿ ಮೌಲ್ಯದಡಿಯಲ್ಲಿ ಕಳೆದ ಸುಮಾರು 6 ದಶಕಗಳ ಕಾಲ ಪ್ರಧಾನಿ ನೆಹರೂ ಇಂದಿರಾ ಆದಿಯಾಗಿ ಪ್ರಧಾನಿ ಮನಮೋಹನ ಸಿಂಗ್ ವರೆಗಿನ ಆಡಳಿತಾವದಿಯಲ್ಲಿ ವಿಶ್ವದ ಅಭಿವೃದ್ಧಿಶೀಲ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 3 ನೇ ಸ್ಥಾನದಲ್ಲಿತ್ತು. ಆದರೆ ಕಳೆದ 10ವರ್ಷಗಳ ಪ್ರಧಾನಿ ಮೋದಿ ನೇತೃತ್ವದ ಸಂವಿಧಾನವನ್ನೇ ಬದಲಿಸಲು ಹೊರಟ ಆಡಳಿತ ದೇಶವನ್ನು ಆರ್ಥಿಕವಾಗಿ 164 ನೇ ಸ್ಥಾನಕ್ಕೆ ಇಳಿಸಿತಷ್ಟೇ ಅಲ್ಲ 55ಲಕ್ಷ ಕೋಟಿ ಇದ್ದ ಸಾಲವನ್ನು ಸುಮಾರು 150 ಲಕ್ಷ ಕೋಟಿಗೆ‌ ಏರಿಸಿ ಯುವಜನರಲ್ಲಿ ನಿರುಧ್ಯೋಗ ತಾಂಡವವಾಡುವಂತೆ ಮಾಡಿತು. ಬಹು:ಶ ಇದನ್ನೇ ಅಭಿವೃದ್ಧಿ ಎಂದು ವ್ಯಾಖ್ಯಾನಿಸುವ ಮೋದಿ ಶಾ ಪರಿವಾರಕ್ಕೆ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಹೆಸರು ಉಲ್ಲೇಖ ಒಂದು ಹುಚ್ಚು ಮನಸ್ಥಿತಿಯಾಗಿ ಕಂಡು ಬಂದಿರುವುದರಲ್ಲಿ ಅಶ್ಚರ್ಯವಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಕಟಣೆಗಾಗಿ:
Bipinchandra Pal Nakre,
Spokesperson,
Udupi District Congress,
UDUPI-Dist.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಮಣಿಪಾಲದಲ್ಲಿ ಸಂಚಾರ ನಿಯಮ ಉಲ್ಲಂಘನೆ: ಲಕ್ಷಾಂತರ ರೂ. ದಂಡ ಸಂಗ್ರಹ

ಸಂಚಾರ ನಿಯಮ ಉಲ್ಲಂಘನೆ ಮತ್ತು ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ವಿರುದ್ಧ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಲಕ್ಷಾಂತರ ರೂಪಾಯಿ ದಂಡ ಸಂಗ್ರಹಿಸಲಾಗಿದೆ.

ಕಲಾಪದ ವೇಳೆ ಮೊಬೈಲ್‌ನಲ್ಲಿ ‘ರಮ್ಮಿ’ ಆಟದಲ್ಲಿ ಮುಳುಗಿದ ಕೃಷಿ ಸಚಿವ

ಮಹಾರಾಷ್ಟ್ರ ವಿಧಾನಸಭೆಯ ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲಿ ಓರ್ವ ಸಚಿವರು ತಮ್ಮ ಮೊಬೈಲ್ ಫೋನ್‌ನಲ್ಲಿ 'ರಮ್ಮಿ' ಗೇಮ್ ಆಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

ಆಧಾರ್ ಕಾರ್ಡ್‌ಗೆ ಅವಧಿ ಇದೆಯೇ? ನಿಮ್ಮ ಆಧಾರ್ ಸಿಂಧುತ್ವವನ್ನು ಪರಿಶೀಲಿಸುವುದು ಹೇಗೆ?

ಸಾಮಾನ್ಯವಾಗಿ ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್‌ನಂತಹ ಗುರುತಿನ ಚೀಟಿಗಳಿಗೆ ನಿರ್ದಿಷ್ಟ ಅವಧಿ ಇರುತ್ತದೆ. ಆದರೆ, ಬಹುತೇಕರಿಗೆ ಆಧಾರ್ ಕಾರ್ಡ್‌ಗೆ ಎಕ್ಸ್‌ಪೈರಿ ದಿನಾಂಕದ ಬಗ್ಗೆ ಗೊಂದಲವಿದೆ.

ಉಪರಾಷ್ಟ್ರಪತಿ ಧಂಖರ್: ಭಾರತದ ಸಾರ್ವಭೌಮತೆಗೆ ಸವಾಲಿಲ್ಲ, ವಿದೇಶಿ ಹಸ್ತಕ್ಷೇಪ ಅಸಾಧ್ಯ

ಪಾಕಿಸ್ತಾನದೊಂದಿಗಿನ ಭಾರತದ ಸಂಬಂಧಗಳ ಕುರಿತು ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಹೇಳಿಕೆಗಳ ಹಿನ್ನೆಲೆಯಲ್ಲಿ, ಭಾರತದ ಉಪರಾಷ್ಟ್ರಪತಿ ಜಗದೀಪ್ ಧಂಖರ್ ಅವರು ದೇಶದ ಸಾರ್ವಭೌಮತ್ವ ಮತ್ತು ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವಿಕೆಯ ಬಗ್ಗೆ ಬಲವಾದ ಸಂದೇಶವನ್ನು ರವಾನಿಸಿದ್ದಾರೆ