ಅಮಿತ್ ಶಾ ರಾಜ್ಯಕ್ಕೆ ಭೇಟಿ – ಯಡಿಯೂರಪ್ಪರವರ ಮೊಮ್ಮಗನ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ

Date:

spot_img

ಬೆಂಗಳೂರು : ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಳೆ (ಜೂನ್ 8) ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ಈ ಭೇಟಿಯು ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದೆ. ಇತ್ತೀಚೆಗಷ್ಟೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಭೀಕರ ಕಾಲ್ತುಳಿತದಲ್ಲಿ 11 ಮಂದಿ ಆರ್‌ಸಿಬಿ ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದ ಹಿನ್ನೆಲೆಯಲ್ಲಿ ಅಮಿತ್ ಶಾ ಅವರ ಪ್ರವಾಸ ರಾಜ್ಯದ ರಾಜಕಾರಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಆದರೆ ಶಾ ಅವರ ಈ ಭೇಟಿ ನೇರವಾಗಿ ಯಾವುದೇ ಅಧಿಕೃತ ಅಥವಾ ರಾಜಕೀಯ ಕಾರ್ಯಕ್ರಮಗಳಿಗಾಗಿ ಅಲ್ಲ. ಹಿರಿಯ ಬಿಜೆಪಿ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಮೊಮ್ಮಗನ ಮದುವೆ ನಿಶ್ಚಯವಾದ ಹಿನ್ನೆಲೆಯಲ್ಲಿ ಅವರು ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಅಮಿತ್ ಶಾ ನಾಳೆ ರಾತ್ರಿ ಬೆಂಗಳೂರಿಗೆ ಬಂದು, ಜೂನ್ 9ರ ಬೆಳಗ್ಗೆ ನಡೆಯುವ ಮದುವೆ ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಬಿಗುವಿನ ಭದ್ರತೆ ಮತ್ತು ನಿರೀಕ್ಷೆಯ ವಾತಾವರಣ ಬೆಂಗಳೂರಿನಲ್ಲಿ ನಿರ್ಮಾಣವಾಗಿದೆ.

ಅಮಿತ್ ಶಾ ಅವರ ಈ ಭೇಟಿಯಿಂದ ರಾಜ್ಯ ರಾಜಕೀಯದಲ್ಲಿ ಇನ್ನೊಂದು ಮಹತ್ವದ ತೀರ್ಮಾನ ಅಥವಾ ರಾಜಕೀಯ ಬೆಳವಣಿಗೆಗೆ ಕಾರಣರಾಗಬಹುದೆಂಬ ಊಹಾಪೋಹಗಳು ನಡೆಯುತ್ತಿವೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಕಾರ್ಕಳದಲ್ಲಿ ಯುವತಿಗೆ ಹಲ್ಲೆ, ಜೀವ ಬೆದರಿಕೆ: ಯುವಕನ ವಿರುದ್ಧ ಪ್ರಕರಣ

ಕಾರ್ಕಳದಲ್ಲಿ 19 ವರ್ಷದ ಯುವತಿಗೆ ಹಲ್ಲೆ ಹಾಗೂ ಜೀವ ಬೆದರಿಕೆ ಆರೋಪದಡಿ ಯುವಕನ ವಿರುದ್ಧ ಪ್ರಕರಣ ದಾಖಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಬಿಗ್ ಬಾಸ್ ಹೊಸ ಸೀಸನ್: 6 ಭಾಷೆಗಳಲ್ಲಿ ಶೋ, ಸೌರವ್ ಗಂಗೂಲಿ ಎಂಟ್ರಿ

ಜಿಯೋಸ್ಟಾರ್‌ನಿಂದ 6 ಭಾಷೆಗಳಲ್ಲಿ ಬಿಗ್ ಬಾಸ್ ಆರಂಭ. ಬಾಂಗ್ಲಾ ಆವೃತ್ತಿಗೆ ಸೌರವ್ ಗಂಗೂಲಿ ನಿರೂಪಕ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಲಾವಣ್ಯಾ ಕೊಲೆ ಪ್ರಕರಣ: ಆರೋಪಿ ಚೇತನ್ ಬಂಧನಕ್ಕೆ ಗಿರೀಶ್ ಧೈರ್ಯ

ಲಾವಣ್ಯಾ ಕೊಲೆ ಪ್ರಕರಣದ ಆರೋಪಿ ಚೇತನ್ ಬಂಧನಕ್ಕೆ ಸ್ಥಳೀಯ ಯುವಕ ಗಿರೀಶ್ ವಹಿಸಿದ ಸಾಹಸಮಯ ಪಾತ್ರದ ಸಂಪೂರ್ಣ ವಿವರ, ಪೂರ್ಣ ಮಾಹಿತಿ ಇಲ್ಲಿದೆ ಓದಿ

ಪ್ರಜ್ವಲ್ ರೇವಣ್ಣಗೆ ಜೈಲಿನಲ್ಲಿ ಆಪ್ತರ ಭೇಟಿಗೆ ಕೋರ್ಟ್ ಸಮ್ಮತಿ

ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಾಲಯ ಜೈಲಿನಲ್ಲಿ ಆಪ್ತರ ಭೇಟಿಗೆ ಅನುಮತಿ ನೀಡಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ