
ಬೆಂಗಳೂರು: ಕನ್ನಡ ಚಿತ್ರರಂಗದ ಜನಪ್ರಿಯ ನಟಿ ಹಾಗೂ ರಾಜಕಾರಣಿ ಭಾವನಾ ರಾಮಣ್ಣ ಅವರು ತಾಯ್ತನದ ಖುಷಿಯಲ್ಲಿದ್ದಾರೆ. 40ನೇ ವಯಸ್ಸಿನಲ್ಲಿ ಅವರು ಅವಳಿ ಮಕ್ಕಳ ನಿರೀಕ್ಷೆಯಲ್ಲಿದ್ದು, ಇನ್ ವಿಟ್ರೋ ಫರ್ಟಿಲೈಸೇಶನ್ (IVF) ಮೂಲಕ ಗರ್ಭಿಣಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಭಾವನಾ ಸದ್ಯ ಆರು ತಿಂಗಳ ಗರ್ಭಿಣಿಯಾಗಿದ್ದು, ಈ ಸುದ್ಧಿ ಸಾರ್ವಜನಿಕವಾಗಿ ತಿಳಿದುಬಂದ ಬಳಿಕ ಕೆಲವರಲ್ಲಿ ಅಚ್ಚರಿ ಮತ್ತು ಚರ್ಚೆಗಳಿಗೆ ಕಾರಣವಾಗಿದೆ. ಅವಿವಾಹಿತರಾಗಿ, ಸಂಗಾತಿಯ ಬೆಂಬಲವಿಲ್ಲದೆ ತಾಯಿಯಾಗುವ ಅವರ ನಿರ್ಧಾರವು ಅನೇಕರಿಗೆ ಹೊಸತನವೆನಿಸಿದೆ. ಈ ನಿರ್ಧಾರದ ಮೂಲಕ, ವೈಯಕ್ತಿಕ ಆಯ್ಕೆಗಳು ಮತ್ತು ಆಧುನಿಕ ವೈದ್ಯಕೀಯ ತಂತ್ರಜ್ಞಾನಗಳು ತಾಯ್ತನದ ಕುರಿತ ಸಾಂಪ್ರದಾಯಿಕ ಕಲ್ಪನೆಗಳನ್ನು ಹೇಗೆ ಮರುರೂಪಿಸುತ್ತಿವೆ ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ.