spot_img

ಪಿಎಂಈಜಿಪಿ ಸಾಲದ ಹೆಸರಲ್ಲಿ ಕಾರ್ಕಳದ ಕೌಡೂರು ರಂಗನಪಲ್ಕೆಯ ಮಹಿಳೆಗೆ ಮೋಸ ! ಆರೋಪಿ ಜೈಲುಪಾಲು

Date:

spot_img

ಕಾರ್ಕಳ : ಕಾರ್ಕಳದ ಕೌಡೂರು ಗ್ರಾಮದ ರಂಗನಪಲ್ಕೆ ನಿವಾಸಿ ಕವಿತಾ ಕೃಪಾಲಿನಿ ಎಂಬ ಮಹಿಳೆಗೆ ಕಾರ್ಕಳದ ಅತ್ತೂರು, ದೂಪದಕಟ್ಟೆ ನಿವಾಸಿ ರಾಘವೇಂದ್ರ. ಎಸ್. ಎಂಬುವವರು ಪ್ರಧಾನ ಮಂತ್ರಿ ರೋಜ್ಗಾರ್ ಯೋಜನೆ (ಪಿಎಂಈಜಿಪಿ)ಅಡಿಯಲ್ಲಿ ಸಿಗುವ ಸಾಲದಿಂದ ಜೆರಾಕ್ಸ್ ಮಿಷನ್, ಲ್ಯಾಮಿನೇಷನ್ ಮಿಷನ್, ಲ್ಯಾಪ್ಟಾಪ್, ಹಾಗೂ ಇತರ ಪರಿಕರಗಳನ್ನು ಕೊಡಿಸುತ್ತೇನೆ ಎಂದು ನಂಬಿಸಿ 9.5 ಲಕ್ಷ ರೂಪಾಯಿ ವಂಚಿಸಿದ ಘಟನೆ ನಡೆದಿದೆ.

ಮಹಿಳೆಗೆ ತಾನು ಮೋಸಹೋಗಿದ್ದೇನೆ ಎಂದು ತಿಳಿಯುತ್ತಿದ್ದಂತೆಯೇ ಆಕೆ ಕಾರ್ಕಳ ನಗರ ಪೊಲೀಸ್ ಠಾಣೆಗೆ ಹಾಜರಾಗಿ, “ನಾನು ಕಾರ್ಕಳ ತಾಲೂಕಿನ ಕೌಡೂರು ಗ್ರಾಮದ ರಂಗನಪಲ್ಕೆಯಲ್ಲಿ ಸ್ಟೇಷನರಿ ಮತ್ತು ಬುಕ್ ವ್ಯಾಪಾರದ ಅಂಗಡಿಯನ್ನು ನಡೆಸಿಕೊಂಡಿದ್ದು, ರಾಘವೇಂದ್ರ. ಎಸ್. ಎಂಬುವವರು ನನಗೆ ಪರಿಚಿತರಿದ್ದು, ಅವರು ನನಗೆ ಪ್ರಧಾನ ಮಂತ್ರಿ ರೋಜ್ಗಾರ್ ಯೋಜನೆ (ಪಿಎಂಈಜಿಪಿ)ಅಡಿಯಲ್ಲಿ ಸಿಗುವ ಸಾಲದಿಂದ ನಿಮಗೆ ಜೆರಾಕ್ಸ್ ಮಿಷನ್, ಲ್ಯಾಮಿನೇಷನ್ ಮಿಷನ್, ಲ್ಯಾಪ್ಟಾಪ್, ಹಾಗೂ ಇತರ ಪರಿಕರಗಳನ್ನು ಕೊಡಿಸುತ್ತೇನೆ ಎಂದು ನಂಬಿಸಿ ಸಾಲಕ್ಕೆ ಬೇಕಾದ ಎಲ್ಲಾ ದಾಖಲೆಗಳನ್ನು ನನ್ನಿಂದ ಪಡೆದಿದ್ದಾರೆ. ನಂತರ ಅವರದೇ ಆದ Lakshmi ಎಂಟರ್ಪ್ರೈಸಸ್ ಮಳಿಗೆಯ ಕೊಟೇಶನ್ ನೀಡಿದ್ದಾರೆ. ಅದರಂತೆ ನಾನು ನನ್ನ ದಾಖಲಾತಿ ಹಾಗೂ ಕೊಟೇಶನನ್ನು ನಾನು ಖಾತೆ ಹೊಂದಿರುವ ಹಾಗೂ ಸಾಲಕ್ಕೆ ಅರ್ಜಿ ಹಾಕಿದ್ದ ಕೆನರಾ ಬ್ಯಾಂಕ್ ಕಣಜಾರು ಶಾಖೆಗೆ ನೀಡಿದ್ದು,ನನಗೆ 9.50 ಲಕ್ಷ ಲೋನ್ ಸ್ಯಾಂಕ್ಷನ್ ಆಗಿದೆ. ನಂತರ ನನ್ನ ಖಾತೆಯಿಂದ ದಿನಾಂಕ 18.12.2024 ರಂದು ಕೊಟೇಶನ್ ನೀಡಿದ Lakshmi ಎಂಟರ್ಪ್ರೈಸಸ್ ನ ಖಾತೆ ಐಸಿಐಸಿಐ ಬ್ಯಾಂಕ್ ಕಾರ್ಕಳಕ್ಕೆ ಸುಮಾರು 9.50 ಲಕ್ಷ ಹಣ ವರ್ಗಾವಣೆ ಆಗಿರುತ್ತದೆ. ನಾನು Lakshmi ಎಂಟರ್ಪ್ರೈಸಸ್ ಗೆ ಹಣ ಜಮೆಯಾದ ಬಗ್ಗೆ ರಾಘವೇಂದ್ರ. ಎಸ್.ರವರಿಗೆ ತಿಳಿಸಿದ್ದು, ಆಗ ರಾಘವೇಂದ್ರರವರು 25 ದಿನಗಳಲ್ಲಿ ಕೊಟೇಶನ್ ನಲ್ಲಿರುವ ಎಲ್ಲಾ ಸಾಮಗ್ರಿಗಳನ್ನ ನೀಡುತ್ತೇನೆ ಎಂದು ಭರವಸೆ ನೀಡಿ ನನಗೆ ಯಾವುದೇ ಸಾಮಾಗ್ರಿಗಳನ್ನು ಕೊಡದೇ ನನಗೆ ನಂಬಿಕೆ ದ್ರೋಹ ಮಾಡಿದ್ದಾರೆ” ಎಂಬುದಾಗಿ ದೂರು ನೀಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಕಾರ್ಕಳ ನಗರ ಠಾಣೆಯಲ್ಲಿ ಅಪರಾಧ ಸಂಖ್ಯೆ 61/2025 ಕಲಂ 316(2),318(4) ಬಿಎನ್ಎಸ್ ರಂತೆ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆ ಬಗ್ಗೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಕಳ ನಗರ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕರಾದ ಮಂಜಪ್ಪ ಡಿ.ಆರ್, ಪೊಲೀಸ್ ಉಪ ನಿರೀಕ್ಷಕರುಗಳಾದ ಸಂದೀಪ್ ಕುಮಾರ್ ಶೆಟ್ಟಿ, ಶಿವಕುಮಾರ್ ಹಾಗೂ ಸಿಬ್ಬಂದಿಗಳ ತಂಡ ತಾಂತ್ರಿಕ ಸಹಾಯದಿಂದ ಹಾಗೂ ಬಾತ್ಮಿದಾರರ ಸಹಾಯದಿಂದ ಬೆಂಗಳೂರಿನ ಗಾಂಧಿನಗರದಲ್ಲಿ ಆರೋಪಿ ರಾಘವೇಂದ್ರ ಎಸ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.

ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿದ್ದು ಆರೋಪಿ ಪ್ರಸ್ತುತ ಹಿರಿಯಡ್ಕ ಕಾರಾಗೃಹದಲ್ಲಿ ಬಂಧಿತನಾಗಿದ್ದಾನೆ. ಈತನು ಈ ಹಿಂದೆ ಹಲವು ಜನಗಳಿಗೆ ಇದೇ ರೀತಿ ಮೋಸ ಮಾಡಿರುವುದಾಗಿ ತಿಳಿದು ಬಂದಿರುತ್ತದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಪೊಲೀಸ್ ಅಧಿಕಾರಿಯ ಆತ್ಮಹತ್ಯೆ ಮತ್ತು ಧರ್ಮಸ್ಥಳ ಎಸ್ಐಟಿ ತನಿಖೆಗೆ ಸಂಬಂಧ ಕಲ್ಪಿಸಿ ಅವಹೇಳನಕಾರಿ ಪೋಸ್ಟ್ ಹಾಕಿದವರ ವಿರುದ್ಧ ದೂರು ದಾಖಲು!

ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದ ಪೊಲೀಸ್ ಉಪನಿರೀಕ್ಷಕರೊಬ್ಬರ ಫೋಟೋವನ್ನು ಬಳಸಿಕೊಂಡು, ಅವರ ಸಾವಿಗೆ ಮತ್ತು ಧರ್ಮಸ್ಥಳದಲ್ಲಿ ನಡೆಯುತ್ತಿರುವ ಎಸ್.ಐ.ಟಿ ತನಿಖೆಗೂ ಸಂಬಂಧ ಕಲ್ಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಮಾನಹಾನಿಕರ ಪೋಸ್ಟ್‌ಗಳನ್ನು ಪ್ರಸಾರ ಮಾಡಿದ ನಾಲ್ಕು ಇನ್‌ಸ್ಟಾಗ್ರಾಮ್ ಖಾತೆಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಧರ್ಮಸ್ಥಳ ಪ್ರಕರಣ: ಅಗೆದ ಸ್ಥಳದಲ್ಲಿ ಸಿಕ್ಕ ಡೆಬಿಟ್, ಪಾನ್ ಕಾರ್ಡ್‌ ರಹಸ್ಯ ಭೇದಿಸಿದ ಎಸ್‌ಐಟಿ!

ಧರ್ಮಸ್ಥಳದ ಅರಣ್ಯದಲ್ಲಿ ಶವಗಳನ್ನು ಹೂತು ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ, ಅನಾಮಿಕ ವ್ಯಕ್ತಿ ಗುರುತಿಸಿದ ಪಾಯಿಂಟ್‌ ನಂಬರ್ 1ರಲ್ಲಿ ದೊರಕಿದ ಡೆಬಿಟ್‌ ಮತ್ತು ಪಾನ್‌ ಕಾರ್ಡ್‌ಗಳ ರಹಸ್ಯವನ್ನು ಎಸ್‌ಐಟಿ ಅಧಿಕಾರಿಗಳು ಭೇದಿಸಿದ್ದಾರೆ.

ಅಮಾನತು ರದ್ದಾದ IPS ಅಧಿಕಾರಿಗಳಿಗೆ ಸ್ಥಳ ನಿಯೋಜನೆ: ಬಿ.ದಯಾನಂದ್‌ಗೆ ಕಾರಾಗೃಹ ಇಲಾಖೆಯ ಮುಖ್ಯಸ್ಥರ ಸ್ಥಾನ

ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣದಲ್ಲಿ ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದ ಮೂವರು ಐಪಿಎಸ್ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಸ್ಥಳ ನಿಯೋಜನೆ ಮಾಡಿ ಆದೇಶ ಹೊರಡಿಸಿದೆ.

ಆತ್ರಾಡಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆತ್ರಾಡಿಯಲ್ಲಿ "ದ್ವಿ ಭಾಷಾ ಕಲಿಕಾ ಆಂಗ್ಲ ಮಾಧ್ಯಮ ತರಗತಿಯ ಉದ್ಘಾಟನಾ ಕಾರ್ಯಕ್ರಮವು ಪರೀಕ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಮೊಕ್ತೇಸರರಾದ ಶ್ರೀ ಉದಯರಾಜ್ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ಜರಗಿತು.