
ಉಡುಪಿ: ಉಡುಪಿ ತಾಲೂಕಿನ ಪುತ್ತೂರು ಗ್ರಾಮದ ನಿಟ್ಟೂರಿನಲ್ಲಿ ಜೋಳಿಗೆ ಕಟ್ಟಿದ್ದ ಸೀರೆ ಕುತ್ತಿಗೆಗೆ ಸುತ್ತಿಕೊಂಡು ಒಂದು ವರ್ಷದ ಹೆಣ್ಣು ಮಗು ದುರ್ಮರಣಕ್ಕೀಡಾಗಿರುವ ದಾರುಣ ಘಟನೆ ನಡೆದಿದೆ.
ಮೃತ ಶಿಶುವನ್ನು ಅಯ್ಯಪ್ಪ ಎಂಬವರ ಮಗಳು ಕಾಳಮ್ಮ (1) ಎಂದು ಗುರುತಿಸಲಾಗಿದೆ. ಅಯ್ಯಪ್ಪ ಕಳೆದ ಮೂರು ವರ್ಷಗಳಿಂದ ಉಡುಪಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಘಟನೆ ಸಂಭವಿಸಿದ ದಿನವಾದ ಬುಧವಾರ ಬೆಳಗ್ಗೆ ಅವರ ಪತ್ನಿ ಕಾಳಮ್ಮನನ್ನು ಜೋಳಿಯಲ್ಲಿ ಮಲಗಿಸಿ ಕೆಲಕಾಲ ಮನೆಯ ಕೆಲಸಕ್ಕಾಗಿ ಹೊರ ಹೋಗಿದ್ದರು.
ಮರುಕ್ಷಣ ಮನೆಗೆ ವಾಪಸಾಗಿ ಬಂದಾಗ ಜೋಳಿಗೆ ಕಟ್ಟಿದ್ದ ಸೀರೆ ಕಾಳಮ್ಮನ ಕುತ್ತಿಗೆಗೆ ಸುತ್ತಿಕೊಂಡು ಉಸಿರುಗಟ್ಟಿದ್ದ ದೃಶ್ಯ ಕಂಡುಬಂದಿದೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾದರೂ ಮಗುವನ್ನು ಉಳಿಸಲಾಗಲಿಲ್ಲ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.