
ಕಾರ್ಕಳ : ಕಾರ್ಕಳದ ಇರ್ವತ್ತೂರು ಗ್ರಾಮ ಪಂಚಾಯತ್‌ನಲ್ಲಿ ಬೃಹತ್ ರಾಜೀನಾಮೆ ಅಲೆ ಕಾಣಿಸಿದೆ. ಬಿಜೆಪಿ ಬೆಂಬಲಿತ 7 ಸದಸ್ಯರಲ್ಲಿ ಉಪಾಧ್ಯಕ್ಷೆ ಸೇರಿದಂತೆ 6 ಜನ ಸದಸ್ಯರು ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ರಾಜೀನಾಮೆ ಸಲ್ಲಿಸಿರುವವರಲ್ಲಿ ಉಪಾಧ್ಯಕ್ಷೆ ದೀಪಾ ಶ್ರೀನಾಥ್ ಹಾಗೂ ಸದಸ್ಯರಾದ ಶೇಖರ್ ಅಂಚನ್, ಬಾಲಕೃಷ್ಣ ಶೆಟ್ಟಿ, ಕವಿತಾ ಶಂಕರ್, ಅನಿತಾ ಕುಲಾಲ್ ಮತ್ತು ಲಲಿತ ನಾಯ್ಕ್ ಸೇರಿದ್ದಾರೆ.
ಈ ರಾಜೀನಾಮೆಗಳಿಂದ ಸ್ಥಳೀಯ ರಾಜಕೀಯದಲ್ಲಿ ಹೊಸ ಬೆಳವಣಿಗೆಗಳಿಗೆ ದಾರಿತೆರೆದಂತಿದೆ.