
ಹಿಂದುತ್ವದ ಫೈರ್‌ಬ್ರಾಂಡ್ ಮತ್ತು ಬಿಗ್ ಬಾಸ್ ಸೀಸನ್ 11 ರ ಸ್ಪರ್ಧಿ ಚೈತ್ರಾ ಕುಂದಾಪುರ ಅವರು ತಮ್ಮ ಪ್ರತಿಭಾನ್ವಿತ ಭಾಷಣಗಳಿಂದ ಜನರ ಹೃದಯವನ್ನು ಗೆದ್ದರು. ಆದರೆ, 5 ಕೋಟಿ ವಂಚನೆ ಪ್ರಕರಣ ತನ್ನ ಇಮೇಜ್ ಹದಗೆಡಲು ಕಾರಣವಾಗಿದ್ದು, ತನ್ನ ವಿರುದ್ಧ ಮಾಡಿರುವ ಆರೋಪಗಳನ್ನು ಕಾನೂನಾತ್ಮಕವಾಗಿ ಖಂಡಿಸುವುದಾಗಿ ವಾಗ್ದಾಳಿ ನಡೆಸಿದ್ದಾರೆ.
5 ಕೋಟಿ ವಂಚನೆ ಪ್ರಕರಣ:
ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಉದ್ಯಮಿಯೊಬ್ಬರಿಗೆ ಟಿಕೆಟ್ ಕೊಡಿಸುವ ನೆಪದಲ್ಲಿ ಚೈತ್ರಾ ಕುಂದಾಪುರ ಅವರು 5 ಕೋಟಿ ರೂಪಾಯಿ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಪ್ರಕರಣದಲ್ಲಿ ಆಕೆ ಜೈಲು ವಾಸ ಅನುಭವಿಸಿದ್ದಳು. ಈ ಘಟನೆ ಚೈತ್ರಾ ಅವರ ಸಾರ್ವಜನಿಕ ಜೀವನಕ್ಕೆ ದೊಡ್ಡ ಹೊಡೆತವನ್ನು ನೀಡಿದ್ದರೂ, ಅವರು ಮತ್ತೊಮ್ಮೆ ಬಿಗ್ ಬಾಸ್ ವೇದಿಕೆಯ ಮೂಲಕ ಗಮನ ಸೆಳೆದಿದ್ದಾರೆ.
ಬಿಗ್ ಬಾಸ್ ನಂತರದ ಬೆಳವಣಿಗೆ
ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಚೈತ್ರಾ ಕುಂದಾಪುರ ಮಾಧ್ಯಮ ಸಂದರ್ಶನಗಳಲ್ಲಿ ತಮ್ಮ ವಿರುದ್ಧದ ಆರೋಪಗಳಿಗೆ ಸ್ಪಷ್ಟನೆ ನೀಡಲು ಮುಂದಾದರು. ಅವರು ಬಿಗ್ ಬಾಸ್ ವೇದಿಕೆಯನ್ನು “ಪುನರ್ಜನ್ಮ” ಎಂದು ಕರೆದರು ಮತ್ತು ಹೊಸ ಶಕ್ತಿಯೊಂದಿಗೆ ತಮ್ಮ ಸಾರ್ವಜನಿಕ ಜೀವನವನ್ನು ಮುಂದುವರಿಸುವ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಆರೋಪದ ವಿರುದ್ಧ ಚೈತ್ರಾ ಸ್ಪಷ್ಟನೆ
5 ಕೋಟಿ ವಂಚನೆ ಪ್ರಕರಣದ ಕುರಿತು ಚರ್ಚೆ ನಡೆಸುತ್ತಿರುವ ಚೈತ್ರಾ, ನ್ಯಾಯಾಲಯದಲ್ಲಿ ಆರೋಪ ಸುಳ್ಳು ಎಂದು ಸಾಬೀತು ಮಾಡುವ ವಿಶ್ವಾಸವಿದೆ. ನಾನೇನಾದರೂ ತಪ್ಪು ಮಾಡಿದ್ದರೆ ಸಮಾಜದ ಮುಂದೆ ತಲೆ ಎತ್ತುವ ಧೈರ್ಯ ಮಾಡುತ್ತಿರಲಿಲ್ಲ, ನನ್ನ ಮೇಲಿನ ಆರೋಪಗಳ ವಿರುದ್ಧ ಕಾನೂನು ಹೋರಾಟ ನಡೆಸುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾನೂನಿನಲ್ಲಿ ವಿಶ್ವಾಸ
ನ್ಯಾಯಾಲಯದ ತೀರ್ಪಿಗೆ ನನ್ನ ಸಹಮತವಿದೆ.ಕಾನೂನು ಪ್ರಕ್ರಿಯೆ ತಡವಾದರೂ ನನಗೆ ನ್ಯಾಯ ಸಿಗುವುದು ಖಚಿತ ಎಂದು ಚೈತ್ರಾ ಕುಂದಾಪುರ ಹೇಳಿದರು.