
ಬಜಗೋಳಿ : ಬಜಗೋಳಿ ದಿಡಿಂಬಿರಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವು ದಿನಾಂಕ 17/08/2025 ರಂದು ನಡೆಯಿತು.ಗೆಳೆಯರ ಬಳಗದ ಅಧ್ಯಕ್ಷರಾದ ಶಶಿಕಾಂತ್ ರವರು ಶ್ರೀ ಕೃಷ್ಣ ಜನ್ಮಾಷ್ಟಮಿಯ ಕಾರ್ಯಕ್ರಮ ಉದ್ಘಾಟನೆ ಮಾಡಿ , ಶ್ರೀ ಕೃಷ್ಣ ಜನ್ಮಾಷ್ಟಮಿಯ ಮಹತ್ವದ ಬಗ್ಗೆ ಪ್ರಾಸ್ತಾವಿಕವಾಗಿ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶೃತಿ ಡಿ ಅತಿಕಾರಿಯವರು ವಹಿಸಿ ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ಉಮೇಶ್ ರಾವ್ ಉದ್ಯಮಿಗಳು ಹೋಟೇಲ್ ಚಿರಾಗ್ , ಶ್ರೀ ಗಣೇಶ್ ಪೂಜಾರಿ, ಸುರೇಶ್ ಶೆಟ್ಟಿ, ಅನಿಲ್ ಎಸ್ ಪೂಜಾರಿ , ಸುಧಾಕರ ಶೆಟ್ಟಿ , ಶಿವಪ್ರಸಾದ್, ಸುರೇಶ್ ದೇವಾಡಿಗ , ಪ್ರಶಾಂತ್ ಕುಮಾರ್, ರಜತ್ ರಾಮ್ ಮೋಹನ್ , ಶ್ರೀಮತಿ ಲಕ್ಷ್ಮೀ , ಕರುಣಾಕರ ಶೆಟ್ಟಿ , ರಮಾಕಾಂತ್ ಶೆಟ್ಟಿ , ಆರಿಸ್ ಪಿ ಹಾಗೂ ಊರಿನ ಎಲ್ಲಾ ಸಭಿಕರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿ ಮುದ್ದು ಕೃಷ್ಣ ಸ್ಪರ್ಧೆ ಏರ್ಪಡಿಸಲಾಗಿತ್ತು. ಪುಟಾಣಿ ಮಕ್ಕಳ ವಿಭಾಗ ಮತ್ತು ಗ್ರಾಮಸ್ಥರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.