
ರಾಮ ನವಮಿ
ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ |
ರಘುನಾಥಾಯ ನಾಥಾಯ ಸೀತಾಯ: ಪತಯೇ ನಮ: ||
ರಾ ಎಂದರೆ ರಾಷ್ಟ್ರ, ಮಾ ಎಂದರೆ ಮಂಗಲ. ರಾಷ್ಟ್ರಕ್ಕೆ ಮಂಗಳವಾದ ರೂಪ ಅದು ರಾಮ. ರಾಮ ಬೇರಲ್ಲ ಭಾರತ ಬೇರಲ್ಲ. ಅಷ್ಟರ ಮಟ್ಟಿಗೆ ರಾಮ ರಾಷ್ಟ್ರವನ್ನು ವ್ಯಾಪಿಸಿದ್ದಾನೆ. ಇದಕ್ಕೆ ಬಲವಾದ ಕಾರಣವಿದೆ ಏನೆಂದರೆ ರಾಮ ನೈತಿಕತೆಯ ಸಾಕಾರ ಮೂರ್ತಿ. ಚಾರಿತ್ರ್ಯದ ಜ್ವಲಂತ ಸಾಕ್ಷಿ. ಸತ್ಯನಿಷ್ಠೆಯ ಧರ್ಮ ಮೂರ್ತಿ. ಇಡೀ ದೇಶದ ಅಸ್ತಿತ್ವಗಳೆಲ್ಲವೂ ಕೂಡ ರಾಮನಲ್ಲಿ ಇದ್ದವು.

ಆದ್ದರಿಂದ ರಾಮ ಈ ರಾಷ್ಟ್ರವನ್ನು ವ್ಯಾಪಿಸಿ ನಿಂತದ್ದು. ರಾವಣನ ಜನಬಲ ಧನ ಬಲ ಇದೆಲ್ಲವೂ ಕೂಡ ಏಕಾಂಗಿ ರಾಮನಲ್ಲಿ ಸೋತಿತು. ಏಕೆಂದರೆ ರಾಮನಿಗೆ ತನ್ನ ತನದ ಬಗ್ಗೆ ಚನಾದ ಅರಿವಿತ್ತು. ಆದ್ದರಿಂದ, ಭಾರತದಲ್ಲಿರಬೇಕಾವರಿಗೆ ಯೋಗ್ಯತೆ ಬೇಕಾದರೆ ರಾಮ ಆದರ್ಶವಾಗಬೇಕು. ಇವತ್ತು ರಾಮನವಮಿ. ರಾಮನ ಚಿಂತನೆಯೊಂದಿಗೆ ಈ ದಿನ ಸಾರ್ಥಕವಾಗಲಿ.
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ