spot_img

ಯುವ ಸಂಗಮ(ರಿ.) ಕೌಡೂರು ಆಶ್ರಯದಲ್ಲಿ ಆರೋಗ್ಯ ಶಿಬಿರ ಮತ್ತು ಪ್ರತಿಭಾ ಪುರಸ್ಕಾರ

Date:

spot_img

ಯುವ ಸಂಗಮ (ರಿ.) ಕೌಡೂರು ಇವರ ಆಶ್ರಯದಲ್ಲಿ ಹೃದಯ ತಪಾಸಣೆ (ಇ ಸಿ ಜಿ ), ಅರೋಗ್ಯ ತಪಾಸಣೆ, ಚರ್ಮರೋಗ ತಪಾಸಣಾ ಶಿಬಿರ ಮತ್ತು ಸ್ಥಳೀಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಕೌಡೂರು ಶ್ರೀ ಮಾರಿಯಮ್ಮ ದೇವಸ್ಥಾನದ ಸಭಾಭವನದಲ್ಲಿ ನೆರವೇರಿತು. ಕಾರ್ಯಕ್ರವನ್ನು ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲರಾದ ಡಾl ಮಂಜುನಾಥ್ ಎ ಕೋಟ್ಯಾನ್ ರವರು ಉದ್ಘಾಟಿಸಿದರು.

ಮುಖ್ಯ ಅಥಿತಿಗಳಾದ ಕಾರ್ಕಳ ಕ್ರಿಯೆಟಿವ್ ಶಿಕ್ಷಣ ಸಂಸ್ಥೆಯ ಸಹ ಸಂಸ್ಥಾಪಕರಾದ ಡಾI ಗಣನಾಥ ಶೆಟ್ಟಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಅರೋಗ್ಯ ತಪಾಸಣೆಯನ್ನು ಜಯದೇವ ಆಸ್ಪತ್ರೆ ಬೆಂಗಳೂರು, ಮಿತ್ರ ಆಸ್ಪತ್ರೆ ಉಡುಪಿ, ಹೈಟೆಕ್ ಆಸ್ಪತ್ರೆ ಉಡುಪಿ ಇಲ್ಲಿಯ ಖ್ಯಾತ ಹೃದಯ ತಜ್ಞರಾದ ಡಾ. ಅನೂಪ್ ಕೆ ಶೆಟ್ಟಿಯವರು, ಖ್ಯಾತ ಚರ್ಮ ರೋಗ ತಜ್ಞರು, ಇವತ್ತೂರು ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯಧಿಕಾರಿಯಾದ ಡಾ. ಯಶೋದಾರ್, ಉಡುಪಿಯ ಆದರ್ಶ ಆಸ್ಪತ್ರೆಯ ಖ್ಯಾತ ಚರ್ಮರೋಗ ತಜ್ಞರಾದ ಡಾ. ಅರುಣ್ ಶೆಟ್ಟಿ ಕೆ , ಉದ್ಯಾವರ SDM ಆಸ್ಪತ್ರೆಯ ವೈದ್ಯೆ ಡಾ. ಅನ್ಲಾ ಕೆ ಶೆಟ್ಟಿ, ಬೈಲೂರು ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯಧಿಕಾರಿಯವರಾದ ಡಾ. ಮಹಾಂತ್ ಹೆಗ್ಡೆಯವರು ನಡೆಸಿಕೊಟ್ಟರು.

ಉಡುಪಿಯ ನ್ಯೂ ನೇಸನಲ್ ಡೈಗ್ನಸ್ಟಿಕ್ ಸೆಂಟರ್ ನ ಪೂರ್ಣ ಕಾಮತ್ ಅವರ ತಂಡದಿಂದ ಸಾರ್ವಜನಿಕರಿಗೆ ECG, ಮಧುಮೇಹ ಪರೀಕ್ಷೆ ನಡೆಯಿತು. ಶಿಬಿರದಲ್ಲಿ ಒಟ್ಟು 316 ಮಂದಿ ಮದುಮೇಹ ಪರೀಕ್ಷೆ ಮತ್ತು 226 ಮಂದಿ ಇ ಸಿ ಜಿ ಪರೀಕ್ಷೆ, 114 ಮಂದಿ ಚರ್ಮರೋಗ ಪರೀಕ್ಷೆ ಮಾಡಿದರು.

ಈ ಸಂದರ್ಭದಲ್ಲಿ ಸಂಘದ ಗೌರವ ಸಲಹೆಗಾರಾರಾದ ಕೆ ಸುಧೀರ್ ಹೆಗ್ಡೆ ಹಾಗೂ ಪಧಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಸದಸ್ಯರಾದ ಸುಮಿತ್ ಶೆಟ್ಟಿ ಪ್ರಸ್ತಾವನೆಗೈದರು. ಅಧ್ಯಕ್ಷರಾದ ಪ್ರಸನ್ನ ಶೆಟ್ಟಿಯವರು ಸ್ವಾಗತಿಸಿದರು. ಪ್ರಜ್ವಲ್ ಭಂಡಾರಿ ಕಾರ್ಯಕ್ರಮವನ್ನು ನಿರೂಪಿಸಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ರಾಷ್ಟ್ರೀಯ ಧ್ವಜ ಸ್ವೀಕಾರ ದಿನ

ಭಾರತವು ಸ್ವಾತಂತ್ರ್ಯ ಪಡೆಯುವ ಕೆಲವೇ ದಿನಗಳ ಮೊದಲು, 1947ರ ಜುಲೈ 22 ರಂದು, ಭಾರತದ ಸಂವಿಧಾನ ಸಭೆಯು ತ್ರಿವರ್ಣ ಧ್ವಜವನ್ನು ನಮ್ಮ ರಾಷ್ಟ್ರೀಯ ಧ್ವಜವಾಗಿ ಅಂಗೀಕರಿಸಿತು

ಜಡ್ಡಿನಂಗಡಿ ಬಳಿ ವ್ಯಕಿಯೋರ್ವರ ಆಕಸ್ಮಿಕ ಸಾವು

ನೀರೆ ಜಡ್ಡಿನಂಗಡಿ ಬಸ್ಸು ನಿಲ್ದಾಣದ ಬಳಿ ವ್ಯಕ್ತಿಯೋರ್ವರು ಆಕಸ್ಮಿಕವಾಗಿ ಮೃತ ಪಟ್ಟ ಘಟನೆ ವರದಿಯಾಗಿದೆ.

ಮೊಣಕೈ ಕಪ್ಪಾಗಲು ಕಾರಣವೇನು? ಸರಳ ಮನೆಮದ್ದಿನಿಂದ ಕಲೆ ಮಾಯವಾಗಿಸಲು ಇಲ್ಲಿದೆ ಪರಿಹಾರ!

ಕಪ್ಪು ಮೊಣಕೈಗಳನ್ನು ನಿವಾರಿಸಲು ಕಡಲೆ ಹಿಟ್ಟು ಮತ್ತು ನಿಂಬೆ ಹಣ್ಣಿನ ಮಿಶ್ರಣ ಅತ್ಯಂತ ಪರಿಣಾಮಕಾರಿ.

ಚೀನಾದಿಂದ ಕ್ರಾಂತಿಕಾರಿ ‘ಪರಮಾಣು ಬ್ಯಾಟರಿ’: 50 ವರ್ಷಗಳ ಕಾಲ ಚಾರ್ಜ್‌ರಹಿತ ವಿದ್ಯುತ್ ಸರಬರಾಜು!

ಚೀನಾದ ನವೋದ್ಯಮವೊಂದು ಹೊಸ ಪರಮಾಣು ಬ್ಯಾಟರಿಯನ್ನು ಅನಾವರಣಗೊಳಿಸಿದ್ದು, ಇದು ಚಾರ್ಜಿಂಗ್ ಅಥವಾ ನಿರ್ವಹಣೆಯ ಅಗತ್ಯವಿಲ್ಲದೆ 50 ವರ್ಷಗಳ ಕಾಲ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿಕೊಂಡಿದೆ.