
ಉಡುಪಿಯ ಮರ್ಣೆ ಗ್ರಾಮದ ಶ್ರೀಧರ ಆಚಾರ್ಯ ಮತ್ತು ಲಲಿತ ದಂಪತಿಗಳ ಪುತ್ರರಾದ ಕಲಾವಿದ ಮಹೇಶ್ ಮರ್ಣೆ ಯವರು ಇತ್ತೀಚಿಗೆ ಎರಡು ಗಂಟೆ 30 ನಿಮಿಷಗಳ ಕಾಲ ಉರಿ ಬಿಸಿಲಿನಲ್ಲಿ ಕುಳಿತು ಸೂರ್ಯನ ಕಿರಣಗಳಿಂದ ಮರದ ಹಲಗೆಯಲ್ಲಿ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರ ಭಾವಚಿತ್ರವನ್ನು ರಚಿಸಿದ್ದರು ಈ ಕಲಾಕೃತಿಯನ್ನು ರಾಷ್ಟ್ರಪತಿಗಳು ಮೆಚ್ಚಿ ಸಂದೇಶ ಕಳುಹಿಸಿದ್ದರು. ಇದೀಗ ಈ ಕಲಾಕೃತಿಯು ಕಿಂಗ್ಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗೆ ಸೇರ್ಪಡೆಗೊಂಡಿದೆ. ಮಹೇಶ್ ಮರ್ಣೆ ಅವರ ಕಲಾಕೃತಿಯು 3ನೇ ದಾಖಲೆಗೆ ಸೇರ್ಪಡೆಗೊಳ್ಳುವುದರ ಮೂಲಕ ತಮ್ಮ ಕಲಾ ಸಾಧನೆಯಲ್ಲಿ ಮತ್ತೊಂದು ಮೈಲುಗಲ್ಲು ಸಾಧಿಸಿದ್ದಾರೆ.